ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡಿರುವ ಬ್ರಿಕ್ಸ್ ರಾಷ್ಟ್ರಗಳ 14 ನೇ ಶೃಂಗಸಭೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಬೀಜಿಂಗ್ನಲ್ಲಿ ಜೂನ್ 23 ರಂದು ವೀಡಿಯೊ ಲಿಂಕ್ ಮೂಲಕ ಆಯೋಜಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಬೀಜಿಂಗ್ನಲ್ಲಿ ಪ್ರಕಟಿಸಿದೆ.
ಚೀನಾದಲ್ಲಿ ಪುರಾತತ್ವ ಶಾಸ್ತ್ರಜ್ಞರು ದೊಡ್ಡ ಯಶಸ್ಸನ್ನು ಕಂಡಿದ್ದಾರೆ. 2 ವರ್ಷಗಳ ಉತ್ಖನನದ ನಂತರ, ಈ ತಂಡವು ಸಿಚುವಾನ್ ಪ್ರಾಂತ್ಯದಲ್ಲಿರುವ ಸ್ಯಾಂಕ್ಸಿಂಗ್ಡುಯಿ ಅವಶೇಷಗಳಲ್ಲಿ ಸಾವಿರಾರು ವರ್ಷಗಳ ಹಳೆಯ ನಿಧಿಯನ್ನು ಕಂಡುಹಿಡಿದಿದೆ. ಈ ನಿಧಿಯು ಶು ಸಾಮ್ರಾಜ್ಯಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.
ಯುರೋಪಿಯನ್ ಯೂನಿಯನ್ ರಷ್ಯಾದ ತೈಲವನ್ನು ನಿಷೇಧಿಸಿದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಚೀನಾ ಮತ್ತು ಭಾರತದ ಮೇಲೆ ಇನ್ನೂ ಹೆಚ್ಚಿನದನ್ನು ಪರಿಗಣಿಸಬೇಕಾಗಬಹುದು ಎನ್ನಲಾಗಿದೆ. ಯುರೋಪಿಯನ್ ಒಕ್ಕೂಟದ ನಾಯಕರು ಸಮುದ್ರದ ಮೇಲೆ ಸಾಗಿಸಲಾದ ರಷ್ಯಾದ ಕಚ್ಚಾ ತೈಲದ ಮೇಲೆ ಭಾಗಶಃ ನಿರ್ಬಂಧವನ್ನು ಮುಂದುವರಿಸಲು ಒಪ್ಪಿಕೊಂಡಿದ್ದರಿಂದ, ಪುಟಿನ್ ರಫ್ತು ಆದಾಯದಲ್ಲಿ ವರ್ಷಕ್ಕೆ $ 10 ಶತಕೋಟಿ ನಷ್ಟು ವೆಚ್ಚವಾಗುತ್ತದೆ ಎನ್ನಲಾಗಿದೆ.
ಅಮೇರಿಕಾ (ಯುಎಸ್ಎ) 2021-22ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತದ ಅಗ್ರ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಇದು ಈಗ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಳಪಡಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
ಚೀನಾದಲ್ಲಿ ಕೊರೊನಾ ವೈರಸ್: ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಾಕ್ಡೌನ್ ಪರಿಣಾಮ ಇಡೀ ಜಗತ್ತೇ ತತ್ತರಿಸುವಂತಾಗಿದೆ. ಪ್ರಪಂಚದಾದ್ಯಂತದ ದೇಶಗಳಲ್ಲಿ ಸರಕುಗಳ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ.
ಏರ್ಲೈನ್ಸ್ನ ಹೇಳಿಕೆಯ ಪ್ರಕಾರ, ಎಲ್ಲಾ 113 ಪ್ರಯಾಣಿಕರು ಮತ್ತು 9 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಕೇವಲ ಸಣ್ಣ ಗಾಯಗಲಾಗಿವೆ ಎನ್ನಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ 40 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
China Coronavirus Updates: ಕರೋನಾ ಮಹಾಮಾರಿಯನ್ನು ಜಗತ್ತಿಗೆ ಉಡುಗೊರೆಯಾಗಿ ನೀಡಿದ ಚೀನಾ ಕಳೆದ ಎರಡು ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಹೆಸರಿನಲ್ಲಿ ಚೀನಾದಲ್ಲಿ ಬಳಸುತ್ತಿರುವ ವಿಧಾನವನ್ನು ಕಂಡರೆ ನಿಜಕ್ಕೂ ಶಾಕ್ ಆಗಲಿದೆ.
Indian Students Return to China: ಚೀನಾಗೆ ತೆರಳಲು ಬಯಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರಿ ನೆಮ್ಮೆದಿಯ ಸುದ್ದಿಯೊಂದು ಪ್ರಕಟವಾಗಿದೆ. ಇದರಿಂದ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ಅಧ್ಯಯನಕ್ಕಾಗಿ ಚೀನಾಕ್ಕೆ ತೆರಳಲು ಸಾಧ್ಯವಾಗಲಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಯುಜಿಸಿ ಎಚ್ಚರಿಕೆ: ಯುಜಿಸಿ ಮತ್ತು ಎಐಸಿಟಿಇ ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿವೆ. ಪಾಕಿಸ್ತಾನದ ಯಾವುದೇ ಸಂಸ್ಥೆಯಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ ಎಂದು ಸಂಸ್ಥೆಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
China Lockdown - ಚೀನಾದ (China) ಶಾಂಘೈನಲ್ಲಿ ಕೊರೊನಾ ಅವಧಿಯಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿತ್ತು. ಈ ಲಾಕ್ ಡೌನ್ ವಿಧಿಸಿದ ಒಂದು ವಾರದ ಬಳಿಕ ಜನರು ತಮ್ಮ ತಮ್ಮ ಕಿಟಕಿಗಳಿಂದ ಕಿರಚಾಡುತ್ತಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಕಾರ್ಯಕರ್ತರು, ಸೇನಾದಳ ಸೇರಿದಂತೆ ಸುಮಾರು 26 ಮಿಲಿಯನ್ ಜನರನ್ನು ಕೊರೊನಾ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿತ್ತು. ಅದರಂತೆ ಟೆಸ್ಟ್ ನಡೆಸಿದ ಬಳಿಕ 1,366 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ.
Brahmos Missile - ಭಾರತವನ್ನು ಇಬ್ಭಾಗಿಸುವ ಕನಸು ಕಾಣುತ್ತಿರುವ ಪಾಕಿಸ್ತಾನದ ಪಾಲಿಗೆ ನಿದ್ದೆಗೆಡಿಸುವ ಸುದ್ದಿಯೊಂದು ಪ್ರಕಟವಾಗಿದೆ. ಭಾರತ ಬುಧವಾರ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿ ತನ್ನ 'ಬಾಹುಬಲಿ' ಕ್ಷಿಪಣಿ (Missile) ಪರೀಕ್ಷೆಯನ್ನು ಕೈಗೊಂಡಿದೆ. ಈ ಕ್ಷಿಪಣಿ ಯಾವುದೇ ಸುಳಿವು ನೀಡದೆ ಪಾಕ್ ಹಾಗೂ ಚೀನಾವನ್ನು (China) ಪ್ರವೇಶಿಸಿ ತನ್ನ ನಿರ್ಧಿಷ್ಟ ಗುರಿಯನ್ನು ಹೊಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಶ್ರೀಲಂಕಾವು ಈಗ ಹಣಕಾಸಿನ ಕೊರತೆಯಿಂದಾಗಿ ಕಾಗದವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದಾಗಿ ಅದು ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನದ ಬಿಡಿಭಾಗಗಳ ಪೂರೈಕೆಗಾಗಿ, ರಷ್ಯಾ ಈಗ ಭಾರತ, ಟರ್ಕಿ ಮತ್ತು ಇತರ ದೇಶಗಳಿಂದ ನೆರವು ಪಡೆಯಲು ಯೋಜಿಸಿದೆ.ರಷ್ಯಾಕ್ಕೆ ವಿಮಾನದ ಭಾಗಗಳನ್ನು ಪೂರೈಸಲು ಚೀನಾ ನಿರಾಕರಿಸಿರುವ ಬೆನ್ನಲ್ಲೇ ಈಗ ರಷ್ಯಾ ಭಾರತದೆಡೆಗೆ ಮುಖ ಮಾಡಿದೆ ಎಂದು ಗ್ಲೋಬಲ್ ಡಿಫೆನ್ಸ್ ಕಾರ್ಪ್ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.