Ravindra Jadeja : ಟೀಂ ಇಂಡಿಯಾಗೆ ಭಾರಿ ಹಿನ್ನಡೆ : ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಔಟ್

ಬಲ ಮೊಣಕಾಲಿನ ಗಾಯದಿಂದಾಗಿ ಜಡೇಜಾ ಈ ಟೂರ್ನಿಯಿಂದ ಔಟ್ ಆಗಿದ್ದಾರೆ.

Written by - Channabasava A Kashinakunti | Last Updated : Sep 3, 2022, 08:16 PM IST
  • ಟಿ20 ವಿಶ್ವಕಪ್‌ನಿಂದ ಹೊರಗುಳಿದ ಆಲ್ ರೌಂಡರ್ ರವೀಂದ್ರ ಜಡೇಜಾ
  • ಬಲ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಜಡೇಜಾ
  • ಬೆಂಗಳೂರಿನ ಎನ್‌ಸಿಎಗೆ ಹೋಗಬೇಕಾಗಿದೆ ಜಡೇಜಾ
Ravindra Jadeja : ಟೀಂ ಇಂಡಿಯಾಗೆ ಭಾರಿ ಹಿನ್ನಡೆ : ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಔಟ್ title=

Indian Squad for T20 World Cup-2022 : ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಬಲ ಮೊಣಕಾಲಿನ ಗಾಯದಿಂದಾಗಿ ಜಡೇಜಾ ಈ ಟೂರ್ನಿಯಿಂದ ಔಟ್ ಆಗಿದ್ದಾರೆ. ಹೀಗಾಗಿ, ದೀರ್ಘಕಾಲದವರೆಗೆ ಮೈದಾನದಿಂದ ಹೊರಗುಳಿಯಬೇಕಾಗಿದೆ. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

ಬಲ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಜಡೇಜಾ

ರವೀಂದ್ರ ಜಡೇಜಾ ಗಾಯಗೊಂಡಿರುವುದು ಅವರಿಗೆ ಮತ್ತು ಅಭಿಮಾನಿಗಳಿಗೆ ಮಾತ್ರವಲ್ಲದೆ ಆಯ್ಕೆದಾರರಿಗೂ ಚಿಂತೆಯಾಗಿದೆ. ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಮುಂದಿನ ವಾರ ನಡೆಯಲಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ರವೀಂದ್ರ ಜಡೇಜಾಗೆ ಅವಕಾಶ ಸಿಗದಿರುವುದು ಖಚಿತವಾಗಿದೆ. ಕ್ರಿಕ್‌ಇನ್ಫೋ ವರದಿ ಪ್ರಕಾರ, ಜಡೇಜಾ ಟಿ20 ವಿಶ್ವಕಪ್‌ನಲ್ಲಿ ಆಡುವುದು ಸಾಧ್ಯವಿಲ್ಲ.

ಇದನ್ನೂ ಓದಿ : IND vs PAK : ಪಂದ್ಯದ ಮೊದಲೆ ಪಾಕ್ ಟೀಂಗೆ ಬಿಗ್ ಶಾಕ್ : ತಂಡದಿಂದ ಈ ವೇಗದ ಬೌಲರ್ ಔಟ್

ಬೆಂಗಳೂರಿನ ಎನ್‌ಸಿಎಗೆ ಹೋಗಬೇಕಾಗಿದೆ ಜಡೇಜಾ 

33 ವರ್ಷದ ಆಲ್‌ರೌಂಡರ್ ರವೀಂದ್ರ ಜಡೇಜಾ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಸೋಸಿಯೇಷನ್(ಎನ್‌ಸಿಎ) ಗೆ ಹೋಗಬೇಕಾಗಿದೆ ಎಂದು ಬಿಸಿಸಿಐ ಮೂಲಗಳು ಇನ್‌ಸೈಡ್ ಸ್ಪೋರ್ಟ್‌ಗೆ ತಿಳಿಸಿದ್ದು, 'ಜಡೇಜಾಗೆ ಮೊಣಕಾಲು ಗಾಯವಾಗಿದೆ. ಇದರಿಂದ ಪದೇ ಪದೇ ತೊಂದರೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಈ  ಗಾಯವು ಟಿ20 ವಿಶ್ವಕಪ್‌ಗೂ ಮೊದಲು ಅವರ ಲಭ್ಯತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ. ಹೀಗಾಗಿ, ಜಡೇಜಾ ಎನ್‌ಸಿಎಗೆ ಹೋಗಬೇಕಾಗುತ್ತದೆ.

ಇದನ್ನೂ ಓದಿ : Video : IND vs Pak ಪಂದ್ಯಕ್ಕೂ ಮುನ್ನ ವಿಶೇಷ ತಯಾರಿ ನಡೆಸಿದ ವಿರಾಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News