ತಮಿಳುನಾಡು ನೀರಿನ ಸಮಸ್ಯೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು?

ಮಾನ್ಸೂನ್ ಆರಂಭವಾಗುವುದಕ್ಕೂ ಮುನ್ನ ಎಲ್ಲ ಕೆರೆಗಳು, ಕೊಳಗಳು ಮತ್ತು ಜಲಾಶಯಗಳಲ್ಲಿ ಹೂಳೆತ್ತಿಸಬೇಕು ಎಂದು ರಜನಿಕಾಂತ್ ಹೇಳಿದ್ದಾರೆ.

Last Updated : Jun 30, 2019, 09:54 AM IST
ತಮಿಳುನಾಡು ನೀರಿನ ಸಮಸ್ಯೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು? title=

ಚೆನ್ನೈ: ತಮಿಳುನಾಡು ರಾಜ್ಯಾದಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿರುವ ಬೆನ್ನಲ್ಲೇ ನಟ ರಜನಿಕಾಂತ್ ಸಲಹೆಯೊಂದನ್ನು ನೀಡಿದ್ದಾರೆ.

ಮುಂಬೈನಲ್ಲಿ ತಮ್ಮ 'ದರ್ಬಾರ್' ಚಿತ್ರದ ಚಿತ್ರೀಕರಣದ ಬಳಿಕ ತಮಿಳುನಾಡು ನೀರಿನ ಸಮಸ್ಯೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಈ ಕೂಡಲೇ ರಾಜ್ಯದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಸರಿಸಬೇಕು. ಮಾನ್ಸೂನ್ ಆರಂಭವಾಗುವುದಕ್ಕೂ ಮುನ್ನ ಎಲ್ಲ ಕೆರೆಗಳು, ಕೊಳಗಳು ಮತ್ತು ಜಲಾಶಯಗಳಲ್ಲಿ ಹೂಳೆತ್ತಿಸಬೇಕು" ಎಂದಿದ್ದಾರೆ.

ಚೆನ್ನೈನಲ್ಲಿ ತೀವ್ರ ಜಲಸಂಕಟ ನಿರ್ಮಾಣವಾಗಿದ್ದು, ಎಲ್ಲಾ ನಾಲ್ಕು ಪ್ರಮುಖ ಜಲಾಶಯಗಳು ಸಂಪೂರ್ಣವಾಗಿ ಬತ್ತಿಹೋಗಿವೆ. ಹೀಗಾಗಿ ಎಲ್ಲಾ ನಿವಾಸಿಗಳೂ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಪರ್ಯಾಯ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. 

ಹಾಲಿವುಡ್ ನಟ ಲಿಯೊನಾರ್ಡೊ ಡಿಕಾಪ್ರಿಯೊ ತಮಿಳುನಾಡಿನ ಗಂಭೀರ ನೀರಿನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೆ, "ಮಳೆಯಿಂದ ಮಾತ್ರ ಚೆನ್ನೈ ನೀರಿನ ಸಮಸ್ಯೆ ಬಗೆಹರಿಯು ಸಾಧ್ಯ ಎಂದು ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. 

Trending News