ತೆಲಂಗಾಣ ಸಿ.ಎಂ ರಿಂದ ಮಮತಾ ಬ್ಯಾನರ್ಜಿ ಭೇಟಿ

    

Last Updated : Mar 19, 2018, 07:14 PM IST
ತೆಲಂಗಾಣ ಸಿ.ಎಂ ರಿಂದ ಮಮತಾ ಬ್ಯಾನರ್ಜಿ ಭೇಟಿ  title=

ಕೋಲ್ಕತಾ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರವರು ಇಂದು  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತ್ತಾದಲ್ಲಿ  ಭೇಟಿ ಮಾಡಿದರು.ಮಮತಾ ಬ್ಯಾನರ್ಜಿಯವರು ರಾವ್ ಆವರನ್ನು ತಮ್ಮ ಕಚೇರಿಯಲ್ಲಿ ಭೇಟಿಯಾದರು.

ಮುಂಬರುವ 2019 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯ ಶಕ್ತಿಯನ್ನು ಎರಡು ರಾಜ್ಯದ ಮುಖ್ಯಮಂತ್ರಿಗಳು ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ.  ಈ ಸಂದರ್ಭದಲ್ಲಿ ಎನ್ಡಿಎ ವಿರುದ್ಧ ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲು ಮಮತಾರವರು ಒತ್ತಾಯಿಸಿದ್ದಾರೆ.

2019 ರ ಚುನಾವಣೆ ವೇಳೆ ತೃತೀಯ ರಂಗದ ರಚಿಸುವ  ಸಲುವಾಗಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್  ದೆಹಲಿಗೂ  ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

Trending News