ಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷ 

ಕೊಳ್ಳೇಗಾಲದಿಂದ ಹನೂರಿನ‌ ಒಡೆಯರಪಾಳ್ಯಕ್ಕೆ ತೆರಳುವ ಬಸ್ ನಲ್ಲಿ ಡೋರ್ ಬಳಿ ನಿಂತಿದ್ದ ಮಹಿಳೆಗೆ ಹಿಂದಕ್ಕೆ ಹೋಗಿ ಎಂದು ಕಂಡಕ್ಟರ್ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಕೆನ್ನೆಗೆ ಮಹಿಳೆ ಬಾರಿಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

Written by - Manjunath Naragund | Last Updated : May 11, 2024, 05:01 PM IST
  • ಈ ಸಂಬಂಧ ಕಂಡಕ್ಟರ್ ಸೋಮಣ್ಣ ಹನೂರು ಪೊಲೀಸ್ ಠಾಣೆಗೆ ಬಸ್ ಸಮೇತ ಆಗಮಿಸಿ ದೂರನ್ನು ಕೊಡಲು ಮುಂದಾದರು
  • ಈ ವೇಳೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿದ್ದು ಆ ಮಹಿಳೆ ಕಂಡಕ್ಟರ್ ಬಳಿ ಕ್ಷಮೆ ಕೇಳಿದ್ದಾರೆ
 ಚಾಮರಾಜನಗರ: ಡೋರ್ ಬಳಿ ನಿಲ್ಲಬೇಡಿ ಎಂದ ಕಂಡಕ್ಟರ್ ಗೆ ಮಹಿಳೆ ಕಪಾಳಮೋಕ್ಷ  title=

ಚಾಮರಾಜನಗರ: ಶಕ್ತಿ ಯೋಜನೆ ಬಳಿಕ ಮಹಿಳೆಯರ ಪ್ರಯಾಣ ಹೆಚ್ಚಾಗಿದೆ. ಅದೇ ರೀತಿ, ಕಂಡಕ್ಟರ್ ಹಾಗೂ ಮಹಿಳೆಯರ ನಡುವೆ ಜಟಾಪಟಿಯೂ ಆಗುತ್ತಿರುತ್ತದೆ. ಅದೇ ರೀತಿ ಒಂದು ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಕೊಳ್ಳೇಗಾಲದಿಂದ ಹನೂರಿನ‌ ಒಡೆಯರಪಾಳ್ಯಕ್ಕೆ ತೆರಳುವ ಬಸ್ ನಲ್ಲಿ ಡೋರ್ ಬಳಿ ನಿಂತಿದ್ದ ಮಹಿಳೆಗೆ ಹಿಂದಕ್ಕೆ ಹೋಗಿ ಎಂದು ಕಂಡಕ್ಟರ್ ಹೇಳಿದ್ದಕ್ಕೆ ಮಾತಿಗೆ ಮಾತು ಬೆಳೆದು ಕಂಡಕ್ಟರ್ ಕೆನ್ನೆಗೆ ಮಹಿಳೆ ಬಾರಿಸಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಇದನ್ನೂ ಓದಿ: ಬಡವರ ಪರವಾಗಿ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಏನೂ ಮಾಡಿಲ್ಲ-ಸಿಎಂ ಸಿದ್ದರಾಮಯ್ಯ

ಕೊಳ್ಳೇಗಾಲ ಘಟಕದ ಸಾರಿಗೆ ಬಸ್ ಕೊಳ್ಳೇಗಾಲದಿಂದ ಹೊರಟು ಕಣ್ಣೂರು ಮೂಲಕ ಚೆನ್ನಾಲಿಂಗನಹಳ್ಳಿ ಮಾರ್ಗವಾಗಿ ಒಡೆಯರಪಾಳ್ಯಕ್ಕೆ ಸಂಚಾರ ಮಾಡುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರನ್ನು ಹಿಂಬದಿಯಲ್ಲಿ ನಿಂತುಕೊಳ್ಳಿ, ಡೋರ್ ಬಳಿ ನಿಲ್ಲಬೇಡಿ  ಎಂದು ಕಂಡಕ್ಟರ್ ಸೋಮಣ್ಣ ಎಂಬವರು ಹೇಳಿದ್ದಾರೆ.ಇದಕ್ಕೆ ಕುಪಿತಗೊಂಡ ಮಹಿಳೆ ಒಬ್ಬಾಕೆ ಮಾತಿನ ಚಕಮಕಿ ನಡೆಸಿ ಕಂಡಕ್ಟರ್ ಗೆ  ಮಹಿಳೆಯೊರ್ವೆ ಕಪಾಲಕ್ಕೆ  ಹೊಡೆದಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ರೇವಣ್ಣ ಚಡಪಡಿಕೆ

ಈ ಸಂಬಂಧ ಕಂಡಕ್ಟರ್ ಸೋಮಣ್ಣ ಹನೂರು ಪೊಲೀಸ್ ಠಾಣೆಗೆ ಬಸ್ ಸಮೇತ ಆಗಮಿಸಿ ದೂರನ್ನು ಕೊಡಲು ಮುಂದಾದರು.ಈ ವೇಳೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿದಿದ್ದು ಆ ಮಹಿಳೆ ಕಂಡಕ್ಟರ್ ಬಳಿ ಕ್ಷಮೆ ಕೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News