ಕೂದಲು ಬಿಳಿಯಾಗಲು ಇದೇ ಪ್ರಮುಖ ಕಾರಣ ! ಈ ವಿಟಮಿನ್ ಕೊರತೆ ನೀಗಿಸಿದರೆ ಸಾಕು ಬೇರೆ ಇನ್ನೇನೂ ಬೇಡ !

ಇತ್ತೀಚಿನ ಕಾಲದಲ್ಲಿ ತೊಂದರೆಗೀಡಾದ ಜೀವನಶೈಲಿ ಮತ್ತು ವಿಚಿತ್ರವಾದ ಆಹಾರ ಪದ್ಧತಿಗಳೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು. ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯವಾಗಿದೆ.

Written by - Ranjitha R K | Last Updated : Sep 15, 2023, 10:56 AM IST
  • ಬಿಳಿ ಕೂದಲು ಬೆಳವಣಿಗೆಯ ಹಿಂದೆ ಅನುವಂಶಿಕ ಕಾರಣಗಳಿರಬಹುದು.
  • ಕೂದಲಿಗೆ ಸಿಗುತ್ತಿಲ್ಲವೇ ಸರಿಯಾದ ಪೌಷ್ಟಿಕಾಂಶ
  • ಕೂದಲು ಬಿಳಿಯಾಗುವುದನ್ನು ನಿಲ್ಲಿಸುವುದು ಹೇಗೆ?
ಕೂದಲು ಬಿಳಿಯಾಗಲು ಇದೇ ಪ್ರಮುಖ ಕಾರಣ ! ಈ ವಿಟಮಿನ್ ಕೊರತೆ ನೀಗಿಸಿದರೆ ಸಾಕು ಬೇರೆ ಇನ್ನೇನೂ ಬೇಡ !  title=

ಬೆಂಗಳೂರು : ವಯಸ್ಸು 40 ಅಥವಾ 45 ದಾಟಿದ್ದರೆ, ಕೂದಲು ಬಿಳಿಯಾಗುವುದು ಅಷ್ಟು ಚಿಂತೆಯ ವಿಷಯವಲ್ಲ. ಆದರೆ ಅದಕ್ಕಿಂತ ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಗಗಾಗಲು ಆರಂಭಿಸಿದರೆ, ಇದು ಯೋಚಿಸಲೇ ಬೇಕಾದ ವಿಷಯ. ಅನೇಕ ಬಾರಿ ಬಿಳಿ ಕೂದಲು ಬೆಳವಣಿಗೆಯ ಹಿಂದೆ ಅನುವಂಶಿಕ ಕಾರಣಗಳಿರಬಹುದು. ಆದರೆ ಇತ್ತೀಚಿನ ಕಾಲದಲ್ಲಿ ತೊಂದರೆಗೀಡಾದ ಜೀವನಶೈಲಿ ಮತ್ತು ವಿಚಿತ್ರವಾದ ಆಹಾರ ಪದ್ಧತಿಗಳೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿರಬಹುದು. ಅದನ್ನು ಸಮಯಕ್ಕೆ ಸರಿಯಾಗಿ ಗುರುತಿಸುವುದು ಬಹಳ ಮುಖ್ಯವಾಗಿದೆ.

ಕೂದಲಿಗೆ ಸಿಗುತ್ತಿಲ್ಲವೇ ಸರಿಯಾದ ಪೌಷ್ಟಿಕಾಂಶ : 
ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲು ಕಾಣಿಸಿತು ಕೊಂಡಿತು ಎಂದು ಆತಂಕ ಪಡುವ ಅಗತ್ಯವಿಲ್ಲ. ಅಥವಾ ಬಿಳಿ ಕೂದಲು ಕಂಡ ತಕ್ಷಣ  ಹೇರ್ ಕಲರ್ ಮೊರೆ ಹೋಗುವ ಅಗತ್ಯವೂ ಇಲ್ಲ. ಎಲ್ಲದ್ದಕ್ಕಿಂತ ಮೊದಲು ಈ ಸಮಸ್ಯೆಯ ಮೂಲವನ್ನು ಅರಿತುಕೊಳ್ಳಬೇಕು. ಅಗತ್ಯ ಬಿದ್ದರೆ ಪರೀಕ್ಷೆ ಮಾಡಿಸಿಕೊಂಡು ದೇಹದಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಎನುವುದನ್ನು ತಿಳಿದುಕೊಳ್ಳಿ. ಸಾಮಾನ್ಯವಾಗಿ ನಾವು ಆರೋಗ್ಯಕರ ಆಹಾರವನ್ನು ನಿರ್ಲಕ್ಷಿಸುತ್ತೇವೆ. ಇದು ನಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟ ಪೋಷಕಾಂಶದ ಕೊರತೆ ಎದುರಾದಾಗ ಕೂದಲು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ. ಕಿರಿ ವಯಸ್ಸಿನಲ್ಲಿಯೇ ಬಿಳಿ ಕೂದಲು ಮೂಡಲು ಆರಂಭವಾಗುತ್ತದೆ. 

ಇದನ್ನೂ ಓದಿ : ಕೂದಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಅಲೋವೆರಾ

ಚಿಕ್ಕ ವಯಸ್ಸಿನಲ್ಲಿ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿರುವ ಸಾಧ್ಯತೆ ಹೆಚ್ಚಾಗಿರುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ಈ ಪ್ರಮುಖ ಪೋಷಕಾಂಶವನ್ನು ಸೇರಿಸಿಕೊಳ್ಳಬೇಕು. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಾದಾಗ ಕೂದಲು ದುರ್ಬಲಗೊಂಡು ಉದುರುತ್ತದೆ. ಮಾತ್ರವಲ್ಲ  ಕೂದಲು ಹಣ್ಣಾಗಲು ಪ್ರಾರಂಭಿಸುತ್ತದೆ. 

ಕೂದಲು ಬಿಳಿಯಾಗುವುದನ್ನು ನಿಲ್ಲಿಸುವುದು ಹೇಗೆ? :
ಚಿಕ್ಕ ವಯಸ್ಸಿನಲ್ಲೇ ಹುಟ್ಟಿಕೊಳ್ಳುವ ಬಿಳಿ ಕೂದಲನ್ನು ತೊಡೆದುಹಾಕಲು, ಜೀವನಶೈಲಿಯನ್ನು ಬದಲಾಯಿಸುವುದು ಬಹಳ ಮುಖ್ಯ. ಕೂದಲು  ಬಿಳಿಯಾಗುವುದನ್ನು ತಡೆಯಲು, ಕೆಳಗೆ ತಿಳಿಸಲಾದ ಕ್ರಮಗಳನ್ನು ಅಳವಡಿಸಿಕೊಳ್ಳಿ. 

ಇದನ್ನೂ ಓದಿ : ಯಾವ ಅಡ್ಡ ಪರಿಣಾಮವೂ ಇಲ್ಲದೆ ತ್ವಚೆಯನ್ನು ಫಳ ಫಳನೇ ಹೊಳೆಯುವಂತೆ ಮಾಡುತ್ತದೆ ಈ ಮಸಾಲೆ !

1. ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿ
2. ಯಾವಾಗಲೂ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ.
3. ಎಣ್ಣೆಯುಕ್ತ ಆಹಾರದಿಂದ ದೂರವಿರಿ
4. ಸಿಗರೇಟ್ ಮತ್ತು ಮದ್ಯವನ್ನು ತ್ಯಜಿಸಿ
5. ಪ್ರತಿದಿನ ಶಾಂಪೂ ಮಾಡಬೇಡಿ.
6. ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ

 ವಿಟಮಿನ್ ಬಿ 12 ಗಾಗಿ ಈ ಆಹಾರಗಳನ್ನು ಸೇವಿಸಿ : 
1. ಮೊಟ್ಟೆ
2. ಸೋಯಾಬೀನ್
3. ಮೊಸರು
4. ಓಟ್ಸ್
5. ಹಾಲು
6. ಚೀಸ್
7. ಬ್ರೊಕೊಲಿ
8. ಮೀನು
9. ಚಿಕನ್
10. ಅಣಬೆ

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ 2 ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತೆ ಗೊತ್ತಾ..?

( ಸೂಚನೆ : ಪ್ರಿಯ ಓದುಗರೇ, ನಮ್ಮ ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ನಾವು ಇದನ್ನು ಬರೆಯುವಲ್ಲಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News