ಬಿಜೆಪಿ ವಿರೋಧಿ ಬಣದ ಪ್ರಧಾನಿ ಅಭ್ಯರ್ಥಿಗೆ ಮಮತಾ ಹೆಸರು, ಒಮರ್ ಅಬ್ದುಲ್ಲಾ ಸುಳಿವು

    

Last Updated : Jul 27, 2018, 08:15 PM IST
 ಬಿಜೆಪಿ ವಿರೋಧಿ ಬಣದ ಪ್ರಧಾನಿ ಅಭ್ಯರ್ಥಿಗೆ ಮಮತಾ ಹೆಸರು, ಒಮರ್ ಅಬ್ದುಲ್ಲಾ ಸುಳಿವು  title=

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಬಣದ ಪ್ರಧಾನಿ ಅಭ್ಯರ್ಥಿಯಾಗಿ ಮಮತಾ ಬ್ಯಾನರ್ಜೀ ಹೆಸರನ್ನು ಜಮ್ಮು ಕಾಶ್ಮೀರದ  ಮಾಜಿ ಮುಖ್ಯಮಂತ್ರಿ  ಒಮರ್ ಅಬ್ದುಲ್ಲಾ  ಪ್ರಸ್ತಾಪಿಸಿದ್ದಾರೆ.

ಶುಕ್ರವಾರದಂದು  ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜೀಯವರನ್ನು ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ " ನಾವು ಮಮತಾ ಅವರನ್ನು ರಾಷ್ಟ್ರ ರಾಜಧಾನಿಗೆ ಕರೆದುಕೊಂಡುಹೋಗುತ್ತೇವೆ  ಅವರು ಕೊಲ್ಕತ್ತಾದಲ್ಲಿ ಮಾಡಿದ ಕೆಲಸವನ್ನು  ಇಡೀ ರಾಷ್ಟ್ರಕ್ಕೆ ಅನ್ವಯಿಸಲಿದ್ದಾರೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಮತಾ ಅವರು ಜಮ್ಮು ಕಾಶ್ಮೀರ್ ಪರಿಸ್ಥಿತಿಗೆ ತೋರುತ್ತಿರುವ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಅಲ್ಲದೆ  ಮಮತಾ ಜೊತೆ ಚರ್ಚಿಸಿರುವ ವಿಷಯಗಳನ್ನು ಪ್ರಸ್ತಾಪಿಸಿದ ಅವರು " ನಾವು ದೇಶದ ಪ್ರಸ್ತಕ ಸಂಗತಿಗಳು ಮತ್ತು ಅಲ್ಪ ಸಂಖ್ಯಾತರು ಭಯದಲ್ಲಿ ಬದುಕುತ್ತಿರುವ ಸಂಗತಿಗಳ ಕುರಿತಾಗಿ ಚರ್ಚಿಸಿದೇವು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮುಂಬರುವ ಚುನಾವಣೆಯಲ್ಲಿನ ಮೈತ್ರಿಯ ವಿಚಾರವಾಗಿ ಮಾತನಾಡಿದ ಅವರು "ಯಾರು ಬಿಜೆಪಿಯನ್ನು ವಿರೋಧಿಸುತ್ತಾರೋ ಅವರೆಲ್ಲುರು ಕೂಡ ನಮ್ಮನ್ನು ಸೇರಬಹುದು ಎಂದು ಅವರು ಮುಂಬರುವ ಚುನಾವಣಾ ಮೈತ್ರಿ ಚಿತ್ರಣವನ್ನು ತೆರೆದಿಟ್ಟರು.

Trending News