Mamata Banerjee: 'ಯಾರು ಬೇಕಾದ್ರೂ ಪಕ್ಷ ಬಿಟ್ಟು ಹೋಗ್ಲಿ ಹೋಗುವಾಗ ನನ್ನ ಸಾವಿಗಾಗಿ ಪ್ರಾರ್ಥಿಸಿ'

ಮಮತಾ ಬ್ಯಾನರ್ಜಿಯವರು ತಮ್ಮ ಪಕ್ಷದ ನಾಯಕರ ವಿರುದ್ಧ ಭಾರಿ ಗರಂ

Last Updated : Dec 5, 2020, 01:13 PM IST
  • ಮಮತಾ ಬ್ಯಾನರ್ಜಿಯವರು ತಮ್ಮ ಪಕ್ಷದ ನಾಯಕರ ವಿರುದ್ಧ ಭಾರಿ ಗರಂ
  • ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಭಾರಿ ಆಕ್ರೋಶ ಪಟ್ಟುಕೊಂಡಿರುವ ದೀದಿ ಶಾಸಕರ ವಿರುದ್ಧ ಕಿಡಿ
  • ಯಾರು ಬೇಕಾದರೂ, ಪಕ್ಷ ಬಿಟ್ಟು ಹೋಗಬಹುದು, ನನ್ನದೇನೂ ಅಡ್ಡಿಯಿಲ್ಲ, ಪಕ್ಷದ ಒಳಗೇ ಇದ್ದು, ಇಲ್ಲಸಲ್ಲದ್ದನ್ನು ಮಾಡಬೇಡಿ
Mamata Banerjee: 'ಯಾರು ಬೇಕಾದ್ರೂ ಪಕ್ಷ ಬಿಟ್ಟು ಹೋಗ್ಲಿ ಹೋಗುವಾಗ ನನ್ನ ಸಾವಿಗಾಗಿ ಪ್ರಾರ್ಥಿಸಿ' title=

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ಪಕ್ಷದ ನಾಯಕರ ವಿರುದ್ಧ ಭಾರಿ ಗರಂ ಆದಂತಿದೆ. ಇದಾಗಲೇ ಕೆಲವರು ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಭಾರಿ ಆಕ್ರೋಶ ಪಟ್ಟುಕೊಂಡಿರುವ ದೀದಿ ಶಾಸಕರ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಪಕ್ಷಗಳೊಂದಿಗೆ ಸಂಪರ್ಕದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸುವ ಬದಲು ಪಕ್ಷ ಬಿಟ್ಟು ಬೇಕಿದ್ದರೆ ತೊಲಗಬಹುದು ಎಂದು ಹೇಳಿದ್ದಾರೆ.

ಪಕ್ಷದ ಮುಖಂಡರ ಜತೆ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ ಮಮತಾ ಈ ರೀತಿ ಹೇಳಿದ್ದಾರೆ. ಸಚಿವ ಸುವೆಂಡು ಅಧಿಕಾರಿ ರಾಜ್ಯ ಸಚಿವ ಸಂಪುಟದಿಂದ ಹೊರಬಂದ ಒಂದು ವಾರದ ನಂತರ ಭಾರಿ ಅಸಮಾಧಾನದಿಂದ ಇರುವ ಮಮತಾ(Mamata Banerjee), ಯಾರು ಬೇಕಾದರೂ, ಪಕ್ಷ ಬಿಟ್ಟು ಹೋಗಬಹುದು, ನನ್ನದೇನೂ ಅಡ್ಡಿಯಿಲ್ಲ, ಪಕ್ಷದ ಒಳಗೇ ಇದ್ದು, ಇಲ್ಲಸಲ್ಲದ್ದನ್ನು ಮಾಡಬೇಡಿ ಎಂದಿದ್ದಾರೆ. ಟಿಎಂಸಿ ಶಾಸಕ ಮಿಹಿರ್ ಗೋಸ್ವಾಮಿ ಕಳೆದ ವಾರ ಬಿಜೆಪಿ ಸೇರಿದ್ದರು.

Covid-19 Vaccine: ವ್ಯಾಕ್ಸಿನ್ ಹಾಕಿಸಿಕೊಂಡರೂ ಕೂಡ ಹರಿಯಾಣ ಸಚಿವರ ಟೆಸ್ಟ್ Corona Positive

ಈಗಾಗಲೇ ಯಾರ್ಯಾರು ಪಕ್ಷ ಬಿಟ್ಟು ಹೋಗಿದ್ದಾರೆ ಅದರ ಬಗ್ಗೆ ನನಗೆ ಚಿಂತೆ ಇಲ್ಲ, ಅವರನ್ನು ನಾನು ಇಷ್ಟಪಡುವುದೂ ಇಲ್ಲ ಎಂದಿರುವ ಮಮತಾ ಬ್ಯಾನರ್ಜಿ, ಪಕ್ಷದ ಒಳಗೆ ಇದ್ದವರು ಹೋರಾಡಬೇಕಿದೆ. ಪಕ್ಷ ಬಿಟ್ಟು ಹೋಗುವವರು ನಾನು ಸಾಯಲಿ ಎಂದು ಪ್ರಾರ್ಥಿಸಿಕೊಂಡು ಹೋಗಿ ಎಂದಿದ್ದಾರೆ!

ಬಿಜೆಪಿ ಹೊಡೆತಕ್ಕೆ ತಪ್ಪಿದ ಹೈದರಾಬಾದ್ ಮಹಾನಗರ ಪಾಲಿಕೆ ಲೆಕ್ಕಾಚಾರ, ಮುಂದೇನು ಎನ್ನುವುದೇ ಕುತೂಹಲ

ಪಕ್ಷ ವಿರೋಧಿ ಚಟುವಟಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಅಂಥವರ ವಿರುದ್ಧ ಪಕ್ಷವು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಆದ್ದರಿಂದ ನನಗೂ ಯಾರೂ ಭಯಪಡಬೇಕಿಲ್ಲ, ಇಷ್ಟವಿಲ್ಲದಿದ್ದರೆ ಹೋಗಬಹುದು. ಯಾರು ಹೋದರೂ ಪಕ್ಷಕ್ಕೆ ನಷ್ಟ ಆಗುವುದಿಲ್ಲ, ಅಂಥ ಸಾವಿರಾರು ಮಂದಿಯನ್ನು ಸೃಷ್ಟಿ ಮಾಡಬಹುದು ಎಂದು ಪಕ್ಷ ಬಿಟ್ಟು ಹೋದವರಿಗೆ ಪರೋಕ್ಷವಾಗಿ ಚುಚ್ಚಿದರು.

ಇಂದು ರೈತರು- ಕೇಂದ್ರ ‌ಸರ್ಕಾರದ 5ನೇ ಸಭೆ, ಇಂದಾದರೂ ಬಗೆಹರಿಯುತ್ತಾ ರೈತರ ಸಮಸ್ಯೆ?

Trending News