Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..!

ಶಿವಮೊಗ್ಗದ ಹುಣಸೋಡಿನಲ್ಲಿ  ಪ್ರಬಲ ಡೈನಮೈಟ್ ಸ್ಫೋಟ.  ಈ ಸ್ಫೋಟಕ್ಕೆ 8 ಕ್ಕೂ ಹೆಚ್ಚು ಕಾರ್ಮಿಕರು ಬಲಿಯಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  

Written by - Ranjitha R K | Last Updated : Jan 22, 2021, 08:58 AM IST
  • ಶಿವಮೊಗ್ಗ ಹುಣಸೋಡು ಕಲ್ಲು ಗಣಿಯಲ್ಲಿ ಪ್ರಬಲ ಸ್ಫೋಟ
  • 8 ಕಾರ್ಮಿಕರ ಸಾವು. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಭೂಕಂಪದ ಅನುಭವ
  • ಒಂದು ಕಿ.ಮಿ. ವರ್ತುಲದಲ್ಲಿ ಆವರಿಸಿಕೊಂಡ ದೂಳು, ಇನ್ನಷ್ಟು ಸ್ಫೋಟದ ಶಂಕೆ
Dynamite blast : ಕಲ್ಲುಗಣಿಯಲ್ಲಿ ಮಧ್ಯರಾತ್ರಿಯ ಭೀಕರ ಸ್ಫೋಟ!8 ಕಾರ್ಮಿಕರು ಛಿದ್ರ ಛಿದ್ರ..! title=
ಶಿವಮೊಗ್ಗ ಹುಣಸೋಡು ಕಲ್ಲು ಗಣಿಯಲ್ಲಿ ಪ್ರಬಲ ಸ್ಫೋಟ(ANI photo)

ಶಿವಮೊಗ್ಗ : ಕಳೆದ ರಾತ್ರಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಮಿ ನಡುಗಿಸಿದ್ದು ಭೂಕಂಪವಲ್ಲ. ಅದು ಪ್ರಬಲ ಡೈನಮೈಟ್ ಸ್ಫೋಟ.  ಈ ಸ್ಫೋಟಕ್ಕೆ 8 ಕ್ಕೂ ಹೆಚ್ಚು ಕಾರ್ಮಿಕರು ಬಲಿಯಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಹುಣಸೋಡು ಕಲ್ಲುಗಣಿಯಲ್ಲಿ ಆಗಿದ್ದೇನು..?
ಶಿವಮೊಗ್ಗ (Shivamogga) ತಾಲೂಕು ಅಗಸವಳ್ಳಿ, ಸಮೀಪದ ಹುಣಸೋಡು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ರೈಲ್ವೆ (Railway) ಕ್ರಷರ್‌ನಲ್ಲಿ ಡೈನಾಮೈಟ್‌ (Dinamite) ದಾಸ್ತಾನು ಮಾಡಿದ್ದ ಲಾರಿ ಸ್ಫೋಟಗೊಂಡಿದ್ದೇ (Blast) ಇದಕ್ಕೆ ಕಾರಣ. ಇದೇ ಸ್ಫೋಟದಿಂದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲೇ ಭೂಮಿ ನಡುಗಿದ ಅನುಭವವಾಗಿದೆ. ಅಷ್ಟೇ ಅಲ್ಲ ಕಲ್ಲು ಕ್ರಶರ್ ನ ಒಂದು ಕಿಲೋ ಮೀಟರ್ ವರ್ತುಲದಲ್ಲಿ ಸ್ಪೋಟದ ಧೂಳು ಆವರಿಸಿಕೊಂಡಿತ್ತು. ಸ್ಫೋಟ ಸಂಭವಿಸಿದ ಲಾರಿ ಛಿದ್ರ ಛಿದ್ರವಾಗಿತ್ತು. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಮಾಂಸದ ಮುದ್ದೆಗಳಾಗಿ ಬಿಟ್ಟಿದ್ದವು. ಅಷ್ಟೊಂದು ಪ್ರಬಲವಾಗಿತ್ತು ಈ ಸ್ಫೋಟ. ಗ್ರಾಮದಲ್ಲಿ ವಿದ್ಯುತ್ ಕಟ್ ಆಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ 6 ಶವಗಳು ಪತ್ತೆಯಾಗಿವೆ. ಈ ಸಂಖ್ಯೆ ಏರುವ ಸಾಧ್ಯತೆಗಳಿವೆ.

 

ಇದನ್ನೂ ಓದಿ : Pramod Muthalik: ಬೆಳಗಾವಿ ಲೋಕಸಭಾ ಬೈಎಲೆಕ್ಷನ್: ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದ ಮುತಾಲಿಕ್!

ಕಲ್ಲು ಕ್ರಶರ್ ನಲ್ಲಿ ಅಕ್ರಮವಾಗಿ ಒಂದು ಲಾರಿ ಡೈನಾಮೈಟ್  ಗಳನ್ನು  (Dynamite) ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.  ಅದು ಸ್ಫೋಟಗೊಂಡ ಪರಿಣಾಮ ಇಷ್ಟೊಂದು ದೊಡ್ಡ ಅನಾಹುತವಾಗಿದೆ. ಮೃತಪಟ್ಟ ಕಾರ್ಮಿಕರನ್ನು ಬಿಹಾರ (Bihar) ಮೂಲದವರೆಂದು ಗುರುತಿಸಲಾಗಿದೆ.

ಕಲ್ಲು ಕ್ರಶರ್ ಗೆ ಇಳಿಯಲು ಪೊಲೀಸರ ಹಿಂದೇಟು.
ಈ ಕಲ್ಲುಗಣಿಯಲ್ಲಿ ಇನ್ನಷ್ಟು ಡೈನಾಮೈಟ್ ಇರಬಹುದು ಎಂದು ಶಂಕಿಸಲಾಗಿದೆ. ಆ ಡೈನಾಮೈಟ್ ಕೂಡಾ ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಸಾಧ್ಯತೆ ಇದೆ. ಹಾಗಾಗಿ, ಕಲ್ಲುಗಣಿಗೆ ಇಳಿದು ಪರಿಶೀಲಿಸಲು ಪೊಲೀಸರು (Police) ಹಿಂದೇಟು ಹಾಕಿದ್ದಾರೆ. ಬಾಂಬ್ ನಿಗ್ರಹ ದಳವನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಉಳಿದ ಡೈನಾಮೈಟ್ ಗಳನ್ನು ಪತ್ತೆ ಹಚ್ಚಲು ಬಾಂಬ್ ನಿಗ್ರಹ ದಳದ ನೆರವು ಕೋರಲಾಗಿದೆ. 

ಇದನ್ನೂ ಓದಿ : R.Ashok: 'ಎಲ್ಲರನ್ನು ತೃಪ್ತಿ ಪಡಿಸಲು ದೇವರಿಂದಲೂ ಸಾಧ್ಯವಿಲ್ಲ'

ಘಟನಾ ಸ್ಥಳಕ್ಕೆ ಎಸ್ಪಿಬ ಕೆ.ಎಂ.ಶಾಂತರಾಜು, ಡಿಸಿ ಕೆ.ಬಿ.ಶಿವಕುಮಾರ್ ಭೇಟಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News