Davanagere Lok Sabha constituency: ಯಾರೇ ಗೆದ್ದರೂ ದಾವಣಗೆರೆಗೆ ಮೊದಲ ಮಹಿಳಾ ಸಂಸದೆ!

Lokshabha Elections 2024: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಎರಡು ಕುಟುಂಬಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ವಿಶೇಷವೆಂದರೆ ಈ ಬಾರಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಪತ್ನಿಯರ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯುತ್ತಿದೆ. ಇಬ್ಬರು ಮಹಿಳಾಮಣಿಗಳ ನಡುವಿನ ಈ ಕದನದಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದ್ದು, ಕ್ಷೇತ್ರಕ್ಕೆ ಮೊದಲ ಮಹಿಳಾ ಸಂಸದೆ ಸಿಗಲಿದ್ದಾರೆ.

Written by - Puttaraj K Alur | Last Updated : May 8, 2024, 09:02 PM IST
  • ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕರ ಪತ್ನಿಯರ ಕದನ!
  • ಬಿಜೆಪಿಯ ಗಾಯತ್ರಿ ಸಿದ್ದೇಶ್ವರ್ vs ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ್ ಫೈಟ್‌!
  • ಯಾರೇ ಗೆದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ
Davanagere Lok Sabha constituency: ಯಾರೇ ಗೆದ್ದರೂ ದಾವಣಗೆರೆಗೆ ಮೊದಲ ಮಹಿಳಾ ಸಂಸದೆ!  title=
ದಾವಣಗೆರೆ ಲೋಕಸಭಾ ಕ್ಷೇತ್ರ

Davanagere Lok Sabha constituency: ದಾವಣಗೆರೆ ಸೇರಿದಂತೆ ಕರ್ನಾಟಕದ ೧೪ ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ೨ನೇ ಹಂತದ ಮತದಾನ ನಡೆದಿದೆ. ಜಿಲ್ಲೆಯ ಪ್ರತಿಸ್ಪರ್ಧಿ ಕುಟುಂಬದ ಇಬ್ಬರು ಪ್ರಭಾವಿ ನಾಯಕರ "ಪತ್ನಿಯರ ಕದನ"ಕ್ಕೆ ಸಾಕ್ಷಿಯಾಗಿದೆ. ಈ ಕ್ಷೇತ್ರದ ಚುನಾವಣೆ ಇತಿಹಾಸ ಸೃಷ್ಟಿಸಲು ಸಜ್ಜಾಗಿದ್ದು, ಈ ಇಬ್ಬರಲ್ಲಿ ಯಾರೇ ಗೆದ್ದರೂ ದಾವಣಗೆರೆಗೆ ಮೊದಲ ಮಹಿಳಾ ಸಂಸದೆಯಾಗಲಿದ್ದಾರೆ.

ದಾವಣಗೆರೆ ಲೋಕಸಭಾ ಕ್ಷೇತ್ರವು 1977ರಲ್ಲಿ ತನ್ನ ಮೊದಲ ಚುನಾವಣೆಯನ್ನು ಕಂಡಿತು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ ೬ ಬಾರಿ ಗೆಲುವುಗಳನ್ನು ದಾಖಲಿಸಿವೆ. ಈ ಕ್ಷೇತ್ರವು ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1996ರಲ್ಲಿ ಮೊದಲ ಬಾರಿಗೆ ಬಿಜೆಪಿಯ ಕೈವಶವಾಯಿತು. 1998ರಲ್ಲಿ ಕಾಂಗ್ರೆಸ್ ಮತ್ತೆ ಗೆದ್ದರೂ, 1999ರಲ್ಲಿ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲವಾಯಿತು. ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ಸತತವಾಗಿ ಗೆಲುವು ಸಾಧಿಸಿದೆ. 

ಪ್ರಭಾವಿ ಕುಟುಂಬಗಳ ನಡುವಿನ ಕದನ!

ಕುತೂಹಲಕಾರಿ ಸಂಗತಿಯೆಂದರೆ, ದಾವಣಗೆರೆ ಕ್ಷೇತ್ರಕ್ಕೆ 1996ರಿಂದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಎರಡು ಪ್ರಭಾವಿ ಕುಟುಂಬಗಳ ನಡುವಿನ ಕದನವಾಗಿದೆ. ಎರಡೂ ಕುಟುಂಬಗಳು ಜಿಲ್ಲೆಯಲ್ಲಿ ಜನಸಂಖ್ಯಾ ದೃಷ್ಟಿಯಿಂದ ಪ್ರಬಲವಾದ ಲಿಂಗಾಯತ ಸದರ್ (ಸಾದು) ಸಮುದಾಯಕ್ಕೆ ಸೇರಿವೆ. ಸಿದ್ದೇಶ್ವರ್ ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ 1996ರಲ್ಲಿ ಬಿಜೆಪಿಯಿಂದ ಗೆದ್ದಿದ್ದರು. 1998ರಲ್ಲಿ ಶಿವಶಂಕರಪ್ಪ ಕಾಂಗ್ರೆಸ್‌ನಿಂದ ಗೆದ್ದರೆ, 1999ರಲ್ಲಿ ಮತ್ತೆ ಈ ಕ್ಷೇತ್ರವು ಮಲ್ಲಿಕಾರ್ಜುನಪ್ಪನವರ ಕೈವಶವಾಯಿತು.

ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸ

Year Member Party
1971 Kondajji Basappa     Indian National Congress
1977
1980 TV Chandrashekharappa   Indian National Congress
1984 Channaiah Odeyar     Indian National Congress
1989
1991
1996 G Mallikarjunappa   Bharatiya Janata Party
1998 Shamanuru Shivashankarappa    Indian National Congress
1999 G Mallikarjunappa   Bharatiya Janata Party
2004 GM Siddeshwara
2009
2014
2019

ತಂದೆಯ ನಿಧನದ ನಂತರ ಸಿದ್ದೇಶ್ವರ್ ಅವರು 2004ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿದ್ದ ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಜಯಗಳಿಸಿದ್ದರು. 2009 ಮತ್ತು 2014ರಲ್ಲಿ ಮತ್ತೆ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆದರೆ ಸಿದ್ದೇಶ್ವರ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ 2019ರಲ್ಲಿ ಶಾಮನೂರು ಕುಟುಂಬ ಕಾಂಗ್ರೆಸ್‌ನ ಅಭ್ಯರ್ಥಿ ಎಚ್‌.ಬಿ.ಮಂಜಪ್ಪರನ್ನು ಬೆಂಬಲಿಸಿತ್ತು. ಆದರೆ ಸಿದ್ದೇಶ್ವರ್ ಅವರು ಬರೋಬ್ಬರಿ 1,69,702 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2019ರ ಲೋಕಸಭಾ ಚುನಾವಣಾ ಫಲಿತಾಂಶ

 
Party Candidate Votes % ±%
  BJP GM Siddeshwara 652,996 54.66  
  INC HB Manjappa 4,83,294 40.46  
  BSP Siddappa BH 7,736 0.65  
  IND Manjunatha Marikoppa 5,947 0.50  
Margin of victory 1,69,702 14.20  
Turnout 11,95,225 73.19  
  BJP hold Swing    

2014ರ ಲೋಕಸಭಾ ಚುನಾವಣಾ ಫಲಿತಾಂಶ

 
Party Candidate Votes % ±%
  BJP GM Siddeshwara 518,894 46.54  
  INC SS Mallikarjun 5,01,287 44.96  
  JD(U) Mahima Patel 46,911 4.21  
  CPI Com H. K. Ramachandrappa 8,064 0.72  
Margin of victory 17,607 1.58  
Turnout   11,15,132 73.23  
  BJP hold Swing    

ಇದನ್ನೂ ಓದಿ: ಬೆಳ್ತಂಗಡಿಯ ಮಾಜಿ ಶಾಸಕ ಕೆ.ವಸಂತ ಬಂಗೇರ ವಿಧಿವಶ

ಯಾರೇ ಗೆದ್ದರೂ ಕ್ಷೇತ್ರದಲ್ಲಿ ಇತಿಹಾಸ!

ಈ ಬಾರಿ ಎರಡು ಕುಟುಂಬಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ವಿಶೇಷವೆಂದರೆ ಈ ಬಾರಿ ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಪತ್ನಿಯರ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯುತ್ತಿದೆ. ಇಬ್ಬರು ಮಹಿಳಾಮಣಿಗಳ ನಡುವಿನ ಈ ಕದನದಲ್ಲಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದ್ದು, ಕ್ಷೇತ್ರಕ್ಕೆ ಮೊದಲ ಮಹಿಳಾ ಸಂಸದೆ ಸಿಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರಾಗಿದ್ದ ಸಿದ್ದೇಶ್ವರ್ ಅವರ ಬದಲಿಗೆ ಬಿಜೆಪಿಯಿಂದ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಕಣಕ್ಕಿಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. 

2024ರ ಲೋಕಸಭಾ ಚುಣಾವಣೆ

ಅಭ್ಯರ್ಥಿಗಳು ಪಕ್ಷ
ಗಾಯತ್ರಿ ಸಿದ್ದೇಶ್ವರ್ ಬಿಜೆಪಿ
ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್

ಕುತೂಹಲಕಾರಿ ಸಂಗತಿ ಎಂದರೆ ಕಣದಲ್ಲಿ ಇತರ ಮೂವರು ಮಹಿಳೆಯರು ಸಹ ಸ್ಪರ್ಧಿಸಿದ್ದಾರೆ. ಮುಸ್ಲಿಂ ಸಮುದಾಯದ ಇಬ್ಬರು ಮತ್ತು ಬಿಜೆಪಿ ಅಭ್ಯರ್ಥಿಯ ಹೆಸರನ್ನು ಹೋಲುವ ಒಬ್ಬರು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ರಾಷ್ಟ್ರೀಯ ಪಕ್ಷಗಳ ಇಬ್ಬರೂ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಘೋಷಣೆಯಾಗುವವರೆಗೂ ರಾಜಕೀಯವಾಗಿ ಅಷ್ಟೊಂದು ಸಕ್ರಿಯರಾಗಿರಲಿಲ್ಲ. ಆದರೆ ಸುಡುವ ಬಿಸಿಲಿನಲ್ಲೂ ಮತದಾರರನ್ನು ಒಲಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದ್ದಾರೆ.

ಇದನ್ನೂ ಓದಿ: OMG: 810KG ತೂಕದ 666 ಕೋಟಿ ಮೌಲ್ಯದ ಚಿನ್ನಾಭರಣವಿದ್ದ ವಾಹನ ಪಲ್ಟಿ!

ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭಿನ್ನಮತ ಎದುರಿಸಿವೆ. ಬಿಜೆಪಿಯು ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಮತ್ತು ನಾಯಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರೆ, ಕಾಂಗ್ರೆಸ್ ವಿಫಲವಾಯಿತು. ಇದರ ಪರಿಣಾಮ ಕುರುಬ ಸಮುದಾಯದಿಂದ ಜಿಬಿ ವಿನಯ್‌ಕುಮಾರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ರಾಜಕೀಯ ಪಂಡಿತರ ಪ್ರಕಾರ, ವಿನಯ್‌ಕುಮಾರ್ ಅವರು ಯುವ ಮತದಾರರಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವುದರಿಂದ ಎರಡೂ ರಾಷ್ಟ್ರೀಯ ಪಕ್ಷಗಳ ಮತಗಳು ಒಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ‌

ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಬಲಾಬಲ

No Name District Member Party
103 Jagalur (ST) Davanagere and Vijayanagara B. Devendrappa   INC
104  Harapanahalli  Vijayanagara Latha Mallikarjun   Ind
105 Harihar   Davanagere  BP Harish   BJP
106 Davanagere North SS Mallikarjun       INC
107 Davanagere South Shamanuru Shivashankarappa    INC
108 Mayakond (SC) K. S. Basavanthappa   INC
109 Channagiri  Basavaraju V Shivaganga   INC
110 Honnali D. G. Shanthana Gowda   INC

ಇತ್ತೀಚೆಗಷ್ಟೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿಎಂ ಸಿದ್ದರಾಮಯ್ಯನವರು ತಮ್ಮ ಸಮುದಾಯದ ಯುವ ನಾಯಕನಿಗೆ ಬೆಂಬಲವಿಲ್ಲವೆಂದು ಸ್ಪಷ್ಟಪಡಿಸಿದ್ದರು. ತಮ್ಮ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ಗೆ ಮತ ಹಾಕಿ ಗೆಲ್ಲಿಸಿದರೆ ನನಗೆ ವೋಟು ಹಾಕಿ ಗೆಲ್ಲಿಸಿದಂತೆ. ಹೀಗಾಗಿ ವಿನಯ್‌ಕುಮಾರ್‌ನನ್ನು ತಿರಸ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಲೋಕಸಭೆ ಕ್ಷೇತ್ರದ ೬ ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, ಒಬ್ಬ ಪಕ್ಷೇತರ ಶಾಸಕನ ಬೆಂಬಲವನ್ನು ಬಿಜೆಪಿ ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News