ಅಂತರರಾಷ್ಟ್ರೀಯ ವಿಮಾನ ಪುನರಾರಂಭಗೊಳ್ಳುವ ಬಗ್ಗೆ ಸಚಿವ ಹರ್ದೀಪ್ ಪುರಿ ಟ್ವೀಟ್

ವಿದೇಶಿ ಪ್ರಜೆಗಳಿಗೆ ಪ್ರವೇಶ ನೀಡುವ ನಿಯಮಗಳನ್ನು ದೇಶಗಳು ಸಡಿಲಗೊಳಿಸಿದ ನಂತರ ಭಾರತವು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪ್ರಾರಂಭಿಸಲು ನಿರ್ಧರಿಸುತ್ತದೆ.  

Last Updated : Jun 8, 2020, 01:54 PM IST
ಅಂತರರಾಷ್ಟ್ರೀಯ ವಿಮಾನ ಪುನರಾರಂಭಗೊಳ್ಳುವ ಬಗ್ಗೆ ಸಚಿವ ಹರ್ದೀಪ್ ಪುರಿ ಟ್ವೀಟ್  title=

ನವದೆಹಲಿ: ವಿದೇಶಿ ಪ್ರಜೆಗಳ ಪ್ರವೇಶಕ್ಕಾಗಿ ದೇಶಗಳು ನಿಯಮಗಳನ್ನು ಸಡಿಲಿಸಿದ ನಂತರ ಭಾರತ ಅಂತರರಾಷ್ಟ್ರೀಯ ವಿಮಾನಯಾನಗಳನ್ನು (International flights) ಪ್ರಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಭಾನುವಾರ ಮಾಹಿತಿ ನೀಡಿದರು. ಕರೋನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಜಪಾನ್ ಮತ್ತು ಸಿಂಗಾಪುರದಂತಹ ದೇಶಗಳು ವಿದೇಶಿಯರ ಪ್ರವೇಶಕ್ಕೆ ಗಮನಾರ್ಹ ನಿರ್ಬಂಧಗಳನ್ನು ವಿಧಿಸಿವೆ.

ವಿಮಾನಗಳಲ್ಲಿ ಬದಲಾಗಲಿದೆ ಈ ನಿಯಮ

ಈ ಕುರಿತಂತೆ ಟ್ವೀಟ್ ಮಾಡಿರುವ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ವಿದೇಶಿ ಪ್ರಜೆಗಳಿಗೆ ಪ್ರವೇಶಿಸಲು ದೇಶಗಳು ನಿಯಮಗಳನ್ನು ಸಡಿಲಿಸಿದ ತಕ್ಷಣ ನಿಯಮಿತವಾಗಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನಃಸ್ಥಾಪಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಒಳಬರುವ ವಿಮಾನಗಳನ್ನು ಅನುಮೋದಿಸಲು ಗಮ್ಯಸ್ಥಾನ ದೇಶಗಳು ಸಿದ್ಧರಾಗಿರಬೇಕು ಎಂದಿದ್ದಾರೆ.

ಮೇ 25 ರಿಂದ ಭಾರತದಲ್ಲಿ ದೇಶೀಯ ಪ್ರಯಾಣಿಕರ ಹಾರಾಟವನ್ನು ಪುನರಾರಂಭಿಸಲಾಯಿತು. ಈ ಹಿಂದೆ ಕರೋನಾವೈರಸ್ ತಡೆಗಟ್ಟಲು ಸುಮಾರು ಎರಡು ತಿಂಗಳ ಕಾಲ ಲಾಕ್‌ಡೌನ್ (Lockdown) ಜಾರಿಗೊಳಿಸಿದ್ದರಿಂದ ವಿಮಾನಗಳನ್ನು ನಿಷೇಧಿಸಲಾಗಿತ್ತು.

ದೇಶೀಯ ವಿಮಾನ ಹಾರಾಟ ಆರಂಭ, ಏರ್‌ಪೋರ್ಟ್‌ಗೆ ಹೋಗುವ ಮೊದಲು ಇವುಗಳನ್ನು ನೆನಪಿನಲ್ಲಿಡಿ

ಬುಕಿಂಗ್ ಪ್ರಾರಂಭಿಸಿದ ಏರ್ ಇಂಡಿಯಾ :
ಜೂನ್ 5 ರಿಂದ ವಂದೇ ಭಾರತ್ ಮಿಷನ್ (Vande Bharat Mission) ಅಡಿಯಲ್ಲಿ ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿಶ್ವದ ಇತರ ದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ಏರ್ ಇಂಡಿಯಾ (Air India) ಬುಕಿಂಗ್ ಪ್ರಾರಂಭಿಸಿದೆ. ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಜೂನ್ 5 ರಿಂದ ಜೂನ್ 9-30, 2020 ರವರೆಗೆ ಕಾಯ್ದಿರಿಸುವ ಮೂಲಕ ಅವರು ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ವಿಮಾನಗಳು ಯುಎಸ್ ಮತ್ತು ಕೆನಡಾದ ನ್ಯೂಯಾರ್ಕ್, ನೆವಾರ್ಕ್, ಚಿಕಾಗೊ, ವಾಷಿಂಗ್ಟನ್, ಸ್ಯಾನ್ ಫ್ರಾನ್ಸಿಸ್ಕೊ, ವ್ಯಾಂಕೋವರ್ ಮತ್ತು ಟೊರೊಂಟೊದ ಹಲವಾರು ಪ್ರಮುಖ ನಗರಗಳಿಗೆ ಲಭ್ಯವಿರುತ್ತವೆ.

ಅಂತರರಾಷ್ಟ್ರೀಯ ವಿಮಾನಯಾನ ಪ್ರಾರಂಭಿಸುವ ಸಮಯ:
ಇದೀಗ ಅಂತರರಾಷ್ಟ್ರೀಯ ವಿಮಾನಯಾನವನ್ನು ಸರಿಯಾಗಿ ಪ್ರಾರಂಭಿಸಲು ಇದು ಸೂಕ್ತ ಸಮಯವಲ್ಲ. ದೇಶದ ಹೆಚ್ಚಿನ ಮೆಟ್ರೋ ನಗರಗಳು ಪ್ರಸ್ತುತ ಕೆಂಪು ವಲಯದಲ್ಲಿವೆ, ಇದರಿಂದಾಗಿ ಹೊರಗಿನ ನಗರಗಳಿಂದ ಜನರು ವಿಮಾನಗಳನ್ನು ಹಿಡಿಯಲು ಬರುವುದಿಲ್ಲ. ಇದಲ್ಲದೆ ದೇಶಕ್ಕೆ ಬಂದ ನಂತರ ಅವರು 14 ದಿನಗಳವರೆಗೆ ಕ್ವಾರೆಂಟೈನ್‌ನಲ್ಲಿ ಇರಿಸಬೇಕಾಗುತ್ತದೆ ಎಂದು ಪುರಿ ತಿಳಿಸಿದರು.

ನಿಮ್ಮ ಮುಖವೇ ಬೋರ್ಡಿಂಗ್ ಪಾಸ್!

ಇದರೊಂದಿಗೆ, ದೇಶೀಯ ವಿಮಾನಗಳು ಇನ್ನೂ 50-60 ಪ್ರತಿಶತದ ಮಟ್ಟವನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ದೇಶದಲ್ಲಿ ವಿದೇಶದಿಂದ ಜನರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರೆತರಲು ಸರ್ಕಾರದ ಪ್ರಯತ್ನ ಮುಂದುವರೆಯಲಿದೆ ಎಂದವರು ಮಾಹಿತಿ ನೀಡಿದರು.

Trending News