Anchor Anushree: ಕೂಡಿ ಬಂತಾ ಕಂಕಣಭಾಗ್ಯ, ಸದ್ಯದಲ್ಲೇ ನಟಿ, ಆಂಕರ್‌ ಅನುಶ್ರೀ ಮದ್ವೆ!? ಹುಡ್ಗ ಯಾರು ಗೊತ್ತಾ?

Anushree About Her Marriage: ಕನ್ನಡದ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಕನ್ನಡಿಗರ ಮನೆಮಗಳಾಗಿದ್ದಾಳೆ.. ಇವರು ಸ್ಕ್ರೀನ್‌ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ಇವರಿಗಾಗಿಯೇ ಶೋ ನೋಡುವವರಿದ್ದಾರೆ.. ಸಾಷಕ್ಟು ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿರುವ ಅನುಶ್ರೀ ಮದುವೆ ಯಾವಾಗ ಅನ್ನೋದು ಅವರ ಅಭಿಮಾನಿಗಳ ಪ್ರಶ್ನೆ.. ಇದೀಗ ಇದಕ್ಕೆ ಉತ್ತರ ಸಿಕ್ಕಂತಿದೆ..
 

1 /5

ಕನ್ನಡದ ಟಾಪ್‌ ನಟಿಯರಿಗಿರುವಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಆಂಕರ್‌ ಅನುಶ್ರೀ ಅತೀ ಹೆಚ್ಚು ಸಂಭಾವನೆ ಪಡೆಯುವ ಆಂಕರ್‌ಗಳಲ್ಲಿ ಒಬ್ಬರಾಗಿದ್ದಾರೆ.. ಇತ್ತೀಚೆಗೆ ಇವರು ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮವೊಂದಕ್ಕೆ ಸಂದರ್ಶನ ನೀಡಿ ತಮ್ಮ ಮದುವೆಯ ವಿಚಾರದ ಬಗ್ಗೆ ಮಾತನಾಡಿದ್ದಾರೆ..   

2 /5

ನನ್ನ ಬಳಿ ಎಲ್ಲರೂ ಕೇಳುವ ಹಾಗೂ ಕೇಳಿರುವ ಪ್ರಶ್ನೆ ಎಂದರೇ ಅದು ನನ್ನ ಮದುವೆ ಯಾವಾಗ ಅನ್ನೋದು.. ಆದರೆ ಯ್ಯುಟ್ಯೂಬ್‌ನಲ್ಲಿ ನನಗೆ ಸಾವಿರ ಸಲ ಮದುವೆ ಮಾಡಿಸಿದ್ದಾರೆ.. ಸದ್ಯ ಈಗ ರಿಯಲ್‌ ಆಗಿ ಮದುವೆಯಾದ್ರೆ ಯಾರು ನಂಬಲ್ಲ ಅನಿಸುತ್ತೆ.. ಯಾಕಂದ್ರೆ ಅಷ್ಟು ಸಲ ಮದುವೆಯಾಗಿದೆ ನಂದು ಯೂಟ್ಯೂಬ್‌ ನಲ್ಲಿ.. ಅಷ್ಟೇ ಅಲ್ಲ ರಕ್ಷಿತ್‌ ಶೆಟ್ಟಿ ಜೊತೆ ಜೊತೆ ಮೂರು ಸಲ ಮದುವೆ ಮಾಡಿಸಿದ್ದಾರೆ..   

3 /5

ನಾನು ಯಾವುದೇ ಸಿಂಗಲ್‌ ಹುಡುಗನ ಜೊತೆ ಪೋಟೋ ಹಾಕಿದ್ರೆ ಸಾಕು ಅವರ ಜೊತೆ ನನ್ನ ಮದುವೆ ಮಾಡಿಸಿ ಬಿಡುತ್ತಾರೆ.. ಹೀಗಾಗಿ ನಾನು ಅದನ್ನೆಲ್ಲ ಸಿರೀಯಸ್‌ ಆಗಿ ತೆಗೆದುಕೊಳ್ಳುವುದಿಲ್ಲ..   

4 /5

ನಾನು ನಮ್ಮ ಅಪ್ಪ ಅಮ್ಮನ ಕೆಟ್ಟ ದಿನಗಳನ್ನು ನೋಡಿ ನನಗೆ ಮದುವೆಯೇ ಬೇಡ ಎನ್ನುವ ನಿರ್ಧಾರಕ್ಕೆ ಬರುವ ಮಟ್ಟಕ್ಕೆ ಹೋಗಿಬಂದಿದ್ದೇನೆ.. ನನ್ನ ಬಾಲ್ಯದ ಕೆಲವು ವಿಚಾರಗಳು ನನ್ನ ಮೇಲೆ ಈ ರೀತಿಯಾದ ಪರಿಣಾಮ ಬೀರಿವೆ. ಹೀಗಾಗಿ ನಾನು ಮದುವೆಯೇ ಬೇಡ ಎಂದು ಯೋಚಿಸಿದ್ದೆ.. ಆದರೆ ಈಗ ಮದುವೆಯಾಗುವ ನಿರ್ಧಾರ ಮಾಡಿದ್ದೇನೆ.. ನಿಮಗೆ ಖುಷಿ ಸುದ್ದಿ ಸಿಗುತ್ತೆ.. ನೀವೇ ಹುಡುಗನನ್ನು ಹುಡುಕಿಕೊಡಿ ಎಂದಿದ್ದಾರೆ...   

5 /5

ಮೊದಲ ಬಾರಿ ಸಂದರ್ಶನದಲ್ಲಿ ಭಾಗವಹಿಸಿದ ನಟಿ, ನಿರೂಪಕಿ ಅನುಶ್ರೀ ಸದ್ಯ ಕೋಟ್ಯಂತರ ಕನ್ನಡಿಗರ ಪ್ರಶ್ನೆಗೆ ಉತ್ತರ ನೀಡುವ ಮೂಲಕ ತಾವು ಮದುವೆಯಾಗುವ ಯೋಚನೆಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.. ಇದನ್ನು ಕೇಳಿದ ಅವರ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ..