ಪ್ರಿಯಾಂಕಾ ಗಾಂಧಿ ಕಾರ್ಯಕ್ರಮ ‘ನಾ ನಾಯಕಿ’ ಅಲ್ಲ, ನಾ ನಾಲಾಯಕಿ: ಅಶ್ವತ್ಥ ನಾರಾಯಣ ವ್ಯಂಗ್ಯ

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ನಡೆಸಿ ಅವಿರತವಾಗಿ ಪ್ರಯತ್ನ ಮಾಡಿದರೂ ಏನು ಪ್ರತಿಫಲ ತಂದುಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಅವರು ಸಿಂಗಲ್ ಡಿಜಿಟ್ ಗೂ ಬರಲಿಲ್ಲ. ಅವರು ಇಲ್ಲಿ ಬಂದು ಏನು ಮಾಡುತ್ತಾರೆ. ಅವರು ಕೂಡ ಇಲ್ಲಿರುವ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳಲಿದ್ದಾರೆ ಅಷ್ಟೆ.

Written by - Prashobh Devanahalli | Edited by - Bhavishya Shetty | Last Updated : Jan 16, 2023, 02:12 PM IST
    • ಬೆಂಗಳೂರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮ ನಾ ನಾಯಕಿ ಅಲ್ಲ, ನಾ ನಾಲಾಯಕಿ
    • ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ವ್ಯಂಗ್ಯ
    • ಉತ್ತರ ಪ್ರದೇಶ ರೀತಿಯ ಫಲಿತಾಂಶವೇ ಅವರಿಗೆ ಸಿಗಲಿದೆ ಎಂದು ಹೇಳಿಕೆ
ಪ್ರಿಯಾಂಕಾ ಗಾಂಧಿ ಕಾರ್ಯಕ್ರಮ ‘ನಾ ನಾಯಕಿ’ ಅಲ್ಲ, ನಾ ನಾಲಾಯಕಿ: ಅಶ್ವತ್ಥ ನಾರಾಯಣ ವ್ಯಂಗ್ಯ title=
Ashwath Narayan

ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮ ನಾ ನಾಯಕಿ ಅಲ್ಲ, ನಾ ನಾಲಾಯಕಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ವ್ಯಂಗ್ಯವಾಡಿದ್ದು, ಇಡೀ ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತ ಪಕ್ಷವಾಗಿದ್ದು, ಅವರು ಏನೇ ಮಾಡಿದರೂ ಉತ್ತರ ಪ್ರದೇಶ ರೀತಿಯ ಫಲಿತಾಂಶವೇ ಅವರಿಗೆ ಸಿಗಲಿದೆ ಎಂದಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ನಡೆಸಿ ಅವಿರತವಾಗಿ ಪ್ರಯತ್ನ ಮಾಡಿದರೂ ಏನು ಪ್ರತಿಫಲ ತಂದುಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಅವರು ಸಿಂಗಲ್ ಡಿಜಿಟ್ ಗೂ ಬರಲಿಲ್ಲ. ಅವರು ಇಲ್ಲಿ ಬಂದು ಏನು ಮಾಡುತ್ತಾರೆ. ಅವರು ಕೂಡ ಇಲ್ಲಿರುವ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳಲಿದ್ದಾರೆ ಅಷ್ಟೆ. ಇಡೀ ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ. ಸಂಪೂರ್ಣವಾಗಿ ಕಾಂಗ್ರೆಸ್ ಅಪ್ರಸ್ತುತ ಪಕ್ಷವಾಗಿದೆ. ಜನ ಯಾವ ರೀತಿಯಿಂದಲೂ ಅವರನ್ನು ಎದುರು ನೋಡುತ್ತಿಲ್ಲ, ಅವರಿಗೆ ಸ್ಪಷ್ಟತೆ ಇಲ್ಲ. ದೇಶ ಮೊದಲು, ದೇಶದ ಶ್ರೇಯೋಭಿವೃದ್ಧಿ ಮೊದಲು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Shocking: ಯೂಟ್ಯೂಬ್ ನೋಡಿ ಆತ್ಮಹತ್ಯೆ ಮಾಡಿಕೊಂಡ 11 ವರ್ಷದ ಬಾಲಕಿ..!

ಕೋವಿಡ್ ಲಸಿಕೆ ಕೊಟ್ಟರೆ ಲಸಿಕೆ ತೆಗೆದುಕೊಳ್ಳಬೇಡಿ ಎಂದು ಅಭಿಯಾನ ಮಾಡಿದರು, ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ್ದರು ಲಸಿಕೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಪಪ್ರಚಾರ ಮಾಡಿದರು. ಅವರಿಂದ ಏನು ಬಯಸಬಹುದು. ಕೋವಿಡ್ ನಿಂದ ಜನ ಸಮಸ್ಯೆಗೆ ಸಿಲುಕಿದ್ದರೆ ಇವರು ಲಸಿಕೆ ಪಡೆಯಬೇಡಿ ಎಂದು ಪ್ರಚಾರ ಮಾಡಿದ್ದರು. ಇವರಿಂದ ದೇಶದ ಜನತೆ ಏನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದರು.

ಭಾರತ್ ತೋಡೋ ಜೊತೆಗೆ ಕೈಜೋಡಿಸಿಕೊಂಡು ಭಾರತ್ ಜೋಡೋ ಕಾರ್ಯಕ್ರಮ ಮಾಡಲು ಹೊರಟಿರುವ ಇವರು ನಾ ನಾಯಕಿಯಲ್ಲ, ನಾನು ನಾಲಾಯಕರು ಎನ್ನುವ ಕಾರ್ಯಕ್ರಮ ಅದು. ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರ ಭಾಗವಹಿಸುತ್ತಿದ್ದಾರೆ. ಇವರು ಏನು ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಉತ್ತರ ಪ್ರದೇಶದಲ್ಲಿ ಇವರನ್ನ ಯಾವ ರೀತಿ ಜನ ಆಶೀರ್ವಾದ ಮಾಡಿದ್ದಾರೆ. ಸಂಪೂರ್ಣವಾಗಿ ಇವರನ್ನು ತಿರಸ್ಕಾರ ಮಾಡಿದ್ದಾರೆ ಇಲ್ಲಿಯೂ ಅದೇ ರೀತಿ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಲಿದ್ದಾರೆ ಎಂದರು.

ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರು ಮತ್ತು ಸಚಿವರ ವಿರುದ್ಧ ಬಳಸುತ್ತಿರುವ ಪದಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ಇದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ನಮ್ಮ ಪಕ್ಷದಲ್ಲಿ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಮೇಲೆ ಯಾರೂ ಇಲ್ಲ ಎಂದು ಸಚಿವ ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ ಪಕ್ಷ ಕ್ರಮ ಕೈಗೊಳ್ಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲದಕ್ಕೂ ಕಾಲವಿದೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆ. ಪಕ್ಷವು ತೀರ್ಮಾನ ಮಾಡಲಿದೆ. ಎಲ್ಲವೂ ತೀರ್ಮಾನ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾತನಾಡುವುದಿಲ್ಲ ಈ ಬಗ್ಗೆ ಕಡಿಮೆ ಮಾತನಾಡಿದರೆ ಒಳ್ಳೆಯದು. ಎಲ್ಲದಕ್ಕೂ ಕಾಲ ಎನ್ನುವುದು ಇದೆ ಮತ್ತು ಇರಲಿದೆ. ಇಂತಹ ಮಾತುಗಳನ್ನು ಆಡುವುದು ದೊಡ್ಡ ಸಾಧನೆ ಏನಲ್ಲ. ಹಾಗಾಗಿ ಅದರ ಬಗ್ಗೆ ಕಡಿಮೆ ಮಾತನಾಡುತ್ತೇನೆ. ಇದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ. ಸರ್ಕಾರದ ಕೆಲಸಗಳು ಅಭಿವೃದ್ಧಿ ಕಾರ್ಯಗಳು ಸಮಸ್ಯೆಗಳ ಬಗ್ಗೆ ಉತ್ತರ ಕೊಡಬಹುದು. ಆದರೆ ಯತ್ನಾಳ್ ಬಗ್ಗೆ ಯಾಕೆ ಇಷ್ಟು ಆಸಕ್ತಿ ಎಂದರು.

ಸಾರ್ವಜನಿಕ ಜೀವನದಲ್ಲಿ ಎಲ್ಲರ ಬಗ್ಗೆ ಎಲ್ಲವೂ ಜನತೆಯ ಅಡಿಯಲ್ಲಿಯೇ ಪರಾಮರ್ಶಗೊಳ್ಳಲಿದೆ. ಅವರವರ ಅಭಿಪ್ರಾಯಗಳನ್ನು ಅವರವರು ವ್ಯಕ್ತಪಡಿಸುತ್ತಾರೆ. ಒಬ್ಬೊಬ್ಬೊರದ್ದು ಒಂದೊಂದು ರೀತಿಯ ಕಾರ್ಯ ಶೈಲಿ ಇರಲಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯಕ್ತಿತ್ವ ಇರಲಿದೆ. ಆ ವ್ಯಕ್ತಿತ್ವಕ್ಕೆ ಎಲ್ಲರೂ ನಡೆದುಕೊಳ್ಳುತ್ತಾರೆ. ಎಲ್ಲರದ್ದೂ ಒಂದೇ ವ್ಯಕ್ತಿತ್ವ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ಪ್ರಶ್ನಾತೀತವಾಗಿರಲ್ಲ. ಯಾರು ಬೇಕಾದರೂ ಪ್ರಶ್ನೆ ಕೇಳಬಹುದು ಈ ವಿಚಾರದಲ್ಲಿ ಶಿಸ್ತು ಮೀರುವಂತಿಲ್ಲ. ನಮ್ಮ ಪಕ್ಷ ಶಿಸ್ತಿನ ಪಕ್ಷ, ಇದರಲ್ಲಿ ಶಿಸ್ತು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ, ನಮ್ಮ ಪಕ್ಷದಲ್ಲಿ ಶಿಸ್ತನ್ನು ಉಲ್ಲಂಘಿಸಿದವರಿಗೆ ಏನಾಗಲಿದೆ ಎಂದು ಇತಿಹಾಸದಲ್ಲಿ ಎಲ್ಲವೂ ಕಣ್ಣ ಮುಂದೆ ಇದೆ. ಹಾಗಾಗಿ ಶಿಸ್ತು ಬಿಟ್ಟರೆ ಈ ಪಕ್ಷದಲ್ಲಿ ಬೇರೇನು ಕಾಣುವುದಿಲ್ಲ. ಹಾಗಾಗಿ ಯಾರ ಪರವಾಗಿ ನಾನು ವಕಾಲತ್ತು ಹಾಕುವುದಿಲ್ಲ, ವಾದವನ್ನು ಮಾಡುವುದಿಲ್ಲ. ಪ್ರಕೃತಿ ನಿಯಮ ಎಲ್ಲರಿಗೂ ಅನ್ವಯವಾಗಲಿದೆ. ನಮಗೂ ಅನ್ವಯವಾಗಲಿದೆ ಇತರರಿಗೂ ಅನ್ವಯವಾಗಲಿದೆ. ಪ್ರಕೃತಿಯನ್ನ ಮೀರಿ ಯಾರು ಹೋಗಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ಬಿಜೆಪಿಯಲ್ಲಿ ಪಕ್ಷವೇ ಎಲ್ಲಾ, ಪಕ್ಷಕ್ಕಿಂತ ಮೇಲೆ ಯಾರು ಹೋಗಲು ಸಾಧ್ಯವಿಲ್ಲ. ಪಕ್ಷದ ಶಿಸ್ತನ್ನು ಮೀರಿದವರು ಅದರದ್ದೇ ಆದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಈಗಾಗಲೇ ಪಕ್ಷ ಅಂಥವರಿಗೆ ಜಾಗವನ್ನು ತೋರಿಸಿದೆ ಅಂತವರು ಎಲ್ಲಿರಲಿದ್ದಾರೆ ಎಂದು ತೋರಿಸಿದೆ. ಯತ್ನಾಳ್ ವಿಚಾರದಲ್ಲಿಯೂ ಪರಿಣಾಮವನ್ನು ಎದುರಿಸಲಿದ್ದಾರೆ. ನಮ್ಮ ಪಕ್ಷದಲ್ಲಿ ಪಕ್ಷದ ವಿಚಾರ ಮೀರಿ ಯಾರು ಹೋಗಲಿದ್ದಾರೋ ಅವರು ಕ್ರಮ ಎದುರಿಸಲು ಸಿದ್ಧವಾಗಬೇಕು. ನಮ್ಮ ಪಕ್ಷದಲ್ಲಿ ಇಷ್ಟ ಬಂದ ರೀತಿಯಲ್ಲಿ ಪಕ್ಷದಲ್ಲಿ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನಡೆಯಬೇಕು. ಮನ್ಸಸ್ಸಿಗೆ ಬಂದಂತೆ ನಡೆಯಲು ಸಾಧ್ಯವಿಲ್ಲ. ಟಿಕೆಟ್ ನೀಡುವಾಗ ಎಲ್ಲವನ್ನೂ ಪರಿಗಣಿಸಲಾಗುತ್ತದೆ ಎಂದರು.

 

ನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News