Vande Bharat Express : ಕಲಬುರಗಿ - ಬೆಂಗಳೂರು ವಂದೇ ಭಾರತ್‌ನ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

Vande Bharat Express : ಕಲಬುರಗಿ ಮತ್ತು ಏಸ್‌ಎಂವಿಟಿ ಬೆಂಗಳೂರು ನಡುವೆ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಪ್ರಾರಂಭಗೊಳ್ಳಲು ಸಿದ್ದವಾಗಿದ್ದು, ರೈಲಿನ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ.

Written by - Zee Kannada News Desk | Last Updated : Mar 10, 2024, 06:53 PM IST
  • ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದರು
  • ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ತಾತ್ಕಾಲಿಕ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ.
  • ಕಲಬುರಗಿ ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚಾರ ಮಾಡುತ್ತದೆ.
Vande Bharat Express : ಕಲಬುರಗಿ - ಬೆಂಗಳೂರು ವಂದೇ ಭಾರತ್‌ನ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ  title=

Kalaburagi - Bangalore : ಗುರುವಾರ ಗುಲ್ಬರ್ಗ ಸಂಸದ ಉಮೇಶ ಜಾಧವ್ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದರು. ಈಗ ರೈಲ್ವೆ ಇಲಾಖೆ ಬಿಡುಗಡೆ ಮಾಡಿದ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಇದೀಗ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ ರೈಲು ಸಂಖ್ಯೆ 22232 ವಂದೇ ಭಾರತ್‌ ಎಕ್ಸ್‌ಪ್ರೆಸ್‌  ಕಲ್ಬುರ್ಗಿಯಿಂದ ಬೆಳಗ್ಗೆ 5.15ಕ್ಕೆ ಹೊರಡುತ್ತದೆ. ಇದು ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ ಬೆಂಗಳೂರಿಗೆ 2 ಗಂಟೆಗೆ ಬಂದು ತಲುಪುತ್ತದೆ. ಕಲಬುರಗಿಯಿಂದ ಹೊರಟು 5.40ಕ್ಕೆ ವಾಡಿ ನಿಲ್ದಾಣಕ್ಕೆ ಬಂದು ತಲುಪುತ್ತದೆ.6.53ಕ್ಕೆ ರಾಯಚೂರು ಬಂದು ತಲುತ್ತದೆ. ಅಲ್ಲಿ 2 ನಿಮಿಷ ನಿಲುಗಡೆ ಇರುತ್ತದೆ. ನಂತರ 6.55ಕ್ಕೆ ಹೊರಡುತ್ತದೆ. ಬಳಿಕ 7.08 ಮಂತ್ರಾಲಯ ತಲುಪುತ್ತದೆ. ಇಲ್ಲಿ 2 ನಿಮಿಷ ನಿಲುಗಡೆ ಇರುತ್ತದೆ. ನಂತರ ಅಲ್ಲಿಂದ 7.10ಕ್ಕೆ ಹೊರಡುತ್ತದೆ. ಅಲ್ಲಿಂದ ಗುಂತಕಲ್‌ಗೆ 8.25ಕ್ಕೆ ಬಂದು ಸೇರುತ್ತದೆ. ಅಲ್ಲಿ 5 ನಿಮಿಷ ನಿಲುಗಡೆ ಇರುತ್ತದೆ. 

ಇದನ್ನು ಓದಿ : Karataka Dhamanaka : ಮಾರ್ಚ್11 ಮತ್ತು 12ರಂದು ಉತ್ತರ ಕರ್ನಾಟಕದಲ್ಲಿ ಶಿವಣ್ಣ ವಿಜಯ ಯಾತ್ರೆ 

ನಂತರ ಅಲ್ಲಿಂದ 8.30ಕ್ಕೆ ಹೊರಡುತ್ತದೆ.ಬಳಿಕ 9.28ಕ್ಕೆ ಅನಂತಪುರಕ್ಕೆ ಬರುತ್ತದೆ. ಅಲ್ಲಿ 2 ನಿಮಿಷ ನಿಲುಗಡೆ ಹೊಂದಿರುತ್ತದೆ. ಬಳಿಕ 9.30ಕ್ಕೆ ಅನಂತಪುರದಿಂದ ಹೊರಟು 10.50ಕ್ಕೆ ಧರ್ಮವರಂಗೆ ಬಂದು ಸೇರುತ್ತದೆ. ಅಲ್ಲಿಂದ ಹೊರಟು 12.45ಕ್ಕೆ ಯಲಹಂಕಕ್ಕೆ ಬಂದು ಸೇರುತ್ತದೆ. ಯಲಹಂಕದಲ್ಲಿ 3 ನಿಮಿಷ ನಿಲುಗಡೆ ಇದ್ದು, 12.47ಕ್ಕೆ ಯಲಹಂಕದಿಂದ ಹೊರಟು ಸರ್‌ ಎಂ ವಿಶ್ವೇಶ್ವರಯ್ಯ ನಿಲ್ದಾಣ ಬೆಂಗಳೂರಿಗೆ 2 ಗಂಟೆಗೆ ಬರುತ್ತದೆ. 

ಬಳಿಕ ಹಿಂದಿರುಗುವ ಮಾರ್ಗದಲ್ಲಿ 2.40ಕ್ಕೆ ಸರ್‌ ಎಂ ವಿಶ್ವೇಶ್ವರಯ್ಯ ನಿಲ್ದಾಣ ಬೆಂಗಳೂರಿಂದ ಹೊರಡುತ್ತದೆ. ಅಲ್ಲಿಂದ ಯಲಹಂಕ ನಿಲ್ದಾಣಕ್ಕೆ 3.08 ಗಂಟೆಗೆ ಬರುತ್ತದೆ. ಅಲ್ಲಿ 2 ನಿಮಿಷ ನಿಲುಗಡೆ ಇರುತ್ತದೆ. ನಂತರ ಅಲ್ಲಿಂದ 3.10ಕ್ಕೆ ಹೊರಡು 5.45ಕ್ಕೆ ಧರ್ಮವರಂಗೆ ಬಂದು ಸೇರುತ್ತದೆ. ಅಲ್ಲಿಂದ ಹೊರಟು 5.48ಕ್ಕೆ ಅನಂತಪುರಕ್ಕೆ ಬರುತ್ತದೆ. ಅಲ್ಲಿ ಎರಡು ನಿಮಿಷ ನಿಲುಗಡೆ ಇರುತ್ತದೆ. ಅಲ್ಲಿಂದ 6 ಗಂಟೆಗೆ ಹೊರಟು ಗುಂತಕಲ್‌ಗೆ 7 ಗಂಟೆಗೆ ಬಂದು ತಲುಪುತ್ತದೆ, ಅಲ್ಲಿ 5 ನಿಮಿಷ ನಿಲುಗಡೆ ಇರುತ್ತದೆ. ಬಳಿಕ ಅಲ್ಲಿಂದ 6.05ಕ್ಕೆ ಹೊರಡುತ್ತದೆ.

ಇದನ್ನು ಓದಿ : Wheat Chapati: ಪ್ರತಿದಿನ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ತಿಂದರೆ ಏನೆಲ್ಲಾ ಲಾಭ ಗೊತ್ತಾ?

ನಂತರ ಮಂತ್ರಾಲಯಂಗೆ 8.15ಕ್ಕೆ ಬಂದು ಸೇರುತ್ತದೆ. ಅಲ್ಲಿ ಒಂದು ನಿಮಿಷ ನಿಲುಗಡೆ ಇರುತ್ತದೆ ನಂತರ 8.16ಕ್ಕೆ ಅಲ್ಲಿಂದ ಹೊರಡುತ್ತದೆ. ಬಳಿಕ ರಾಯಚೂರಿಗೆ 8. 45ಕ್ಕೆ ತಲುಪುತ್ತದೆ. ಅಲ್ಲಿ ಎರಡು ನಿಮಿಷ ನಿಲುಗಡೆ ಇರುತ್ತದೆ. ಅಲ್ಲಿಂದ 8.47ಕ್ಕೆ ಹೊರಟು 11.05ಕ್ಕೆ ವಾಡಿ ಬಂದು ಸೇರುತ್ತದೆ. ಕೊನೆಯ ನಿಲ್ದಾಣ ಕಲಬುರಗಿಗೆ 11.30ಕ್ಕೆ ಬಂದು ತಲುಪುತ್ತದೆ. 

ಕಲಬುರಗಿ ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚಾರ ಮಾಡುತ್ತದೆ. ಇದು ರಾಯಚೂರು, ಮಂತ್ರಾಲಯಂ, ಗುಂತಕಲ್‌, ಅನಂತಪುರಂ ಹಾಗೂ ಯಲಹಂಕದಲ್ಲಿ ನಿಲುಗಡೆ ಇರುತ್ತದೆ ಎಂದು ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News