ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡುವ ಸುಲಭ ವಿಧಾನಗಳು

Quick stress relief for kids: ಕೆಲವು ಮಕ್ಕಳಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿ ಕಂಡು ಬರುವ ಒತ್ತಡವನ್ನು ನಿರ್ಲಕ್ಶಿಸಿದರೆ ಭವಿಷ್ಯದಲ್ಲಿ ಅದು ದೊಡ್ಡ ಸಮಸ್ಯೆಯಾಗಬಹುದು. ಮಕ್ಕಳಲ್ಲಿ ಒತ್ತಡವನ್ನು ಕಡಿಮೆ ಮಾಡಲು ಹಲವು ಮಾರ್ಗಗಳಿವೆ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮುಕ್ತ ಸಂವಹನ:  ಮಕ್ಕಳು ತಮ್ಮ ಭಾವನೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತವಾಗಿ ವ್ಯಕ್ತಪಡಿಸಲು ಮನೆಯಲ್ಲಿ ಮುಕ್ತ ಸಂವಹನದ ವಾತಾವರಣ ಇರುವುದು ಬಹಳ ಮುಖ್ಯ. ಇದರಿಂದ ಮಕ್ಕಳು ಯಾವುದೇ ಭಯವಿಲ್ಲದೆ ವಿಚಾರಗಳನ್ನು ಮನೆಯವರ ಮುಂದೆ ಮಾತನಾಡುತ್ತಾರೆ. ಇದು ಅವರಲ್ಲಿ ಒತ್ತಡದಿಂದ ಪರಿಹಾರ ನೀಡಲು ಪ್ರಯೋಜನಕಾರಿ ಆಗಿದೆ. 

2 /8

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ದಿನಚರಿ ರೂಢಿಯಾಗಬೇಕು. ಬೆಳಿಗ್ಗೆ ಎದ್ದೇಳುವ ಸಮಯದಿಂದ ರಾತ್ರಿ ಮಲಗುವವರೆಗೂ ವೇಳಾಪಟ್ಟಿಯನ್ನು ಹೊಂದಿರುವುದು. ಅದರಂತೆ ಯಾವ ಯಾವ ಸಮಯಕ್ಕೆ ಯಾವ ಕೆಲಸ ಪೂರ್ಣಗೊಳಿಸಬೇಕು ಎಂಬಿತ್ಯಾದಿ ದಿನಚರಿ ಚಟುವಟಿಕೆಗಳ ವೇಳಾಪಟ್ಟಿಯನ್ನು ರೂಪಿಸಿ. ಇದರಿಂದ ಮಕ್ಕಳು ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಳ್ಳುತ್ತಾರೆ. 

3 /8

ಮಕ್ಕಳು ನಿಯಮಿತ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ನಿತ್ಯ ಸಾಕಷ್ಟು ನಿದ್ರೆ ಮಾಡುವುದು. ಸಮತೋಲಿತ ಆಹಾರ ಸೇವಿಸುವುದು ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಹಕರಿಸಿ. 

4 /8

ಮಕ್ಕಳು ತಮ್ಮ ದಿನಚರಿಯಲ್ಲಿ ಮುಂಜಾನೆ ಎದ್ದ ತಕ್ಷಣ ಇಲ್ಲವೇ ಸಂಜೆ ವೇಳೆ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಸಿ. ಇದು ಮಕ್ಕಳಲ್ಲಿ ಆತಂಕ, ಒತ್ತಡವನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. 

5 /8

ಈ ಫಾಸ್ಟ್ ಜೀವನದಲ್ಲಿ ಯಾರಿಗೂ ಮಕ್ಕಳೊಂದಿಗೆ ಆಟವಾಡುವಷ್ಟು ಸಮಯ, ಸಂಯಮ ಯಾವುದೂ ಇರುವುದಿಲ್ಲ. ಆದರೆ, ನಿತ್ಯ ಮಕ್ಕಳೊಂದಿಗೆ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪೋಷಕರು ತೊಡಗಿಕೊಳ್ಳಿ. ಇದು ಭಾವನಾತ್ಮಕವಾಗಿ ಮಕ್ಕಳನ್ನು ಪೋಷಕರೊಂದಿಗೆ ಬೆಸೆಯಲು ಸಹಕಾರಿ. ಜೊತೆಗೆ ಮಕ್ಕಳು ತಮ್ಮ ಮನಸ್ಸಿನ ಮಾತನ್ನು ಈ ಸಮಯದಲ್ಲಿ ನಿಮ್ಮೊಂದಿಗೆ ಹಚ್ಚಿಕೊಳ್ಳಲು ಸಮಯಾವಕಾಶ ಕಲ್ಪಿಸಿದಂತೆ ಆಗುತ್ತದೆ. 

6 /8

ಇತ್ತೀಚಿನ ದಿನಗಳಲ್ಲಿ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಹೆಚ್ಚಾಗಿ ಗ್ಯಾಜೆಟ್ಸ್ ಗಳಿಗೆ ವ್ಯಸನಿಗಳಾಗಿರುತ್ತಾರೆ. ಇದು ಸೂಕ್ತವಲ್ಲದ ವಿಷಯಗಳನ್ನು ಕಲಿಯಲು ಅವರನ್ನು ಪ್ರೋತ್ಸಾಹಿಸಬಹುದು. ಹಾಗಾಗಿ, ಗ್ಯಾಜೆಟ್ಸ್ ಗಳನ್ನು ನಿಯಂತ್ರಿಸಿ. ಬದಲಿಗೆ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳುವ ಮೂಲಕ ಅವರ ಮನಸ್ಸನ್ನು ಪರಿವರ್ತಿಸಬಹುದು.

7 /8

ಮಕ್ಕಳು ತಮ್ಮ ಹಿರಿಯರನ್ನು ನೋಡಿ ಸಾಕಷ್ಟು ವಿಷಯಗಳನ್ನು ಕಲಿಯುತ್ತಾರೆ. ಹಾಗಾಗಿ, ನೀವು ಮಕ್ಕಳೆದುರು ಒಳ್ಳೆಯ ಪಾಸಿಟಿವ್ ರೋಲ್ ಮಾಡೆಲ್ ಆಗಿರಿ. 

8 /8

ಮಕ್ಕಳ ತಪ್ಪನ್ನು ತಿದ್ದುವ ಬರದಲ್ಲಿ ಅವರ ಮಾತ್ರನ್ನು ತಿರಸ್ಕರಿಸುವ ಪೋಷಕರೇ ಹೆಚ್ಚು. ಆದರೆ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಬೆಂಬಲ, ಸುರಕ್ಷಿತ ಭಾವನೆಯನ್ನು ಒದಗಿಸುವುದು, ಅಂತಹ ಪರಿಸರವನ್ನು ನಿರ್ಮಿಸುವುದು ತುಂಬಾ ಅಗತ್ಯ.  ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.