Actor Ramesh Pandit: ನಟ ರಮೇಶ್ ಪಂಡಿತ್ ರವರ ಪತ್ನಿ ಯಾರು ಗೊತ್ತಾ? ಇವರು ಕನ್ನಡದ ಫೇಮಸ್ ನಟಿ!!

Ramesh Pandit Wife: ಕನ್ನಡ ಚಿತ್ರರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕವೇ ಗನಮನ ಗೆದ್ದು ಸಾಕಷ್ಟು ಜನಪ್ರಿಯತೆ ಗಳಿಸಿದ ಕಲಾವಿದರಿದ್ದಾರೆ.. ಅಂತವರ ಪೈಕಿ ನಟ ರಮೇಶ್‌ ಪಂಡಿತ್‌ ಅವರು ಒಬ್ಬರು.. ತಮ್ಮ ಕಣ್ಣಿನ ಮೂಲಕವೇ ಸಿನಿರಂಗ ಹಾಗೂ ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ ಖ್ಯಾತ ನಟ ಎಂದರೇ ಅದು ರಮೇಶ್‌ ಪಂಡಿತ್..‌ 

1 /5

ರಂಗಭೂಮಿ ಕಲಾವಿದರಾದ ರಮೇಶ್‌ ಪಂಡಿತ್‌ ಬೆಳ್ಳಿತೆರೆಯಲ್ಲಿ ಖಳನಾಯಕ ಹಾಗೂ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.. ಸುಮಾರು ಮೂವತ್ತು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿ ರಮೇಶ್‌ ಅವರು ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಯ ಸಿನಿಮಾಳಲ್ಲಿಯೂ ನಟಿಸಿದ್ದಾರೆ.  

2 /5

ನಟ ರಮೇಶ್‌ ಪಂಡಿತ್‌ ಕನ್ನಡದ ದೊಡ್ಡ ದೊಡ್ಡ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲೂ ಪೋಷಕ ಪಾತ್ರ ಮಾಡುವ ಮೂಲಕ ಮತ್ತೋಮ್ಮೆ ಎಲ್ಲರ ಮನಗೆಲ್ಲುತ್ತಿದ್ದಾರೆ..   

3 /5

ಇನ್ನು ರಮೇಶ್‌ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿಯೂ ಸಹ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.. ಹಾಗಾದ್ರೆ ಯಾರು ಇವರ ಪತ್ನಿ ಅಂತೀರಾ.. ಮುಂದೆ ಓದಿ.   

4 /5

ನಟ ರಮೇಶ್‌ ಅವರ ಪತ್ನಿ ಸುನೇತ್ರಾ.. ಇವರು ಸಿಲ್ಲಿಲಲ್ಲಿಯ ವಿಶಾಲು ಪಾತ್ರದ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದಾರೆ..  ಸುಮಾರು ೪೦ಕ್ಕೂ ಹೆಚ್ಚು ಸಿನಿಮಾ ಹಾಗೂ ನಾಟಕಗಳಲ್ಲಿ ಗುರುತಿಸಿಕೊಂಡಿರುವ ಇವರು ಸದ್ಯ ಲೈಮ್‌ ಲೈಟ್‌ ಎಂಬ ಅಭಿನಯ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ..   

5 /5

ಸುನೇತ್ರಾ ನಟಿ ಮಾತ್ರವಲ್ಲದೇ ಕಂಠದಾನ ಕಲಾವಿದೆಯೂ ಆಗಿದ್ದಾರೆ.. ಪ್ರೇಮ, ರಮ್ಯಾ ಕೃಷ್ಣ ಹೀಗೆ ಹಲವಾರು ನಟಿಯರಿಗೆ ಇವರು ಕಂಠದಾನ ಮಾಡಿದ್ದಾರೆ..