ರಾಮನನ್ನೇ ಇಬ್ಭಾಗ ಮಾಡಲು ಹೊರಟಿದೆ ಕಾಂಗ್ರೆಸ್: ಸಚಿವ ಜೋಶಿ ಆಕ್ರೋಶ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಲ್ಲೂ ರಾಜಕಾರಣ ಮಾಡುವ ನಿಮ್ಮದು ನೀಚ ರಾಜಕಾರಣ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಜರಿದಿದ್ದಾರೆ.

Written by - Prashobh Devanahalli | Last Updated : Jan 23, 2024, 09:41 AM IST
  • ಶ್ರೀರಾಮ ಭಾರತೀಯರ ಅಸ್ಮಿತೆಯ ಸಂಕೇತ.
  • ನಮ್ಮ ಮಣ್ಣಿನ ಮಹೋನ್ನತ ಇತಿಹಾಸವನ್ನು ಸಾರುವ ಮರ್ಯಾದಾ ಪುರುಷೋತ್ತಮ.
  • ಅಂಥ ಮಹಾಮಹಿಮನ ಹೆಸರಿಗೆ ಮಸಿ ಬಳೆದ ನಿಮ್ಮ ಪಕ್ಷಕ್ಕೆ ಈಗ ರಾಮ ರಾಜ್ಯದ ಕನಸೇ..?
ರಾಮನನ್ನೇ ಇಬ್ಭಾಗ ಮಾಡಲು ಹೊರಟಿದೆ ಕಾಂಗ್ರೆಸ್: ಸಚಿವ ಜೋಶಿ ಆಕ್ರೋಶ title=

Lord Rama: ಬಿಜೆಪಿಯವರ ರಾಮ, ಕಾಂಗ್ರೆಸ್ ನವರ ರಾಮ ಎನ್ನುತ್ತ ರಾಮನನ್ನೇ ಇಬ್ಭಾಗ ಮಾಡುವ ಪ್ರಯತ್ನ ಮಾಡುತ್ತಿದ್ದೀರಿ. ಧಿಕ್ಕಾರವಿರಲಿ ನಿಮ್ಮ ಕಾಂಗ್ರೆಸ್ ಪಕ್ಷದ ನೀಚ ರಾಜಕಾರಣಕ್ಕೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ರಾಮ ರಾಜ್ಯದ ಕನಸು ನಮ್ಮ ಗ್ಯಾರಂಟಿಗಳಿಂದ ನನಸು ಎಂಬ ಪೋಸ್ಟರ್ ಟ್ವೀಟರ್, ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಟ್ಟಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಪ್ರಾಣ ಪ್ರತಿಷ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವಲ್ಲೂ ರಾಜಕಾರಣ ಮಾಡುವ ನಿಮ್ಮದು ನೀಚ ರಾಜಕಾರಣ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಜರಿದಿದ್ದಾರೆ.

ಇದನ್ನೂ ಓದಿ- ಉದ್ದಿಮೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಇಲ್ಲದಿದ್ದರೆ ಪರವಾನಿಗೆ ರದ್ದು

ಶ್ರೀರಾಮ ಭಾರತೀಯರ ಅಸ್ಮಿತೆಯ ಸಂಕೇತ. ನಮ್ಮ ಮಣ್ಣಿನ ಮಹೋನ್ನತ ಇತಿಹಾಸವನ್ನು ಸಾರುವ ಮರ್ಯಾದಾ ಪುರುಷೋತ್ತಮ. ಅಂಥ ಮಹಾಮಹಿಮನ ಹೆಸರಿಗೆ ಮಸಿ ಬಳೆದ ನಿಮ್ಮ ಪಕ್ಷಕ್ಕೆ ಈಗ ರಾಮ ರಾಜ್ಯದ ಕನಸೇ..? ಎಂದು ಪ್ರಶ್ನಿಸಿದ್ದಾರೆ.

ರಾಮ ಎಲ್ಲಿದ್ದಾನೆ? ಎಂದವರು ರಾಮನ ಜನನ ಪತ್ರ ಬಯಸಿದವರು, ರಾಮನನ್ನ ನ್ಯಾಯಾಲಯದಲ್ಲಿ ನಿಲ್ಲಿಸಲು ಹಾತೊರೆದವರು, ಕೋಮುಗಲಭೆ ಆಗಬಹುದೆಂಬ ನೆಪವೊಡ್ಡಿ ರಾಮ ಜನ್ಮಭೂಮಿಯ ತೀರ್ಪನ್ನು ಕೊಡದಂತೆ ಆಗ್ರಹಿಸಿದವರು ಈಗ ಬಣ್ಣ ಬದಲಿಸಿದ ಊಸರವಳ್ಳಿಗಳಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಜೋಶಿ ಹರಿ  ಹಾಯ್ದಿದ್ದಾರೆ.

ಇದನ್ನೂ ಓದಿ- ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿ ಗಣತಿ ಮೂಲಕ ಜನರನ್ನು ಜಾತಿಯ ಹೆಸರಲ್ಲಿ ಒದೆಯೋ ಹುನ್ನಾರ ಮಾಡಿದ್ದೀರಿ ಎಂದು ಜೋಶಿ ಆರೋಪಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News