ಹೆಸರಾಂತ ಉದ್ಯಮಿ ಸಿದ್ದಾರ್ಥ್ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ: ಮಾಜಿ ಪ್ರಧಾನಿ ಎಚ್‌ಡಿಡಿ

ಸುಮಾರು 35 ವರ್ಷಗಳಿಂದ ನಾನು ಸಿದ್ದಾರ್ಥ್ ಅವರನ್ನು ಬಲ್ಲೆ, ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲಾ ಎಂದರೆ ನನಗೆ ನಂಬಲಸಾಧ್ಯ- ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ

Last Updated : Jul 31, 2019, 08:50 AM IST
ಹೆಸರಾಂತ ಉದ್ಯಮಿ ಸಿದ್ದಾರ್ಥ್ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ: ಮಾಜಿ ಪ್ರಧಾನಿ ಎಚ್‌ಡಿಡಿ  title=
File Image

ಬೆಂಗಳೂರು: ಹೆಸರಾಂತ ಉದ್ಯಮಿ ವಿ.ಜಿ.ಸಿದ್ದಾರ್ಥ್ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ನಿಜಕ್ಕೂ ಅವರ ನಿಧನದಿಂದ ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಸಂತಾಪ ಸೂಚಿಸಿದ್ದಾರೆ.

ಸಿದ್ದಾರ್ಥ್ ಅವರದು ತುಂಬಾ ಸರಳ ವ್ಯಕ್ತಿತ್ವ, ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ, ಈ ದಿನ ಆ ನಂದಾದೀಪ ಆರಿಹೋದ ಸುದ್ದಿ ಕೇಳಿ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಡಿ ದೇಶಕ್ಕೆ ಕಗ್ಗತ್ತಲಾವರಿಸಿದೆ ಎಂದು ಎಚ್‌ಡಿಡಿ ದುಃಖ ವ್ಯಕ್ತಪಡಿಸಿದ್ದಾರೆ.

ಸುಮಾರು 35 ವರ್ಷಗಳಿಂದ ನಾನು ಸಿದ್ದಾರ್ಥ್ ಅವರನ್ನು ಬಲ್ಲೆ, ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲಾ ಎಂದರೆ ನನಗೆ ನಂಬಲಸಾಧ್ಯ. ಅವರ ಈ ದಾರುಣ ಸಾವಿಗೆ ಸರ್ಕಾರ ಸೂಕ್ತ ತನಿಖೆ ನಡೆಸಲಿ ಎಂದು ಎಚ್‌ಡಿಡಿ ಆಗ್ರಹಿಸಿದ್ದಾರೆ.
 
ಭಗವಂತ ಸಿದ್ಧಾರ್ಥ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂದುಗಳಿಗೆ ಅವರ ಅಭಿಮಾನಿಗಳಿಗೆ  ದೇವರು ದುಃಖ ಬರಿಸುವ ಶಕ್ತಿ ತುಂಬಲಿ ಎಂದು ಎಚ್.ಡಿ. ದೇವೇಗೌಡ ಪ್ರಾರ್ಥಿಸಿದ್ದಾರೆ.
 

Trending News