Asia Cup 2022: ಮತೊಮ್ಮೆ ಭಾರತ V/S ಪಾಕಿಸ್ತಾನ ಮುಖಾಮುಖಿ! ಸೂಪರ್-4ರ ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತ ಸೆ.4ರಂದು ಪಾಕಿಸ್ತಾನ ವಿರುದ್ಧ, ಸೆ.6ರಂದು ಶ್ರೀಲಂಕಾ ವಿರುದ್ಧ ಹಾಗೂ ಸೆ.8ರಂದು ಅಫ್ಘಾನಿಸ್ಥಾನ ವಿರುದ್ಧ ಸೆಣಸಾಟ ನಡೆಯಲಿದೆ.

Written by - Puttaraj K Alur | Last Updated : Sep 3, 2022, 12:41 PM IST
  • ಇಂದಿನ ಶ್ರೀಲಂಕಾ V/s ಅಫ್ಘಾನಿಸ್ಥಾನ ಪಂದ್ಯದ ಮೂಲಕ ಸೂಪರ್-4 ಆರಂಭ
  • ನಾಳೆ ಮತ್ತೆ ಮುಖಾಮುಖಿಯಾಗುತ್ತಿವೆ ಟೀ ಇಂಡಿಯಾ ಮತ್ತು ಪಾಕಿಸ್ತಾನ
  • ಸೂಪರ್-4ರಲ್ಲಿ ಪ್ರತಿಯೊಂದು ತಂಡವು 3 ಪಂದ್ಯಗಳನ್ನು ಆಡಬೇಕಿದೆ
Asia Cup 2022: ಮತೊಮ್ಮೆ ಭಾರತ V/S ಪಾಕಿಸ್ತಾನ ಮುಖಾಮುಖಿ! ಸೂಪರ್-4ರ ಸಂಪೂರ್ಣ ಮಾಹಿತಿ ಇಲ್ಲಿದೆ title=
ನಾಳೆ ಭಾರತ V/s ಪಾಕಿಸ್ತಾನ

ನವದೆಹಲಿ: ಏಷ್ಯಾಕಪ್ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ 155 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ 4ನೇ ತಂಡವಾಗಿ ಸೂಪರ್-4ಕ್ಕೆ ಎಂಟ್ರಿ ಕೊಟ್ಟಿದೆ. ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನಕ್ಕೆ ಈ ಪಂದ್ಯದ ಗೆಲುವು ತುಂಬಾ ಮುಖ್ಯವಾಗಿತ್ತು.

ಹಾಂಗ್ ಕಾಂಗ್ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ಇದೀಗ ಭಾನುವಾರ ಅಂದರೆ ನಾಳೆ ಟೀಂ ಇಂಡಿಯಾ ವಿರುದ್ಧ ಮತ್ತೊಮ್ಮೆ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಗೆಲುವು ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಮೂಡಿದೆ. ಟಿ-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿರುವ ಭಾರತದ ವಿರುದ್ಧ ಪಾಕ್ ಗೆಲುವು ಸಾಧಿಸುತ್ತಾ? ಅಥವಾ ಮತ್ತೆ ಸೋಲು ಕಾಣುತ್ತಾ..? ಅಂತಾ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Legends League Cricket 2022 : ಲೆಜೆಂಡ್ಸ್ ಲೀಗ್ ಈ ಎರಡು ಟೀಂಗಳ ಕ್ಯಾಪ್ಟನ್ ಆಗಿ ಇರ್ಫಾನ್-ಹರ್ಭಜನ್!

ಸೂಪರ್-4ರ ಪಂದ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ದಿನಾಂಕ

ಪಂದ್ಯ ಸ್ಥಳ ಸಮಯ

03-09-2022

ಶ್ರೀಲಂಕಾ V/s ಅಫ್ಘಾನಿಸ್ಥಾನ

ಶಾರ್ಜಾ

ಸಂಜೆ 7.30ಕ್ಕೆ

04-09-2022

ಭಾರತ V/s ಪಾಕಿಸ್ತಾನ

ದುಬೈ

ಸಂಜೆ 7.30ಕ್ಕೆ
06-09-2022

ಭಾರತ V/s ಶ್ರೀಲಂಕಾ

ದುಬೈ

ಸಂಜೆ 7.30ಕ್ಕೆ
07-09-2022

ಪಾಕಿಸ್ತಾನ V/s ಅಫ್ಘಾನಿಸ್ಥಾನ

ಶಾರ್ಜಾ

ಸಂಜೆ 7.30ಕ್ಕೆ
08-09-2022

ಭಾರತ V/s ಅಫ್ಘಾನಿಸ್ಥಾನ

 ದುಬೈ ಸಂಜೆ 7.30ಕ್ಕೆ
09-09-2022

ಶ್ರೀಲಂಕಾ V/s ಪಾಕಿಸ್ತಾನ

 ದುಬೈ ಸಂಜೆ 7.30ಕ್ಕೆ
11-09-2022

ಫೈನಲ್

ದುಬೈ

ಸಂಜೆ 7.30ಕ್ಕೆ

ಇದನ್ನೂ ಓದಿ: Ravindra Jadeja : ಏಷ್ಯಾಕಪ್‌ನಿಂದ ಜಡೇಜಾ ಔಟ್, ಟೀಂ ಇಂಡಿಯಾಗೆ ಈ ಆಟಗಾರ ಎಂಟ್ರಿ!

ಸೂಪರ್-4ರಲ್ಲಿ ಪ್ರತಿಯೊಂದು ತಂಡವು 3 ಪಂದ್ಯಗಳನ್ನು ಆಡಲಿದೆ. ಭಾರತ ಸೆ.4ರಂದು ಪಾಕಿಸ್ತಾನ ವಿರುದ್ಧ, ಸೆ.6ರಂದು ಶ್ರೀಲಂಕಾ ವಿರುದ್ಧ ಹಾಗೂ ಸೆ.8ರಂದು ಅಫ್ಘಾನಿಸ್ಥಾನ ವಿರುದ್ಧ ಸೆಣಸಾಟ ನಡೆಯಲಿದೆ. ಅತಿಹೆಚ್ಚು ಗೆಲುವು ಅಥವಾ ಅಂಕ ಗಳಿಸಿದ 2 ತಂಡಗಳು ಫೈನಲ್‍ಗೆ ಲಗ್ಗೆ ಇಡಲಿವೆ. ಸೆ.11ರಂದು ಫೈನಲ್ ಪಂದ್ಯವು ನಡೆಯಲಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News