ಎಚ್ಚರ..! ಕ್ರೆಡಿಟ್ ಕಾರ್ಡ್ ಬಳಕೆ 'COCAINE' ನಶೆಯಷ್ಟೇ ಅಪಾಯಕಾರಿ..!


ಕ್ರೆಡಿಟ್ ಕಾರ್ಡ್ ಮೂಲಕ ಮಾಡುವ ಶಾಪಿಂಗ್ COCAINE ನ ಮಾದಕ ವ್ಯಸನದಂತೆ, ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತದೆ ಅಧ್ಯಯನ.

ನವದೆಹಲಿ : ಕ್ರೆಡಿಟ್ ಕಾರ್ಡ್ (Credit Card) ಖರ್ಚನ್ನು ಸುಲಭಗೊಳಿಸುತ್ತದೆ. ಪ್ರತಿದಿನ ಲಕ್ಷಾಂತರ ಜನರು ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ (Shopping) ಮಾಡುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ಖರೀದಿಗಳ ಮೇಲೆ ಅಮೆರಿಕಾದಲ್ಲಿ  ನಡೆದ ಅಧ್ಯಯನವು ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಯೋಚಿಸುವಂತೆ ಮಾಡಿದೆ. ಕ್ರೆಡಿಟ್ ಕಾರ್ಡ್‌ನೊಂದಿಗೆ ಮಾಡುವ ಶಾಪಿಂಗ್ ಕೊಕೇನ್ (COCAINE) ಚಟದಂತೆಯೇ ಎಂದು ಅಧ್ಯಯನ ಹೇಳಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಧ್ಯಯನದ ಪ್ರಕಾರ, ಕ್ಯಾಶ್ ಬಳಸಿ ಯಾವುದೇ ವಸ್ತುವನ್ನು ಖರೀಸುವುದಾದರೂ ಜನ ಬಹಳ ಯೋಚನೆ ಮಾಡಿ ಹಣ ಖರ್ಚು ಮಾಡುತ್ತಾರೆ. ಒಂದು ಲೆಕ್ಕದಲ್ಲಿ ಅಳೆದು ತೂಗಿ ಖರ್ಚು ಮಾಡುವುದು. ಆದರೆ, ಅದೇ ಕ್ರೆಡಿಟ್ ಕಾರ್ಡ್ ಮೂಲಕ ಬಳಸುವುದು ಎಂದರೆ ಜನ ಹಿಂದೆ ಮುಂದೆ ಯೋಚಿಸಲು ಹೋಗುವುದಿಲ್ಲ. ಕಂಡ ಕಂಡ ವಸ್ತುಗಳನ್ನು ಖರೀದಿಸಲು ಆರಂಭಿಸುತ್ತಾರೆ.    

2 /5

ಡೈಲಿ ಮೇಲ್ ನಲ್ಲಿನ ಸುದ್ದಿಯ ಪ್ರಕಾರ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ   ಈ ಬಗ್ಗೆ ಸಂಶೋಧನೆಯನ್ನು ಮಾಡಿದೆ. ಈ ಅಧ್ಯಯನದ ಪ್ರಕಾರ, ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುವುದೆಂದರೆ ಗಾಳಿ ಮೇಲೆ ಹೆಜ್ಜೆ ಇಟ್ಟಂತೆ ಎಂದು ಸಂಶೋಧಕರು ಹೇಳಿದ್ದಾರೆ.  ಯಾಕೆಂದರೆ ಕ್ರೆಡಿಟ್ ಕಾರ್ಡ್ ಮೂಲಕ ಖರ್ಚು ಮಾಡುವ ಬಗ್ಗೆ ಜನರು ಕಿಂಚಿತ್ತೂ ಯೋಚನೆ ಮಾಡುವುದಿಲ್ಲ. 

3 /5

ಬೇರೆ ಬೇರೆ ಬಳಕೆಗಾಗಿ ವಿಭಿನ್ನ ಕಾರ್ಡ್‌ಗಳನ್ನು ಬಳಸಲಾಗುತ್ತದೆ.  ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಬಳಸುವ ಕಾರ್ಡ್‌ಗಳಿಗಿಂತ ರೆಸ್ಟೋರೆಂಟ್‌ಗಳಲ್ಲಿ ಕಾರ್ಡ್‌ಗಳ ಬಳಕೆ ಅಧಿಕವಾಗಿದೆ. 

4 /5

ಸಂಶೋಧಕ ಪ್ರೊಫೆಸರ್ ಡ್ರೇಜನ್ ಪ್ರಿಲೇಕ್, ಪ್ರಕಾರ 'ಮಾನವರ ಮನಸ್ಸಿನಲ್ಲಿ ರಿವಾರ್ಡ್ ನೆಟ್‌ವರ್ಕ್ ಇದೆಯಂತೆ.  ಅದು ಪ್ರಾಡೆಕ್ಟ್ ಗಳ ಮೇಲಿನ ರಿಯಾಯಿತಿ ದರಗಳನ್ನು ನೋಡಿದ ತಕ್ಷಣ ಆಕ್ಟಿವೆಟ್ ಆಗುತ್ತದೆಯಂತೆ. ಇದಾದ ನಂತರ, ವ್ಯಕ್ತಿ ಹಿಂದೆ ಮುಂದೆ ಯೋಚನೆ ಮಾಡದೆ, ಕ್ರೆಡಿಟ್ ಕಾರ್ಡ್  ಮೂಲಕ ಖರೀದಿ ಮಾಡಲು ಆರಂಭಿಸುತ್ತಾನೆಯಂತೆ.

5 /5

ಈ ಸಂಶೋಧನೆಯ ಸಮಯದಲ್ಲಿ, ಸಂಶೋಧಕರು ನಗದು ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಜನರ ಮಿದುಳುಗಳನ್ನು ಅಧ್ಯಯನ ಮಾಡಿದ್ದಾರೆ. ಈ ಸಮಯದಲ್ಲಿ ಜನರು ನಗದು ಬದಲು ಕಾರ್ಡ್‌ಗಳಿಂದ ಹೆಚ್ಚಿಗೆ ಶಾಂಪಿಂಗ್ ಮಾಡುತ್ತಾರೆ ಎನ್ನುವುದು ತಿಳಿದು ಬಂದಿದೆ. ಮೊದಲು ಅಗತ್ಯ ಎಂದು ಕಾರ್ಡ್ ಮೂಲಕ ಶಾಪಿಂಗ್ ಆರಂಭಿಸಿದರೆ ನಂತರ ಅದೊಂದು ನಶೆಯಾಗಿ ಪರಿವರ್ತನೆಯಾಗುತ್ತದೆ ಎಂಬುದು ಅಧ್ಯಯನಕಾರರ ಮಾತು.