“ಇದು ಕೊನೆಯ ಬಾರಿ…”- ಪಂದ್ಯ ಆರಂಭಕ್ಕೂ ಮುನ್ನ ಧೋನಿ ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಶಾಕಿಂಗ್ ಹೇಳಿಕೆ

Virat Kohli statement about MS Dhoni retirement: ಬೆಂಗಳೂರಿನಲ್ಲಿ ಆರ್‌’ಸಿಬಿ ತಂಡವು ಸಿಎಸ್‌’ಕೆಯನ್ನು ಎದುರಿಸುತ್ತಿದ್ದು, ಭಾರತೀಯ ಕ್ರಿಕೆಟ್‌’ನ ಇಬ್ಬರು ಶ್ರೇಷ್ಠರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ವೇದಿಕೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ

Written by - Bhavishya Shetty | Last Updated : May 18, 2024, 05:38 PM IST
    • ಆರ್‌ ಸಿ ಬಿ ಮತ್ತು ಸಿ ಎಸ್‌ ಕೆ ಮಧ್ಯೆ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹತ್ವದ ಪಂದ್ಯ
    • ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ವೇದಿಕೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿ
    • ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ
“ಇದು ಕೊನೆಯ ಬಾರಿ…”- ಪಂದ್ಯ ಆರಂಭಕ್ಕೂ ಮುನ್ನ ಧೋನಿ ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಶಾಕಿಂಗ್ ಹೇಳಿಕೆ  title=
virat kohli retirement

Virat Kohli statement about MS Dhoni retirement: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ ಸಿ ಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿ ಎಸ್‌ ಕೆ) ಇಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹತ್ವದ ಪಂದ್ಯವನ್ನಾಡಲಿದ್ದು, ಐಪಿಎಲ್ 2024 ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡಲಿವೆ. CSK 13 ಪಂದ್ಯಗಳಿಂದ 14 ಅಂಕ ಗಳಿಸಿ 4 ನೇ ಸ್ಥಾನದಲ್ಲಿದ್ದರೆ, RCB 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಇದನ್ನೂ ಓದಿ: RCB ನಾಯಕ ಫಾಫ್ ಡುಪ್ಲೆಸಿಸ್ ಪತ್ನಿ ಯಾರು ಗೊತ್ತಾ? ನಟಿ ಅನುಷ್ಕಾ ಶರ್ಮಾಗಿಂತಲೂ ಅಂದದಲ್ಲಿ ಒಂದು ಹೆಜ್ಜೆ ಮುಂದೆಯೇ ಈ ಅಪ್ಸರೆ

ಇಂದು ಬೆಂಗಳೂರಿನಲ್ಲಿ ಆರ್‌’ಸಿಬಿ ತಂಡವು ಸಿಎಸ್‌’ಕೆಯನ್ನು ಎದುರಿಸುತ್ತಿದ್ದು, ಭಾರತೀಯ ಕ್ರಿಕೆಟ್‌’ನ ಇಬ್ಬರು ಶ್ರೇಷ್ಠರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ವೇದಿಕೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ.

ಅಂದಹಾಗೆ ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಕೊಹ್ಲಿಯೂ ಹೇಳಿಕೆಯೊಂದನ್ನು ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

"ಮಹಿ ಭಾಯ್ ಮತ್ತು ನಾನು ಮತ್ತೆ ಆಡುತ್ತೇವೆ. ಬಹುಶಃ ಕೊನೆಯ ಬಾರಿಗೆ… ಯಾರಿಗೆ ಗೊತ್ತು! ಇದು ಅಭಿಮಾನಿಗಳಿಗೆ ಉತ್ತಮ ಕ್ಷಣ. ಅನೇಕ ವರ್ಷ ಟೀಂ ಇಂಡಿಯಾ ಪರ ಒಟ್ಟಾಗಿ ಆಡಿದ್ದೇವೆ. ಆ ಸಂದರ್ಭದಲ್ಲಿ ಎಷ್ಟು ಅದ್ಭುತ ಫಿನಿಶಿಂಗ್ ಮಾಡಿ, ಗೆಲುವು ತಂದುಕೊಟ್ಟಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ" ಎಂದು ಜಿಯೋ ಸಿನಿಮಾದ ಇನ್‌ಸೈಡ್ ಔಟ್ ಶೋನಲ್ಲಿ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:  ಟೀಂ ಇಂಡಿಯಾಗೆ ಕೊಹ್ಲಿ ಸೆಲೆಕ್ಟ್ ಆಗಲು ಕಾರಣ ಈ ಇಬ್ಬರು ಸ್ಟಾರ್ ಕ್ರಿಕೆಟಿಗರು! ಅಂದು ಕೊಹ್ಲಿ ಹೆಸರು ಸೂಚಿಸಿದ ಆ ಶಕ್ತಿ ಯಾರು ಗೊತ್ತಾ?

ಇನ್ನು ಒಂದು ವೇಳೆ CSK ಪ್ಲೇ ಆಫ್ ಪ್ರವೇಶಿಸಿದರೆ, ಧೋನಿ ಇನ್ನೂ ಎರಡು ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆಯುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News