Mamata Banerjee : ಪ. ಬಂಗಾಳದ ಚುನಾವಣೆ ನಂತರದ ಹಿಂಸಾಚಾರದಲ್ಲಿ 16 ಜನ ಸಾವು : ಸಿಎಂ ಮಮತಾ

ಕುಟುಂಬದವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ

Last Updated : May 6, 2021, 05:17 PM IST
  • ರಾಜ್ಯದಲ್ಲಿ ಚುನಾವಣೆಯ ನಂತರದ ಹಿಂಸಾಚಾರಗಳಲ್ಲಿ 16 ಜನರು ಸಾವಿಗೀಡಾಗಿದ್ದಾರೆ
  • ಕುಟುಂಬದವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ
  • ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
Mamata Banerjee : ಪ. ಬಂಗಾಳದ ಚುನಾವಣೆ ನಂತರದ ಹಿಂಸಾಚಾರದಲ್ಲಿ 16 ಜನ ಸಾವು : ಸಿಎಂ ಮಮತಾ title=

ಕೋಲ್ಕತ್ತ : ರಾಜ್ಯದಲ್ಲಿ ಚುನಾವಣೆಯ ನಂತರದ ಹಿಂಸಾಚಾರಗಳಲ್ಲಿ 16 ಜನರು ಸಾವಿಗೀಡಾಗಿದ್ದಾರೆ. ಅವರ ಕುಟುಂಬದವರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಚುನಾವಣಾ ಆಯೋಗ(Election Commission)ದ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ 16 ಮಂದಿಯ ಹತ್ಯೆಯಾಗಿದೆ. ಅವರಲ್ಲಿ ಅರ್ಧದಷ್ಟು ಜನ ಟಿಎಂಸಿ ಮತ್ತು ಇನ್ನರ್ಧದಷ್ಟು ಜನರು ಬಿಜೆಪಿಗೆ ಸೇರಿದವರು. ಒಬ್ಬ ಸಂಯುಕ್ತ ಮೋರ್ಚಾಗೆ ಸೇರಿದ ವ್ಯಕ್ತಿ. ತಾರತಮ್ಯ ಮಾಡದೆ ಆ ಎಲ್ಲರ ಕುಟುಂಬದವರಿಗೂ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಮಮತಾ ಹೇಳಿದ್ದಾರೆ.

ಇದನ್ನೂ ಓದಿ : Arvind Kejriwal : ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್!

ಬಿಜೆಪಿ(BJP)ಯ ಮುಖಂಡರು ಇಲ್ಲಿ ಸುತ್ತುತ್ತಿದ್ದಾರೆ ಮತ್ತು ಪ್ರಚೋದಿಸುವ ಕಾರ್ಯಗಳಲ್ಲಿ ತೊಡಗಿದ್ದಾರೆ. ಹೊಸ ಸರ್ಕಾರ ರಚನೆಯಾಗಿ 24 ಗಂಟೆಗಳೂ ಕಳೆದಿಲ್ಲ, ಅದಾಗಲೇ ಅವರು ಪತ್ರಗಳು, ತಂಡಗಳನ್ನು ಕಳುಹಿಸುತ್ತಿದ್ದಾರೆ, ಮುಖಂಡರು ಬರುತ್ತಿದ್ದಾರೆ. ಅವರು ಜನರ ಆದೇಶವನ್ನು ಸ್ವೀಕರಿಸಲು ಸಿದ್ಧರಿಲ್ಲ, ಜನತಾ ಆದೇಶವನ್ನು ಒಪ್ಪುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಬಿಜೆಪಿ ಮುಖಂಡರನ್ನು ಟೀಕಿಸಿದರು.

ಇದನ್ನೂ ಓದಿ : 'ಮೂರನೇ ಕೊರೊನಾ ಅಲೆಗೆ ಈಗಲೇ ಸಿದ್ಧರಾಗಿ"- ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News