ತಮ್ಮ ಪ್ರೀತಿಯ ನಾಯಿಯೊಂದಿಗೆ 777 ಚಾರ್ಲಿ ಸಿನಿಮಾ ನೋಡಿದ ಜನಾರ್ಧನ ರೆಡ್ಡಿ

ರಕ್ಷಿತ್ ಶೆಟ್ಟಿ ಅಭಿನಯದ  777 ಚಾರ್ಲಿ ಸಿನಿಮಾ ಈಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಜನಾರ್ಧನರೆಡ್ಡಿ ಈಗ ತಮ್ಮ ಮುದ್ದಿನ ನಾಯಿ ಜೊತೆ ಈಗ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಿದ್ದಾರೆ.

Last Updated : Jun 26, 2022, 06:42 PM IST
  • ಚಾರ್ಲಿ ಮತ್ತು ಧರ್ಮನ ಕಥೆ ಈ ಹೇಳುವ ಚಿತ್ರವು ಪ್ರಾಣಿಯ ಮೇಲಿನ ಪ್ರೀತಿಯನ್ನು ಅತ್ಯಂತ್ಯ ಮನೋಜ್ಞವಾಗಿ ಚಿತ್ರಿಸಲಾಗಿದೆ.
ತಮ್ಮ ಪ್ರೀತಿಯ ನಾಯಿಯೊಂದಿಗೆ 777 ಚಾರ್ಲಿ ಸಿನಿಮಾ ನೋಡಿದ ಜನಾರ್ಧನ ರೆಡ್ಡಿ  title=

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ  777 ಚಾರ್ಲಿ ಸಿನಿಮಾ ಈಗ ದೇಶಾದ್ಯಂತ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಾಜಿ ಸಚಿವ ಜನಾರ್ಧನರೆಡ್ಡಿ ಈಗ ತಮ್ಮ ಮುದ್ದಿನ ನಾಯಿ ಜೊತೆ ಈಗ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡಿದ್ದಾರೆ.

ಈ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಹಿಂದೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಚಿತ್ರದ ಮನೋಜ್ಞತೆ ಬೆರಗಾಗಿ ಅವರು ಕಣ್ಣೀರು ಸುರಿಸಿದ್ದರು. ಇದಾದ ನಂತರ ರಾಜ್ಯ ಸರ್ಕಾರ ರಾಜ್ಯದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಘೋಷಿಸಿತ್ತು.

ಚಾರ್ಲಿ ಮತ್ತು ಧರ್ಮನ ಕಥೆ ಈ ಹೇಳುವ ಚಿತ್ರವು ಪ್ರಾಣಿಯ ಮೇಲಿನ ಪ್ರೀತಿಯನ್ನು ಅತ್ಯಂತ್ಯ ಮನೋಜ್ಞವಾಗಿ ಚಿತ್ರಿಸಲಾಗಿದೆ.ಈ ಚಿತ್ರಕ್ಕೆ ದೇಶಾದ್ಯಂತ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದಲ್ಲದೆ, ಈ ರೀತಿಯ ಪ್ರಾಣಿ ಜೊತೆಗಿನ ಮನುಷ್ಯನ ಸಂಬಂಧವನ್ನು ಹೇಳುವ ಈ ಚಿತ್ರ ಭಾರತೀಯ ಸಿನಿಮಾದಲ್ಲಿಯೇ ಒಂದು ಅಪರೂಪದ ಪ್ರಯೋಗ ಎಂದು ಹೇಳಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

.

Trending News