ಶುರುವಾದ ಹೊಸ್ತಿಲಲ್ಲೇ 1.6 ಮಿಲಿಯನ್ ಅನುಯಾಯಿಗಳನ್ನು ದಾಟಿದ ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ ಚಾನೆಲ್‌

Narendra Modi : ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಗಷ್ಟೇ ವಾಟ್ಸಾಪ್‌ ಚಾನೆಲ್ಲ್ ಪ್ರಾರಂಭವಾಗಿದ್ದು, 24 ಗಂಟೆಯಲ್ಲೇ 1.6 ಮಿಲಿಯನ್‌ ಫಾಲೋವರ್ಸ್‌ನ್ನು ದಾಟಿದೆ.

Written by - Zee Kannada News Desk | Last Updated : Sep 21, 2023, 11:21 AM IST
  • ವಾಟ್ಸಾಪ್‌ ಚಾನೆಲ್‌ ಸೇವೆಗಳನ್ನು ಭಾರತ ಸೇರಿದಂತೆ 150 ದೇಶಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ.
  • ಪ್ರಧಾನಿ ಮೋದಿಯವರ ಖಾತೆಯು 1,624,174 ಫಾಲೋವರ್ಸ್‌ನ್ನು ಹೊಂದಿದೆ.
  • ವಾಟ್ಸಾಪ್‌ನ ಹೊಸ ಅಪ್ಡೇಟ್‌ ಸ್ವೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ವಾಟ್ಸಾಪ್‌ ಚಾನೆಲ್‌ನ್ನು ವೀಕ್ಸಿಸಬಹುದಾಗಿದೆ.
ಶುರುವಾದ ಹೊಸ್ತಿಲಲ್ಲೇ 1.6 ಮಿಲಿಯನ್ ಅನುಯಾಯಿಗಳನ್ನು ದಾಟಿದ ಪ್ರಧಾನಿ ನರೇಂದ್ರ ಮೋದಿ ವಾಟ್ಸಾಪ್‌ ಚಾನೆಲ್‌ title=

PM Modi Whatsapp Channel :  ಇತ್ತೀಗಷ್ಟೇ ವಾಟ್ಸಾಪ್‌ ತನ್ನ ಹೊಸ ಅಪ್ಡೇಟ್‌ ಮೂಲಕ ವಾಟ್ಸಾಪ್‌ ಚಾನೆಲ್‌ ಸೇವೆಗಳನ್ನು ಪ್ರಾರಂಭಿಸಿದ್ದು, ಭಾರತ ಸೇರಿದಂತೆ 150 ದೇಶಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ.  ಒಂದೇ ಬಾರಿಗೆ ವಿಶಾಲವಾದ ಪ್ರೇಕ್ಷಕರನ್ನು ತಲುಪುವ ಉದ್ದೇಶವನ್ನು ವಾಟ್ಸಾಪ್‌ ಚಾನೆಲ್‌ ಹೊಂದಿದೆ. ವಾಟ್ಸಾಪ್‌ನ ಹೊಸ ಅಪ್ಡೇಟ್‌ ಸ್ವೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ವಾಟ್ಸಾಪ್‌ ಚಾನೆಲ್‌ನ್ನು ವೀಕ್ಸಿಸಬಹುದಾಗಿದೆ. 

ಈಗಿನ ಸದ್ಯದ ವಾಟ್ಸಾಪ್‌ ಚಾನೆಲ್‌ ಮಾಹಿತಿ ಪ್ರಕಾರ ಪ್ರಧಾನಿ ಮೋದಿಯವರ ಖಾತೆಯು 1,624,174 ಫಾಲೋವರ್ಸ್‌ನ್ನು ಹೊಂದಿದೆ.

ಇದನ್ನು ಓದಿ : ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ಜಾತಿಗಳಿಗೆ ಉಪಮೀಸಲಾತಿಯ ಅಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಅಂದರೆ (ಸೆ.20) ರಂದು ತಮ್ಮ X ಖಾತೆಯಲ್ಲಿ (ಹಿಂದೆ ಟ್ವಿಟರ್‌) "ಇಂದು ನನ್ನ ವಾಟ್ಸಾಪ್ ಚಾನೆಲ್ ಅನ್ನು ಪ್ರಾರಂಭಿಸಿದೆ. ಈ ಮಾಧ್ಯಮದ ಮೂಲಕ ಸಂಪರ್ಕದಲ್ಲಿ ಉಳಿಯಲು ಎದುರು ನೋಡುತ್ತಿದ್ದೇನೆ! ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಸೇರಿಕೊಳ್ಳಿ.." ಎಂದು ಪೋಸ್ಟ್‌ ಹಾಕಿಹೊಂಡಿದ್ದರು. 

ಸಾಮಾಜಿಕ ನೆಟ್‌ವರ್ಕಿಂಗ್ ದೈತ್ಯ ಮೆಟಾ ಚಾನೆಲ್‌ಗಳ ಸ್ವಾಯತ್ತತೆಯನ್ನು ಒತ್ತಿಹೇಳಿದ್ದು, ಅನುಯಾಯಿಗಳ ಗುರುತುಗಳು ಪರಸ್ಪರ ಗೌಪ್ಯವಾಗಿರುತ್ತವೆ ಎಂದು ಖಚಿತಪಡಿಸುತ್ತದೆ. ಈ ಚಾನಲ್‌ಗಳು ಏಕಮುಖ ಪ್ರಸಾರಕ್ಕಾಗಿ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತವೆ, ನಿರ್ವಾಹಕರು ಮತ್ತು ಅನುಯಾಯಿಗಳ ಗೌಪ್ಯತೆಯನ್ನು ರಕ್ಷಿಸುವಾಗ ಪಠ್ಯ, ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳು ಸೇರಿದಂತೆ ವಿವಿಧ ವಿಷಯ ಪ್ರಕಾರಗಳನ್ನು ಹಂಚಿಕೊಳ್ಳಲು ನಿರ್ವಾಹಕರಿಗೆ ಅವಕಾಶ ನೀಡುತ್ತದೆ. ಪ್ರತಿಕ್ರಿಯೆಗಳ ಒಟ್ಟು ಎಣಿಕೆಯು ಗೋಚರಿಸುತ್ತದೆ, ಆದರೆ ನಿರ್ವಾಹಕರಿಂದ ನಿರ್ದಿಷ್ಟ ಪ್ರತಿಕ್ರಿಯೆಗಳು ಗೌಪ್ಯವಾಗಿರುತ್ತವೆ. ಇನ್ಸಸ್ಟಾಗ್ರಾಂ ಬ್ರಾಡ್‌ಕಾಸ್ಟ್ ಚಾನೆಲ್‌ಗಳಂತೆ, ವಾಟ್ಸಾಪ್‌ ಚಾನೆಲ್‌ಗಳ ಬಳಕೆದಾರರು ಹೊಸತನಕ್ಕೆ ಪ್ರತಿಕ್ರಿಯಿಸಬಹುದು ಮತ್ತು ಎಮೋಜಿಗಳನ್ನು ಬಳಸಿಕೊಂಡು ಪ್ರತಿಕ್ರಿಯೆಯನ್ನು ಹಂಚಿಕೊಳ್ಳಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News