Dr. RajKumar Movies: ವರನಟನ ಅಭಿನಯದ ಸೂಪರ್‌ ಹಿಟ್‌ ಚಿತ್ರಗಳ ಅಚ್ಚರಿಯ ಸಂಗತಿಗಳು..!

Dr. Rajkumar 95th Birthday: ಕನ್ನಡ ವರನಟ ಡಾ.ರಾಜ್‌ಕುಮಾರ್‌ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದರು, ಅದರಲ್ಲಿ ಕೆಲವು ಚಿತ್ರಗಳು ವಿಭಿನ್ನ ಕಥೆಯ ಜೊತೆಗೆ ಅದರಂತೆ ತನ್ನದೇಯಾದ ರೀತಿ ಛಾವು ಮೂಡಿಸಿದೆ. ಇಂತಹ ಸಿನಿಮಾಗಳ ಮೂಲಕ ಅಣ್ಣಾವ್ರು ಕನ್ನಡ ಚಿತ್ರರಂಗಕ್ಕೆ ಅಡಿಪಾಯ ಹಾಕಿದ್ದಾರೆ. ಈ ಚಿತ್ರಗಳ ಅಚ್ಚರಿಯ ಸಂಗತಿಗಳು ಇಲ್ಲಿವೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

1 /6

1. ʻಬಂಗಾರದ ಮನುಷ್ಯʼ :- ಚಂದನವನದಲ್ಲಿ ಅತಿ ಹೆಚ್ಚು ಸಿನಿಮಾ  ಚಿತ್ರಮಂದಿರದಲ್ಲಿ ಓಡಿದ ಸಿನಿಮಾವಾಗಿದೆ. ʻಬಂಗಾರದ ಮನುಷ್ಯʼ ಚಿತ್ರವನ್ನು ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದು, ಇದರಲ್ಲಿ ಡಾ. ರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ ಕಾಲಕ್ಕೆ ಈ ಚಿತ್ರ  ಸಾಮಾಜಿಕ ಕ್ರಾಂತಿಯೇ ಆಗಿತ್ತು.  

2 /6

2. ʻಅನುರಾಗ ಅರಳಿತುʼ :- ಕನ್ನಡ ಚಿತ್ರರಂಗದಲ್ಲಿ 1986ರಲ್ಲಿ ತೆರೆಗೆ ಬಂದ ಡಾ. ರಾಜ್‌ಕುಮಾರ್‌ ಅಭಿನಯದ ʻಅನುರಾಗ ಅರಳಿತುʼ ಸಿನಿಮಾ ತೆಲುಗು, ಹಿಂದಿ, ಸಿನ್ಹಾಳ ಸೇರಿದಂತೆ 7 ಭಾಷೆಗೆ ಈ  ರಿಮೇಕ್ ಚಿತ್ರ ರಿಮೇಕ್‌ ಆಗಿತ್ತು. ಇದು ಸಿನಿರಂಗದಲ್ಲೇ ಕಾದಂಬರಿ ಆಧರಿಸಿದ ಬಿಗ್‌ ಹಿಟ್‌ ಸಿನಿಮಾ ಆಗಿದೆ.

3 /6

3. ʻಶಂಕರ್ ಗುರುʼ :-  ಡಾ.ರಾಜ್ ಕುಮಾರ್ ತ್ರಿಪಾತ್ರದಲ್ಲಿ  ನಟಿಸಿದ ʻಶಂಕರ್ ಗುರುʼ ಸಿನಿಮಾ ದೂರದರ್ಶನದಲ್ಲಿ ಮೊದಲು ಪ್ರಸಾರ ಕಂಡಿದೆ. ಇಂದಿಗೂ ಕಲ್ಟ್ ಕ್ಲಾಸಿಕ್ ಅಂತಲೇ ಕರೆಸಿಕೊಳ್ಳುವ ಚಿತ್ರ ಮೂರು ಕೋಟಗೂ ಹೆಚ್ಚು ಹಣ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಗೆ ಪಡೆದಿದೆ.  

4 /6

4. ʻಗಂಧದ ಗುಡಿʼ :- ವರನಟ ಡಾ.ರಾಜ್‌ಕುಮಾರ್‌ ಅಭಿನಯದ 150ನೇ ಸಿನಿಮಾ ʻಗಂಧದ ಗುಡಿʼ ಅರಣ್ಯ ಸಂರಕ್ಷಣೆ ಕುರಿತ ಮೊದಲ ಚಿತ್ರವಾಗಿದೆ. ಡೈರೆಕ್ಟರ್‌ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರಣ್ಯ ಸಂರಕ್ಷಣೆಯ ಕುರಿತು ದೃಶ್ಯರೂಪ ಪಡೆದುಕೊಂಡ ಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಸಲ್ಲುತ್ತದೆ.  

5 /6

5. ʻಮೇಯರ್ ಮುತ್ತಣ್ಣʼ :- ದ್ವಾರಕೀಶ್ ನಿರ್ಮಾಣದ ʻಮೇಯರ್ ಮುತ್ತಣ್ಣʼ ಸಿನಿಮಾದಲ್ಲಿ ಬಿಡುಗಡೆಗೂ ಮೊದಲೇ ವಿತರಣೆ ಹಕ್ಕು ಮಾರಾಟವಾದ ಮೊದಲ ಕನ್ನಡ ಚಿತ್ರವೆಂಬ ಶ್ರೇಯಸ್ಸು ಗಳಿಸಿಕೊಂಡಿದೆ. ಇದರಲ್ಲಿ ಡಾ.ರಾಜ್ ಕುಮಾರ್ ಹಾಗೂ ಭಾರತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.   

6 /6

6. ʻಭಾಗ್ಯದ ಲಕ್ಷ್ಮೀ ಬಾರಮ್ಮʼ :- ಡಾ.ರಾಜ್ ಕುಮಾರ್ ನಟನೆಯ ʻಭಾಗ್ಯದ ಲಕ್ಷ್ಮೀ ಬಾರಮ್ಮʼ ಚಿತ್ರ, ಕನ್ನಡದ ಗಡಿ ದಾಟಿ, ತೆಲುಗು ನೆಲದಲ್ಲಿ ಬಿಡುಗಡೆಗೊಂಡು ಯಶಸ್ಸು ಕಂಡ ಕನ್ನಡದ ಮೊದಲ ಸಿನಿಮಾವಾಗಿದೆ. ಈ ಅಪ್ಪಟ ಹಾಸ್ಯ ಪ್ರಧಾನ ಚಿತ್ರ ಹೈದರಬಾದ್‌ನಲ್ಲಿ ತೆರೆಕಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.