TTE urinates on woman: ರೈಲಿನಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ TTE: ಮುಂದೇನಾಯ್ತು ಗೊತ್ತಾ?

TT urinates on the Female Passenger: ಈ ಘಟನೆ ಸೋಮವಾರ (ಮಾರ್ಚ್ 13) ನಡೆದಿದೆ. ಮಾಹಿತಿ ಪ್ರಕಾರ ರಾಜೇಶ್ ಎಂಬವರು ರೈಲಿನ ಎ-1 ಕೋಚ್‌’ನಲ್ಲಿ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ಅವರ ಪತ್ನಿ ಸೀಟಿನಲ್ಲಿ ಮಲಗಿದ್ದರು. ಈ ವೇಳೆ ಟಿಟಿಇ ಮುನ್ನಾಕುಮಾರ್, ಆ ಮಹಿಳೆಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆ ರಾತ್ರಿ ವೇಳೆ ನಡೆದಿದೆ.

Written by - Bhavishya Shetty | Last Updated : Mar 14, 2023, 06:11 PM IST
    • ಪ್ರಯಾಣಿಕರ ಮೇಲೆಯೇ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
    • ಟಿಟಿಇ, ಮಹಿಳಾ ಪ್ರಯಾಣಿಕರ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.
    • ವಿಷಯ ಬಯಲಿಗೆ ಬರುತ್ತಿದ್ದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕ್ರಮ ಕೈಗೊಂಡಿದ್ದಾರೆ
TTE urinates on woman: ರೈಲಿನಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ TTE: ಮುಂದೇನಾಯ್ತು ಗೊತ್ತಾ? title=
urinate on woman

TT urinates on the Female Passenger: ಇತ್ತೀಚಿಗೆ ವಿಮಾನದಲ್ಲಿ ನಡೆದ ಪ್ರಕರಣವೊಂದು ರೈಲಿನಲ್ಲಿಯೂ ಮರುಕಳಿಸಿದೆ. ಪ್ರಯಾಣಿಕರ ಮೇಲೆಯೇ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಕ್ನೋದಲ್ಲಿ ಅಮೃತಸರದಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿದ್ದ ಟಿಟಿಇ, ಮಹಿಳಾ ಪ್ರಯಾಣಿಕರ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಷಯ ಬಯಲಿಗೆ ಬರುತ್ತಿದ್ದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕ್ರಮ ಕೈಗೊಂಡಿದ್ದಾರೆ. ಅವರ ಆದೇಶದ ಮೇರೆಗೆ ಟಿಟಿಇಯನ್ನು ವಜಾ ಮಾಡಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ: 8 ಐಪಿಎಸ್ ಮತ್ತು 1 ಐಎಎಸ್ ವಿರುದ್ಧ ಕ್ರಮ!

ಈ ಘಟನೆ ಸೋಮವಾರ (ಮಾರ್ಚ್ 13) ನಡೆದಿದೆ. ಮಾಹಿತಿ ಪ್ರಕಾರ ರಾಜೇಶ್ ಎಂಬವರು ರೈಲಿನ ಎ-1 ಕೋಚ್‌’ನಲ್ಲಿ ಪತ್ನಿಯೊಂದಿಗೆ ಪ್ರಯಾಣಿಸುತ್ತಿದ್ದರು. ಅವರ ಪತ್ನಿ ಸೀಟಿನಲ್ಲಿ ಮಲಗಿದ್ದರು. ಈ ವೇಳೆ ಟಿಟಿಇ ಮುನ್ನಾಕುಮಾರ್, ಆ ಮಹಿಳೆಯ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಘಟನೆ ರಾತ್ರಿ ವೇಳೆ ನಡೆದಿದೆ. ಮಹಿಳೆ ಜೋರಾಗಿ ಅರಚಾಡಿದ್ದು, ಗದ್ದಲಕ್ಕೆ ಜಮಾಯಿಸಿದ ಪ್ರಯಾಣಿಕರು ಟಿಟಿಇಯನ್ನು ಹಿಡಿದುಕೊಂಡಿದ್ದಾರೆ. ಇನ್ನು ಟಿಟಿಇ ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  Viral Video: “ನೀ ಜಾಣಮರಿ ಅಲಾ, ಮೊಬೈಲ್ ನೋಡ್ಬಾರ್ದು…”: 2 ವರ್ಷದ ಕಂದಮ್ಮ ಹೇಳೋ ಬುದ್ಧಿಮಾತು ಕೇಳ್ರೀ

ವಿಶೇಷವೆಂದರೆ, ಕೆಲವು ತಿಂಗಳ ಹಿಂದೆ ವಿಮಾನದಲ್ಲಿ ಇಂತಹದ್ದೇ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ಬಳಿಕ ಯುಎಸ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಶಂಕರ್ ಮಿಶ್ರಾನನ್ನು ವಜಾ ಮಾಡಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News