ಧ್ವಜವಿಲ್ಲದೆ ನಿಂತಿದ್ದ ಬೆಳ್ಳಿ ಗೆದ್ದ ಪಾಕ್ ಆಟಗಾರನಿಗೆ ತಿರಂಗಾ ಬಳಿ ನಿಲ್ಲುವಂತೆ ಹೇಳಿದ ನೀರಜ್ ಚೋಪ್ರಾ! ಮುಂದಾಗಿದ್ದೇನು?

Neeraj Chopra and Arshad Nadeem News: ನೀರಜ್ ಮತ್ತು ನದೀಮ್ ಉತ್ತಮ ಸ್ನೇಹಿತರು. ಇವರಿಬ್ಬರು ಈ ಪಂದ್ಯದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗೆದ್ದಿದ್ದಾರೆ. ಆಟದ ಕೊನೆಯಲ್ಲಿ, ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ಫೋಟೋಗೆ ಫೋಸ್ ಕೊಡುತ್ತಿದ್ದರು.

Written by - Bhavishya Shetty | Last Updated : Aug 28, 2023, 03:29 PM IST
    • ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನ ಅರ್ಷದ್ ನದೀಮ್ ವಿಡಿಯೋ ವೈರಲ್
    • ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ಫೋಟೋಗೆ ಫೋಸ್ ಕೊಡುತ್ತಿದ್ದರು
    • ನೀರಜ್, ನದೀಮ್ ಅವರನ್ನು ಕರೆದು ಭಾರತದ ಧ್ವಜದ ಒಟ್ಟಿಗೆ ನಿಲ್ಲುವಂತೆ ಕೋರಿದ್ದಾರೆ
ಧ್ವಜವಿಲ್ಲದೆ ನಿಂತಿದ್ದ ಬೆಳ್ಳಿ ಗೆದ್ದ ಪಾಕ್ ಆಟಗಾರನಿಗೆ ತಿರಂಗಾ ಬಳಿ ನಿಲ್ಲುವಂತೆ ಹೇಳಿದ ನೀರಜ್ ಚೋಪ್ರಾ! ಮುಂದಾಗಿದ್ದೇನು?  title=
Neeraj Chopra

Neeraj Chopra and Arshad Nadeem: ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನ ಅರ್ಷದ್ ನದೀಮ್ ಇಬ್ಬರೂ ತಮ್ಮ ತಮ್ಮ ದೇಶಗಳಿಗಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನೀರಜ್ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಈ ಪಂದ್ಯಾವಳಿಯಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ನದೀಮ್ ಪಾತ್ರರಾಗಿದ್ದಾರೆ. ಈ ಪಂದ್ಯದ ಇತಿಹಾಸದ ಹೊರತಾಗಿ ಈ ಇಬ್ಬರು ಆಟಗಾರರು ಸಹೋದರತ್ವ ಮೆರೆದಿದ್ದು, ವಿಶ್ವದ ಗಮನ ಸೆಳೆದಿದೆ.

ಇದನ್ನೂ ಓದಿ: WACಯಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ 88.17 ಮೀಟರ್ ದೂರ ಜಾವೆಲಿನ್ ಎಸೆದ ವಿಡಿಯೋ

ಅದು ಕ್ರಿಕೆಟ್ ಮೈದಾನವಾಗಲಿ ಅಥವಾ ಹಾಕಿ-ಫುಟ್ಬಾಲ್ ಆಗಿರಲಿ, ಭಾರತ-ಪಾಕಿಸ್ತಾನ ಆಟ ಇದೆ ಎಂದರೆ ಅಲ್ಲಿ ಉತ್ಸಾಹ ಕೊಂಚ ಹೆಚ್ಚೇ ಇರುತ್ತದೆ. ಆದರೆ ಹಂಗೇರಿಯ ಬುಡಾಪೆಸ್ಟ್‌’ನ ಕ್ರೀಡಾಂಗಣ ಈ ವಿಚಾರದಿಂದ ಕೊಂಚ ದೂರವೇ ಇತ್ತು. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ವೈರಿಗಳೆಂದು ಹೇಳುತ್ತಿದ್ದ ಉಭಯ ದೇಶಗಳ ಆಟಗಾರರು ಇಲ್ಲಿ ಭ್ರಾತೃತ್ವ ಮೆರೆದಿದ್ದು ಶ್ಲಾಘನೀಯ ಸಂಗತಿ.

ಇದನ್ನೂ ಓದಿ: Yo-Yo Testನಲ್ಲಿ ಫೇಲ್: ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಆಯ್ಕೆಯಾಗಿದ್ದ ಟೀಂ ಇಂಡಿಯಾದ 5 ಆಟಗಾರರು ಔಟ್!

ನೀರಜ್ ಮತ್ತು ನದೀಮ್ ಉತ್ತಮ ಸ್ನೇಹಿತರು. ಇವರಿಬ್ಬರು ಈ ಪಂದ್ಯದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗೆದ್ದಿದ್ದಾರೆ. ಆಟದ ಕೊನೆಯಲ್ಲಿ, ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ಫೋಟೋಗೆ ಫೋಸ್ ಕೊಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಪಾಕಿಸ್ತಾನದ ನದೀಮ್ ಕೈಯಲ್ಲಿ ಪಾಕ್ ಧ್ವಜ ಇರಲಿಲ್ಲ. ಆಗ ನೀರಜ್, ನದೀಮ್ ಅವರನ್ನು ಕರೆದು ಭಾರತದ ಧ್ವಜದ ಒಟ್ಟಿಗೆ ನಿಲ್ಲುವಂತೆ ಕೋರಿದ್ದಾರೆ. ಈ ಫೋಟೋ ಜೊತೆ ನೀರಜ್ ನಡತೆಯನ್ನು ಜಗತ್ತೇ ಕೊಂಡಾಡುತ್ತಿದೆ.  

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News