Mrunal Thakur: ಕನ್ಫ್ಯೂಸ್‌ ಆಗ್ಬೇಡಿ.. ಇವರು ಸೀರೆಯುಟ್ಟು ಮಿಂಚಿದ್ದ ಅದೇ ʻಸೀತಾಮಹಾಲಕ್ಷ್ಮಿʼ.!

Mrunal Thakur Bold look in bikin : ಮೃಣಾಲ್ ಠಾಕೂರ್‌... ಸೀತಾರಾಮಂ ಸಿನಿಮಾ ಮೂಲಕ ಜನರ ಮನಗೆದ್ದ ನಟಿ. ಸೀರೆಯಲ್ಲಿ ಈ ಬ್ಯೂಟಿ ಕಂಡು ಯುವಕರು ಫಿದಾ ಆಗಿದ್ದರು. ಈ ಸುಂದರಿಗೆ ಅನೇಕ ಫ್ಯಾನ್ಸ್‌ ಇದ್ದಾರೆ. ಸೀರೆಯುಟ್ಟು ಸಿನಿಪ್ರಿಯರ ಹೃದಯವಾಸಿಯಾಗಿದ್ದ ಮೃಣಾಲ್ ಠಾಕೂರ್‌ ಈಗ ಬಿಕಿನಿ ತೊಟ್ಟು ನಿದ್ದೆ ಕದ್ದಿದ್ದಾರೆ. 

Mrunal Thakur Bold look : ನೀಲಿ ಬಿಕಿನಿ ಧರಿಸಿ ಬೀಚ್‌ನಲ್ಲಿ ಮೋಜು ಮಾಡುತ್ತಿರುವ ಮೃಣಾಲ್ ಠಾಕೂರ್‌ ಅವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ. ಮೃಣಾಲ್ ಠಾಕೂರ್ ನಟನೆ ಮತ್ತು ಅಂದ ಎರಡರಿಂದಲೂ ಖ್ಯಾತಿ ಪಡೆದವರು. ಸಂಜೆ ಹೊತ್ತು ಬಿಕಿನಿ ತೊಟ್ಟು ಸಮುದ್ರದ ದಡದಲ್ಲಿ ಹಾಟ್‌ ಪೋಸ್‌ ನೀಡಿದ್ದಾರೆ. ಮೃಣಾಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳಲ್ಲಿ, ನಟಿ ಬೆರಗುಗೊಳಿಸುವ ನೀಲಿ ಬಿಕಿನಿಯಲ್ಲಿ ಬೋಲ್ಡ್‌ ಲುಕ್‌ ನೀಡಿದ್ದನ್ನು ಕಾಣಬಹುದು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೃಣಾಲ್ ಠಾಕೂರ್ ಅವರು ಆಗಸ್ಟ್ 1, 1992 ರಂದು ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು. ಮೃಣಾಲ್ ಅವರು 'ಬ್ಯಾಚುಲರ್ ಆಫ್ ಮಾಸ್ ಮೀಡಿಯಾ'ವನ್ನು ಓದಿದ್ದಾರೆ. 

2 /6

ಮೃಣಾಲ್ ಠಾಕೂರ್ ಅವರು 2012 ರಲ್ಲಿ ಟಿವಿ ಧಾರಾವಾಹಿ 'ಮುಜ್ಸೆ ಕುಚ್ ಕೆಹ್ತಿ...ಯೇ ಖಾಮೋಶಿಯಾನ್' ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 2013ರಲ್ಲಿ ದುಬೈನಲ್ಲಿ ನಡೆದ ‘ದೋ ಫೂಲ್ ಚಾರ್ ಮಾಲಿ’ ಎಂಬ ಹಾಸ್ಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

3 /6

ಕಲರ್ಸ್ ಟಿವಿಯಲ್ಲಿ ಪ್ರಸಾರವಾದ 'ಬಾಕ್ಸ್ ಕ್ರಿಕೆಟ್ ಲೀಗ್' (2014-2016) ಕ್ರೀಡಾ ರಿಯಾಲಿಟಿ ಎಂಟರ್‌ಟೈನ್‌ಮೆಂಟ್ ಶೋನಲ್ಲಿ ಮೃಣಾಲ್ ಠಾಕೂರ್ ಭಾಗವಹಿಸಿದ್ದರು. ಡ್ಯಾನ್ಸ್ ರಿಯಾಲಿಟಿ ಟಿವಿ ಶೋ 'ನಾಚ್ ಬಲಿಯೆ' ಸೀಸನ್ 7 ರಲ್ಲಿ ಭಾಗಿಯಾಗಿದ್ದರು. ನಂತರ ಅನೇಕ ಜಾಹೀರಾತುಗಳು ಮತ್ತು ಟಿವಿ ಧಾರಾವಾಹಿಗಳನ್ನು ಮಾಡಿದರು. 

4 /6

2014ರಲ್ಲಿ ವಿಟ್ಟಿ ದಂಡು ಎಂಬ ಮರಾಠಿ ಸಿನಿಮಾ ಮಾಡಿದ್ದ ಮೃಣಾಲ್ ಠಾಕೂರ್ 2018ರಲ್ಲಿ ಲವ್ ಸೋನಿಯಾ ಸಿನಿಮಾ ಮಾಡಿದ್ದರು. ತೂಫಾನ್, ಧಮಾಕಾ ಮತ್ತು ಜೆರ್ಸಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. 

5 /6

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮೃಣಾಲ್ ಠಾಕೂರ್ ಸದಾ ಹಾಟ್ ಫೋಟೋಶೂಟ್ ಮಾಡುತ್ತಾ ಹುಡುಗರ ನಿದ್ದೆಗೆ ಕನ್ನ ಹಾಕುತ್ತಾರೆ. 

6 /6

ಮೃಣಾಲ್ ಠಾಕೂರ್ ಪ್ರಸ್ತುತ ಬೇಸಿಗೆ ರಜೆಯನ್ನು ಆನಂದಿಸುತ್ತಿದ್ದಾರೆ. ಅವರು ಕಡಲತೀರದಲ್ಲಿ ಫೋಟೋಶೂಡ್‌ ಮಾಡಿಸುವ ಮೂಲಕ ಅಭಿಮಾನಿಗಳಿಗೆ ಹಾಟ್‌ ಟ್ರೀಟ್‌ ನೀಡಿದ್ದಾರೆ.