ಹಾಸನ ಜಿಲ್ಲೆಯಲ್ಲಿ ಭೂಕಂಪದ ಅನುಭವ

ಭೂಕಂಪದ ರಭಸಕ್ಕೆ ಭಾರೀ ಭೂ ಕುಸಿತ.

Last Updated : Aug 21, 2018, 12:50 PM IST
ಹಾಸನ ಜಿಲ್ಲೆಯಲ್ಲಿ ಭೂಕಂಪದ ಅನುಭವ title=

ಹಾಸನ: ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿರುವ ಕರುನಾಡಿಗೆ ಈಗ ಭೂಕಂಪನದ ಭೀತಿ ಎದುರಾಗಿದೆ. ಹಾಸನ ಜಿಲ್ಲೆಯ ಹಿಜ್ಜನಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಭೂಕಂಪ ಸಂಭವಿಸಿರುವ ಬಗ್ಗೆ ಎಂದು ವರದಿಯಾಗಿದೆ. ಅಲ್ಲದೆ ಜಿಲ್ಲೆಯ ಬಿಸಿಲೆ ಗ್ರಾಮದಲ್ಲೂ ಕೂಡ ಭೂಕಂಪನದ ಅನುಭವವಾಗಿರುವ ಬಗ್ಗೆ ವರದಿಗಳಾಗಿವೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಗ್ರಾಮದಲ್ಲಿ ಭೂಕಂಪನದ ರಭಸಕ್ಕೆ ಸುಮಾರು 4 ಕಿ.ಮೀ. ನಷ್ಟು ಕಾಂಕ್ರೀಟ್ ರಸ್ತೆ ಹುದುಗಿಹೊಗಿದ್ದು, ದೊಡ್ಡ ಬಂಡೆಗಳು ಛಿದ್ರ ಛಿದ್ರವಾಗಿದ್ದು, ಹಲವಾರು ಮರಗಳು ನಾಶವಾಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಲ್ಲದೆ ಭೂಕಂಪದಿಂದಾಗಿ ನೂರಾರು ಮನೆಗಳು ಬಿರುಕು ಬಿಟ್ಟಿದ್ದು, ಕೆಲವು ಮನೆಗಳು ನೆಲಸಮವಾಗಿದೆ. ಸಕಲೇಶಪುರದ ವಿವಿಧೆಡೆ ಭೂಕುಸಿತ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.

ಇನ್ನು ಭೂಕಂಪದಿಂದಾಗಿ ಮನೆಗಳು ಬಿರುಕು ಬಿಟ್ಟಿರುವುದಕ್ಕೆ ಹೆದರಿ ಹಿಜ್ಜನಹಳ್ಳಿಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಖಾಲಿಯಾಗಿದೆ.

Trending News