ಮಲಗುವ ಮುನ್ನ ಹೀಗೆ ಮಾಡಿದರೆ ಕೂದಲು ಉದುರುವುದು ನಿಲ್ಲುವುದು, ಸುಂದರ ಕೇಶ ಕಾಂತಿ ನಿಮ್ಮದಾಗುವುದು !

Hair Care Tips:ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

Written by - Ranjitha R K | Last Updated : Feb 21, 2024, 01:14 PM IST
  • ಮಲಗುವ ಮುನ್ನ ಕೂದಲನ್ನು ಬಾಚಿಕೊಳ್ಳಿ
  • ಮಲಗುವ ಮುನ್ನ ಕೂದಲಿಗೆ ಎಣ್ಣೆ ಹಚ್ಚಿ
  • ಕೂದಲನ್ನು ಸಂಪೂರ್ಣವಾಗಿ ಒಣಗಿಸಿ
ಮಲಗುವ ಮುನ್ನ ಹೀಗೆ ಮಾಡಿದರೆ ಕೂದಲು ಉದುರುವುದು ನಿಲ್ಲುವುದು, ಸುಂದರ ಕೇಶ ಕಾಂತಿ ನಿಮ್ಮದಾಗುವುದು ! title=

Hair Care Tips : ಕೂದಲಿಗೆ ಬಾಚಣಿಗೆ ಹಾಕಿದ ತಕ್ಷಣ ಕಂತೆ ಕಂತೆ ಕೂದಲು ಉದುರುವ ಸಮಸ್ಯೆಯನ್ನು ಹೆಚ್ಚಿನವರು ಎದುರಿಸುತ್ತಾರೆ. ಕೆಲವರಂತೂ ಕೂದಲಿಗೆ ಕೈ ಆಡಿಸಿದರೂ ಸಾಕು ಕೂದಲು ಉದುರಲು ಆರಂಭವಾಗುತ್ತದೆ. ಇದಕ್ಕಾಗಿ ಕೆಲವರು ಚಿಕಿತ್ಸೆಯ ಮೊರೆ ಹೋಗುತ್ತಾರೆ. ಆದರೆ ಅದರ ಅವಶ್ಯಕತೆ ಇಲ್ಲ. ಇದರ ಬದಲಿಗೆ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

ಮಲಗುವ ಮುನ್ನ ಕೂದಲನ್ನು ಬಾಚಿಕೊಳ್ಳಿ : 
ಮಲಗುವ ಮುನ್ನ ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಕೂದಲು ಉದ್ದವಾಗಿದ್ದರೆ, ಅದನ್ನು ಸಡಿಲವಾಗಿ ಹೆಣೆದುಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ದುರ್ಬಲವಾಗುವುದಿಲ್ಲ ಮತ್ತು ಒಣಗುವುದಿಲ್ಲ. 

ಇದನ್ನೂ ಓದಿ : ಈ ಬೀಜಗಳನ್ನು ಪುಡಿ ಮಾಡಿ ಪೇಸ್ಟ್ ಹಚ್ಚಿದರೆ ಬಿಳಿ ಕೂದಲು ಹತ್ತೇ ನಿಮಿಷಗಳಲ್ಲಿ ಕಪ್ಪಾಗುತ್ತದೆ !

ಎಣ್ಣೆ ಹಚ್ಚಿ : 
ಮಲಗುವ ಮುನ್ನ ಉಗುರುಬೆಚ್ಚಗಿನ ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು  ಕೂದಲಿಗೆ ಹಚ್ಚಿಕೊಳ್ಳಿ. ಇದು ನೆತ್ತಿಯ ಪೋಷಣೆಯನ್ನು ಮಾತ್ರವಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಆದರೆ, ಬೆಳಿಗ್ಗೆ ನಿಮ್ಮ ಕೂದಳಿಗೆ ಶಾಂಪೂ ಮಾಡಲು ಮರೆಯಬೇಡಿ.  ಹೀಗೆ ಮಾಡುವುದರಿಂದ ಕೂದಲು ಮೃದುವಾಗುವುದಲ್ಲದೆ, ಸದೃಢವಾಗುತ್ತದೆ. 

ಕೂದಲನ್ನು ಸಂಪೂರ್ಣವಾಗಿ ಒಣಗಿಸಿ : 
ಒದ್ದೆ ಕೂದಲು ಹೆಚ್ಚು ದುರ್ಬಲವಾಗಿರುತ್ತದೆ. ಆದ್ದರಿಂದ ಒದ್ದೆಯಾದ ಕೂದಲಿನೊಂದಿಗೆ ಮಲಗಿದರೆ ಅದು ಒಡೆಯುತ್ತದೆ. ಆದ್ದರಿಂದ, ಮಲಗುವ ಮೊದಲು ಯಾವಾಗಲೂ ನಿಮ್ಮ ಕೂದಲನ್ನು ಚೆನ್ನಾಗಿ ಒಣಗಿಸಿ.

ಸ್ಯಾಟಿನ್ ಸ್ಕಾರ್ಫ್ ಬಳಸಿ : 
ಬೆಳಿಗ್ಗೆ ಎದ್ದಾಗ, ನಿಮ್ಮ ಕೂದಲು ತುಂಬಾ ಹಾಳಾಗಿ ಮತ್ತು ಹಾನಿಗೊಳಗಾದಂತೆ ತೋರುತ್ತಿದ್ದರೆ, ಮಲಗುವಾಗ ನಿಮ್ಮ ಕೂದಲನ್ನು ಬಟ್ಟೆಯಿಂದ ಕವರ್ ಮಾಡಿಕೊಳ್ಳುವುದು ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : ರಾಮ ಜನ್ಮಭೂಮಿಯಿಂದ ತುಳಸಿ ಸ್ಮಾರಕ ಭವನವರೆಗೆ ಅಯೋಧ್ಯೆಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಸ್ಥಳಗಳಿವು

ಸಾಕಷ್ಟು ನೀರು ಕುಡಿಯಿರಿ :
ಕೂದಲನ್ನು ಸುಂದರವಾಗಿಸುವುದು ಮಾತ್ರವಲ್ಲ ಒಳಗಿನಿಂದ ಆರೋಗ್ಯಕರವಾಗಿ ಇಡುವುದು ಬಹಳ ಮುಖ್ಯ. ಮಲಗುವ ಮೊದಲು ಮತ್ತು ಬೆಳಿಗ್ಗೆ ಎದ್ದ ನಂತರ ಸಾಕಷ್ಟು ನೀರು ಕುಡಿಯಬೇಕು. ಇದು ನೆತ್ತಿಯನ್ನು ತೇವಾಂಶದಿಂದ ಇರಿಸುತ್ತದೆ. ಕೂದಲನ್ನು ಶುಷ್ಕತೆಯಿಂದ ರಕ್ಷಿಸುತ್ತದೆ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News