Rahul Gandhi: 'ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ... ಮೋದಿ OBCಯಲ್ಲಿ ಹುಟ್ಟಿಲ್ಲʼ!: ರಾಹುಲ್‌ ಗಾಂಧಿ

Rahul Gandhi accuses PM Modi of lying about his caste: ʼಪ್ರಧಾನಿ ಮೋದಿಯವರು ಜಾತಿಗಣತಿ ನಡೆಸುವುದಿಲ್ಲ. ಅವರ ಇಡೀ ಜೀವನದಲ್ಲಿ ಜಾತಿಗಣತಿ ನಡೆಸುವುದಿಲ್ಲ. ಏಕೆಂದರೆ ನಿಮ್ಮ ಪ್ರಧಾನಿ ಜಗತ್ತಿಗೆ ಸುಳ್ಳು ಹೇಳುತ್ತಿದ್ದಾರೆ. ಅವರು ಒಬಿಸಿ ಅಲ್ಲ, ಅವರು ಸಾಮಾನ್ಯ ಜಾತಿಯಿಂದ ಬಂದವರು ಮತ್ತು ಜಾತಿ ಗಣತಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾತ್ರ ಜಾತಿ ಗಣತಿ ನಡೆಸಲಿದ್ದಾರೆʼ ಎಂದು ಅವರು ಟೀಕಿಸಿದ್ದಾರೆ.

Written by - Puttaraj K Alur | Last Updated : Feb 8, 2024, 04:05 PM IST
  • ಪ್ರಧಾನಿ ನರೇಂದ್ರ ಮೋದಿಯವರು OBC ವರ್ಗದಲ್ಲಿ ಹುಟ್ಟಿಲ್ಲ
  • ಪ್ರಧಾನಿ ಮೋದಿ ತೇಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ
  • ಮೋದಿ ಜಗತ್ತಿಗೆ ಸುಳ್ಳು ಹೇಳುತ್ತಿದ್ದಾರೆಂದು ರಾಹುಲ್‌ ಗಾಂಧಿ ಟೀಕೆ
Rahul Gandhi: 'ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ... ಮೋದಿ OBCಯಲ್ಲಿ ಹುಟ್ಟಿಲ್ಲʼ!: ರಾಹುಲ್‌ ಗಾಂಧಿ  title=
ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು OBC (ಇತರ ಹಿಂದುಳಿದ ವರ್ಗ) ವರ್ಗದಲ್ಲಿ ಹುಟ್ಟಿಲ್ಲ. ಅವರು ಜಗತ್ತಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿರುವ ಅವರು, ಪ್ರಧಾನಿ ಮೋದಿಯವರು ಬಿಜೆಪಿ ಆಡಳಿತದಲ್ಲಿ 2000ರಲ್ಲಿ OBC ಸ್ಥಾನಮಾನ ನೀಡಲಾಗಿದ್ದ ತೇಲಿ ಸಮುದಾಯಕ್ಕೆ ಸೇರಿದವರಾಗಿರುವುದರಾಗಿದ್ದಾರೆ ಅಂತಾ ಟೀಕಿಸಿದ್ದಾರೆ.

ಒಡಿಶಾದ ʼಭಾರತ್ ಜೋಡೋ ನ್ಯಾಯ್ ಯಾತ್ರೆʼಯ ವೇಳೆ ಮಾತನಾಡಿದ ಅವರು, "ನಿಮ್ಮ ಪ್ರಧಾನಿ OBCಯಾಗಿ ಹುಟ್ಟಿಲ್ಲ, ಅವರು ಸಾಮಾನ್ಯ ಜಾತಿಯಲ್ಲಿ ಜನಿಸಿದವರು. ತಾವು OBC ವರ್ಗದಲ್ಲಿ ಜನಿಸಿದರು ಎಂದು ಅವರು ಇಡೀ ಜಗತ್ತಿಗೆ ಸುಳ್ಳು ಹೇಳುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Parliament Updates: ಸಂಸತ್ತಿಗೆ, ದೇಶಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಕೊಡುಗೆ ಶ್ಲಾಘಿಸಿದ ಪ್ರಧಾನಿ ಮೋದ

ʼಮೊದಲನೆಯದಾಗಿ ಪ್ರಧಾನಿ ನರೇಂದ್ರ ಮೋದಿಯವರು OBCಯಾಗಿ ಹುಟ್ಟಿಲ್ಲವೆಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನನ್ನ ಮಾತು ಕೇಳಿ, ನೀವು ಮೂರ್ಖರಾಗುತ್ತೀರಿ. ಮೋದಿಯವರು ತೇಲಿ ಜಾತಿಯಲ್ಲಿ ಜನಿಸಿದವರು. 2000ನೇ ಇಸವಿಯಲ್ಲಿ ಅವರ ಸಮುದಾಯವು ಬಿಜೆಪಿಯಿಂದ OBC ಸ್ಥಾನಮಾನವನ್ನು ಪಡೆದುಕೊಂಡಿತು ಎಂದು ಹೇಳಿದ್ದಾರೆ. ʼನಾನು ಇದನ್ನು ಹೇಗೆ ತಿಳಿದುಕೊಂಡೆ ಎಂದು ನಿಮಗೆ ತಿಳಿದಿದೆಯೇ? ಅದಕ್ಕೆ ನನಗೆ ಜನನ ಪ್ರಮಾಣ ಪತ್ರ ಬೇಕಿಲ್ಲ. ಏಕೆಂದರೆ ಅವರು ಯಾವುದೇ OBCಯನ್ನು ತಬ್ಬಿಕೊಳ್ಳುವುದಿಲ್ಲ, ರೈತರ ಅಥವಾ ಕಾರ್ಮಿಕರ ಕೈ ಹಿಡಿಯುವುದಿಲ್ಲ. ಅವರು ಅದಾನಿಯಯವರ ಕೈಗಳನ್ನು ಮಾತ್ರ ಹಿಡಿದಿದ್ದಾರೆ ಎಂದು ಕುಟುಕಿದ್ದಾರೆ. 

ಬಿಜೆಪಿಯ ಹಿಂದುತ್ವದ ನಿರೂಪಣೆಯನ್ನು ಎದುರಿಸಲು ಪ್ರತಿಪಕ್ಷ ಭಾರತ ಮೈತ್ರಿಕೂಟವು ಜಾತಿಗಣತಿ ಬೇಡಿಕೆಯನ್ನು ತಳ್ಳಲು ನಿರ್ಧರಿಸಿದ ನಂತರ, ಕಾಂಗ್ರೆಸ್ ಮಾತ್ರ ಜಾತಿ ಗಣತಿಯನ್ನು ನಡೆಸುತ್ತದೆ ಎಂದು ರಾಹುಲ್‌ ಹೇಳೀದ್ದಾರೆ. ಪ್ರಧಾನಿ ಮೋದಿಯವರು ಜಾತಿಗಣತಿ ನಡೆಸುವುದಿಲ್ಲ. ಅವರ ಇಡೀ ಜೀವನದಲ್ಲಿ ಜಾತಿಗಣತಿ ನಡೆಸುವುದಿಲ್ಲ. ಏಕೆಂದರೆ ನಿಮ್ಮ ಪ್ರಧಾನಿ ಜಗತ್ತಿಗೆ ಸುಳ್ಳು ಹೇಳುತ್ತಿದ್ದಾರೆ. ಅವರು ಒಬಿಸಿ ಅಲ್ಲ, ಅವರು ಸಾಮಾನ್ಯ ಜಾತಿಯಿಂದ ಬಂದವರು ಮತ್ತು ಜಾತಿ ಗಣತಿಗೆ ಎಂದಿಗೂ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾತ್ರ ಜಾತಿ ಗಣತಿ ನಡೆಸಲಿದ್ದಾರೆʼ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: Modi Government 3.0:ಮೂರನೇ ಅವಧಿಗೂ ಬಿಜೆಪಿ : ಇದೇ ನಮ್ಮ ಗ್ಯಾರಂಟಿ ಎಂದ ಪ್ರಧಾನಿ ಮೋದಿ

ʼಭಾರತ್ ಜೋಡೋ ನ್ಯಾಯ್ ಯಾತ್ರೆʼಯು ಗುರುವಾರ ಮಧ್ಯಾಹ್ನದಿಂದ ವಿರಾಮವನ್ನು ಪಡೆಯಲಿದ್ದು, ಫೆಬ್ರವರಿ 11ರಂದು ಛತ್ತೀಸ್‌ಗಢದ ರಾಯ್‌ಗಢದಲ್ಲಿ ಪುನರಾರಂಭವಾಗಲಿದೆ. ಯಾತ್ರೆಯು ಫೆ.14ರಂದು ಬೆಳಗ್ಗೆ ಜಾರ್ಖಂಡ್‌ಗೆ ಮರುಪ್ರವೇಶಿಸಲಿದೆ. ನಂತರ ಫೆ.15ರಂದು ಬೆಳಗ್ಗೆ ಬಿಹಾರವನ್ನು ಮರು ಪ್ರವೇಶಿಸಲಿದೆ. ಫೆ.16ರಂದು ಮಧ್ಯಾಹ್ನ ʼಭಾರತ್ ಜೋಡೋ ನ್ಯಾಯ್ ಯಾತ್ರೆʼಯು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಮಣಿಪುರದಲ್ಲಿ ಆರಂಭವಾದ ʼಭಾರತ್ ಜೋಡೋ ನ್ಯಾಯ್ ಯಾತ್ರೆʼಯು 66 ದಿನಗಳಲ್ಲಿ 15 ರಾಜ್ಯಗಳಲ್ಲಿ ಸಂಚರಿಸಿ 6,700 ಕಿ.ಮೀ ಕ್ರಮಿಸಿ ಮುಂಬೈನಲ್ಲಿ ಕೊನೆಗೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News