Pakistan:“ನನ್ನ ಕೈಯಲ್ಲಿ ಬಟ್ಟೆ, ಬೂಟು ಸ್ವಚ್ಚಗೊಳಿಸುತ್ತಿದ್ದ, ಮಸಾಜ್ ಮಾಡಿಸಿಕೊಳ್ಳುತ್ತಿದ್ದ”: ಕ್ರಿಕೆಟಿಗನ ಗಂಭೀರ ಆರೋಪ

Wasim Akram Allegation: ಸ್ವಿಂಗ್‌ನ ಸುಲ್ತಾನ್ ಆಗಿದ್ದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ, ಅವರ ಮಾಜಿ ಸಹ ಆಟಗಾರ ಸಲೀಂ ಮಲಿಕ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನನ್ನನ್ನು ಸೇವಕರಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

Written by - Bhavishya Shetty | Last Updated : Nov 29, 2022, 09:00 AM IST
    • ತಂಡದಲ್ಲಿ ತನ್ನನ್ನು ಸೇವಕನಂತೆ ನಡೆಸಿಕೊಳ್ಳಲಾಗಿದೆ
    • ಮಸಾಜ್ ಮಾಡಿಸಿಕೊಳ್ಳುತ್ತಿದ್ದರು, ಅವರ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುತ್ತಿದ್ದರು
    • ಸಲೀಂ ಮಲಿಕ್ ವಿರುದ್ಧ ಗಂಭೀರ ಆರೋಪ ಮಾಡಿದ ವಾಸಿಂ ಅಕ್ರಂ
Pakistan:“ನನ್ನ ಕೈಯಲ್ಲಿ ಬಟ್ಟೆ, ಬೂಟು ಸ್ವಚ್ಚಗೊಳಿಸುತ್ತಿದ್ದ, ಮಸಾಜ್ ಮಾಡಿಸಿಕೊಳ್ಳುತ್ತಿದ್ದ”: ಕ್ರಿಕೆಟಿಗನ ಗಂಭೀರ ಆರೋಪ title=
Wasim Akram

Wasim Akram Allegation:  ಪಾಕಿಸ್ತಾನಿ ಕ್ರಿಕೆಟಿಗರು ತಮ್ಮ ಹಿಂದಿನ ಕೆಲವು ವಿವಾದಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪಾಕಿಸ್ತಾನದ ಹಿರಿಯ ಕ್ರಿಕೆಟಿಗನೊಬ್ಬ ಪಾಕಿಸ್ತಾನ ತಂಡದಲ್ಲಿ ತನ್ನನ್ನು ಸೇವಕನಂತೆ ನಡೆಸಿಕೊಳ್ಳಲಾಗಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಸಾಜ್ ಮಾಡಿಸಿಕೊಳ್ಳುತ್ತಿದ್ದರು, ಅವರ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಈ ಅನುಭವಿ ಆಟಗಾರ ಹೇಳಿಕೊಂಡಿದ್ದಾನೆ. ಪಾಕಿಸ್ತಾನದ ಮಾಜಿ ಅನುಭವಿ ವೇಗದ ಬೌಲರ್ ವಾಸಿಂ ಅಕ್ರಮ್ ಅವರು ತಮ್ಮ ಆತ್ಮಕಥೆ ಸುಲ್ತಾನ್: ಎ ಮೆಮೊಯಿರ್‌ನಲ್ಲಿ ಅನೇಕ ಗಂಭೀರ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: IND vs BAN : ಬಾಂಗ್ಲಾದೇಶ ಪ್ರವಾಸಕ್ಕೂ ಮುನ್ನ ಮಹತ್ವದ ನಿರ್ಧಾರ ಕೈಗೊಂಡ BCCI

ಸ್ವಿಂಗ್‌ನ ಸುಲ್ತಾನ್ ಆಗಿದ್ದ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ, ಅವರ ಮಾಜಿ ಸಹ ಆಟಗಾರ ಸಲೀಂ ಮಲಿಕ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ನನ್ನನ್ನು ಸೇವಕರಂತೆ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ವಾಸಿಂ ಅಕ್ರಮ್ ತನ್ನ ಆತ್ಮಚರಿತ್ರೆ ಸುಲ್ತಾನ್: ಎ ಮೆಮೊಯಿರ್‌ನಲ್ಲಿ ಪಾಕಿಸ್ತಾನಿ ತಂಡದಲ್ಲಿ ತನ್ನ ಹಿರಿಯ ಆಟಗಾರ ಸಲೀಂ ಮಲಿಕ್, ನನ್ನ ಕೈಯಲ್ಲಿ ಮಸಾಜ್ ಮಾಡಿಸಿಕೊಂಡು, ಅವರ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುತ್ತಿದ್ದರು ಎಂದು ಗಂಭೀತ ಆರೋಪ ಮಾಡಿದ್ದಾರೆ.

ಸ್ವಿಂಗ್‌ನ ಸುಲ್ತಾನ್ ವಾಸಿಂ ಅಕ್ರಮ್ 1984 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ವಾಸಿಂ ಅಕ್ರಮ್ ಪಾಕಿಸ್ತಾನ ಕ್ರಿಕೆಟ್ ತಂಡದ ಪರ 356 ಏಕದಿನ ಪಂದ್ಯಗಳಲ್ಲಿ 502 ವಿಕೆಟ್ ಪಡೆದಿದ್ದಾರೆ. ವಾಸಿಂ ಅಕ್ರಮ್ ಪಾಕಿಸ್ತಾನ ಪರ 104 ಟೆಸ್ಟ್ ಪಂದ್ಯಗಳಲ್ಲಿ 414 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ಬಳಸುವ Smartphone ಯಾವುದು ಗೊತ್ತಾ? ಇದರ ಬೆಲೆ ಎಷ್ಟು?

ಸಲೀಂ ಮಲಿಕ್ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದ. ಮಸಾಜ್ ಮಾಡಲು ಹೇಳುತ್ತಿದ್ದರು. ಅಷ್ಟೇ ಅಲ್ಲ ಅವರ ಬಟ್ಟೆ ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಲು ನನಗೆ ಆದೇಶಿಸುತ್ತಿದ್ದರು” ಎಂದು ಹೇಳಿದ್ದಾರೆ. ಆದರೆ ವಾಸಿಂ ಅಕ್ರಮ್ ಆರೋಪವನ್ನು ತಳ್ಳಿಹಾಕಿದ ಸಲೀಂ ಮಲಿಕ್, ಅವರ ಪುಸ್ತಕದ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾನೆ ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News