ರಾಜ್ಯಸಭೆ ಚುನಾವಣೆ : " ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ "

ರಾಜ್ಯದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ರಾಜ್ಯಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಂಸದ ಮುದ್ದೇಹನುಮೇಗೌಡರಿಗೆ ಅವಕಾಶ ಸಿಕ್ಕರೂ ಸಂತೋಷ ಎಂದು   ಡಿಕೆ ಸುರೇಶ್ ಹೇಳಿದ್ದಾರೆ. 

Written by - RACHAPPA SUTTUR | Edited by - Ranjitha R K | Last Updated : May 17, 2022, 02:29 PM IST
  • ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಸ್ವಾಗತ
  • "ಪಕ್ಷದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಚರ್ಚಿಸಿ ಈ ಬಗ್ಗೆ ನಿರ್ಧಾರ "
  • ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ವಿಶೇಷವಾದ ರೀತಿ ಚರ್ಚೆ - ಡಿಕೆಸು
ರಾಜ್ಯಸಭೆ ಚುನಾವಣೆ : " ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ " title=
DK Suresh (file photo)

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ನಡೆಸುವುದಾದರೆ ಸ್ವಾಗತ ಎಂದು, ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ಸಿದ್ದರಾಮಯ್ಯ ನಿವಾಸದಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಹಾಗೂ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. 

ಪಕ್ಷದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಚರ್ಚಿಸಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.  ರಾಜ್ಯದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧೆ ವಿಚಾರವಾಗಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವರು ರಾಜ್ಯಕ್ಕೆ ಬಂದರೆ ಸ್ವಾಗತ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಸಂಸದ ಮುದ್ದೇಹನುಮೇಗೌಡರಿಗೆ ಅವಕಾಶ ಸಿಕ್ಕರೂ ಸಂತೋಷ ಎಂದು  ಹೇಳಿದ್ದಾರೆ. 

ಇದನ್ನೂ ಓದಿ : ರಾಜ್ಯದಲ್ಲಿ ಯಾವುದೇ ರೀತಿಯ ಆಮಿಷದ-ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ  ವಿಶೇಷವಾದ ರೀತಿ ಚರ್ಚೆ ಆಗಿದೆ. ಎಲ್ಲ ವಯೋಮಿತಿಯವರು ಪ್ರತಿಯೊಂದು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಒಂದಷ್ಟು ಒಳ್ಳೆಯ ಸಲಹೆಗಳು ಬಂದಿದೆ, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಾಕಷ್ಟು ಬದಲಾವಣೆಯ  ನಿರೀಕ್ಷೆ ಇದೆ ಎಂಡು ತಿಳಿಸಿದ್ದಾರೆ. 

ಪಠ್ಯದಲ್ಲಿ ಭಗತ್ ಸಿಂಗ್ ಕೈಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಆರ್ ಎಸ್ ಎಸ್ ನವರು ಯಾವ್ಯಾವ ವಿಚಾರಧಾರೆಗಳನ್ನು ಯುವಕರ ಮನಸ್ಸಿನಲ್ಲಿ ತರಬೇಕು ಎಂದಿದ್ದಾರೋ  ಗೊತ್ತಿಲ್ಲ. ದೇಶ ಬಹು ಸಂಸ್ಕೃತಿಯ ಇತಿಹಾಸ ಹೊಂದಿದೆ. ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ.ಎಲ್ಲ ವಿಚಾರದಲ್ಲಿ ಜನರನ್ನು ಗೊಂದಲದಲ್ಲಿ ಇಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : Sunny Leone: ಮಂಡ್ಯ ಫ್ಯಾನ್ಸ್ ಅಭಿಮಾನಕ್ಕೆ ಫಿದಾ ಆದ್ರು ಸನ್ನಿ ಲಿಯೋನ್‌: ಟ್ವೀಟ್‌ ಮಾಡಿದ್ದೇನು ಗೊತ್ತಾ!

ಪಿಎಸ್ ಐ ಅಕ್ರಮ ಮಾತ್ರ ಅಲ್ಲ, ಜಿಇ ನೇಮಕಾತಿಯಲ್ಲೂ ಹಗರಣ ಆಗಿದೆ. ಸರ್ಕಾರವೇ ಅಲುಗಾಡುವಂತಹ ಹಗರಣವನ್ನು ಮುಚ್ಚಿಹಾಕಲು ಬೇಕಾದ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಯುವಕರ ಭವಿಷ್ಯ ಹಾಳು ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ‌. ಪಿಎಸ್ ಐ ಹಗರಣದ ಬಗ್ಗೆ ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಯಲಿ. ಮುಖ್ಯಮಂತ್ರಿಗಳೇ ಇದರಲ್ಲಿ ಪಾಲುದಾರರು, ಅವರಿಗೆ ರಾಜ್ಯದ ಯುವಕರ ಬಗ್ಗೆ ಗಮನ ಇರಬೇಕು. ಹಗರಣದ ಬಗ್ಗೆ  ಸರ್ಕಾರ ತನಿಖೆ ಮಾಡುತ್ತಿಲ್ಲ, ಬದಲಾಗಿ ಮುಚ್ಚಿ  ಹಾಕುತ್ತಿದೆ ಎಂದು ಡಿಕೆ ಸುರೇಶ್ ಆರೋಪಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News