Chamarajanagar: ಇಲ್ಲೊಂದು ಪುರುಷರ ಬಳಿಕ‌ ಮಹಿಳೆಯರು ತೇರು ಎಳೆಯುವ ವಿಶೇಷ ಜಾತ್ರೆ..!

Chamarajanagar: ರಾಘವಾಪುರ ಗ್ರಾಮದಲ್ಲಿ ಮಾ.23 ಮತ್ತು 24ರಂದು ಎರಡು ದಿನಗಳ ಕಾಲ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಮಾ.23ರ ಶನಿವಾರ ಪುರುಷರು ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ನಂತರ ರಥದಲ್ಲಿ ಕೂರಿಸಿ ತೇರು ಎಳೆದರು.

Written by - Manjunath Naragund | Last Updated : Mar 24, 2024, 07:06 PM IST
  • ದೇವಾಲಯವನ್ನು ತಳಿರು, ತೋರಣ ಹಾಗೂ ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು
  • ಶನಿವಾರ ಮತ್ತು ಭಾನುವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು
  • ಬೇಗೂರು, ಗುಂಡ್ಲುಪೇಟೆ ಸೇರಿದಂತೆ ಸುತ್ತಮುತ್ತಲು ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು
Chamarajanagar: ಇಲ್ಲೊಂದು ಪುರುಷರ ಬಳಿಕ‌ ಮಹಿಳೆಯರು ತೇರು ಎಳೆಯುವ ವಿಶೇಷ ಜಾತ್ರೆ..! title=

Chamarajanagar: ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಸಂಜೆ ಮಹಿಳೆಯರೇ ಸ್ವತಃ ರಥ ಎಳೆಯುವ ಮೂಲಕ ಭಕ್ತ ಸಮರ್ಪಿಸಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ ಫಿಕ್ಸ್‌ ಆಗ್ತಿದ್ದಂತೆ BJP ಅಲರ್ಟ್‌

ರಾಘವಾಪುರ ಗ್ರಾಮದಲ್ಲಿ ಮಾ.23 ಮತ್ತು 24ರಂದು ಎರಡು ದಿನಗಳ ಕಾಲ ನಡೆದ ಪಟ್ಟಲದಮ್ಮ ಜಾತ್ರಾ ಮಹೋತ್ಸವದಲ್ಲಿ ಮೊದಲ ದಿನ ಮಾ.23ರ ಶನಿವಾರ ಪುರುಷರು ಪಟ್ಟಲದಮ್ಮ ದೇವಿಯ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ನಂತರ ರಥದಲ್ಲಿ ಕೂರಿಸಿ ತೇರು ಎಳೆದರು. ಮರು ದಿನವಾದ ಮಾ.24 ಭಾನುವಾರ ಮಹಿಳೆಯರು ರಥ ಎಳೆಯುವುದು ಇಲ್ಲಿನ ವಾಡಿಕೆಯಾಗಿದ್ದು, ಸಂಪ್ರದಾಯಯದಂತೆ ನೂರಾರು ಮಂದಿ ಮಹಿಳೆಯರು ರಥ ಎಳೆದು ಜಾತ್ರೆಗೆ ಮೆರುಗು ನೀಡಿದರು.

ಇದನ್ನೂ ಓದಿ: ಗ್ರಾಹಕರ ಹಣ ಜಮಾ ಮಾಡದೇ 26 ಲಕ್ಷ ಗುಳುಂ ಮಾಡಿದ ಬ್ಯಾಂಕ್ ಕ್ಯಾಷಿಯರ್!

ಜಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಹೊರ ವಲಯದಲ್ಲಿರುವ ಪಟ್ಟಲದಮ್ಮ ದೇವಾಲಯವನ್ನು ತಳಿರು, ತೋರಣ ಹಾಗೂ ವಿವಿಧ ರೀತಿಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು. ಬೇಗೂರು, ಗುಂಡ್ಲುಪೇಟೆ ಸೇರಿದಂತೆ ಸುತ್ತಮುತ್ತಲು ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಈಡುಗಾಯಿ ಒಡೆದು ಹರಕೆ ತೀರಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News