ವಿಜಯ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ- ರಾಹುಲ್ ಗಾಂಧಿ

ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Last Updated : Aug 26, 2018, 10:33 AM IST
ವಿಜಯ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ- ರಾಹುಲ್ ಗಾಂಧಿ  title=

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಭಾರತಕ್ಕೆ ಬರುವ ಮೊದಲು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಶನಿವಾರದಂದು ಭಾರತೀಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ರಾಹುಲ್ ಗಾಂಧಿ  "ಪ್ರಧಾನಿ ಮೋದಿ ಸರ್ಕಾರವು ಪ್ರಮುಖ ಉದ್ದಿಮೆದಾರರ ವಿಚಾರದಲ್ಲಿ ಕಠಿಣ ನಿಲುವು ತಗೆದುಕೊಳ್ಳದಿರುವ ಬಗ್ಗೆ ಕಿಡಿ ಕಾರಿದರು. 

"ಮಲ್ಯ ಭಾರತಕ್ಕೆ ಹೊರಡುವ ಮೊದಲು ಅವರು ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ.ಅದು ದಾಖಲು ಕೂಡ ಆಗಿದೆ.ಆದರೆ ನಾನು ಅವರ ಹೆಸರು ಹೇಳಲು ಇಚ್ಚಿಸುವುದಿಲ್ಲ" ಎಂದು ರಾಹುಲ್ ತಿಳಿಸಿದರು.

ವಿಜಯ್ ಮಲ್ಯ 9000 ಕೋಟಿ ರೂಪಾಯಿಗಳ ಸಾಲ ವಂಚಿಸಿ ವಿದೇಶಕ್ಕೆ ಹಾರಿದ್ದಾರೆ.ಈಗ ಅವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.

Trending News