ರಾಜಸ್ಥಾನದ ಜೋಧ್ಪುರದಲ್ಲಿ ವಾಯುಪಡೆಯ ವಿಮಾನ ಪತನ

ಅದೃಷ್ಟವಷಾತ್‌ ಪಾರಾದ ಪೈಲಟ್‌.

Last Updated : Sep 4, 2018, 10:33 AM IST
ರಾಜಸ್ಥಾನದ ಜೋಧ್ಪುರದಲ್ಲಿ ವಾಯುಪಡೆಯ ವಿಮಾನ ಪತನ title=

ಜೋಧ್ಪುರ: ರಾಜಸ್ಥಾನದ ಜೋಧ್ಪುರದ ಬನಾದ್‌ ಸಮೀಪದ ದೆವಲಿಯ ಗ್ರಾಮದಲ್ಲಿ ಭಾರತೀಯ ವಾಯುಪಡೆ (ಐಎಎಫ್) ವಿಮಾನವು ಮಂಗಳವಾರ ಪತನವಾಗಿದೆ. ಅದೃಷ್ಟವಷಾತ್‌ ಪೈಲಟ್‌ ಪಾರಾಗಿದ್ದಾರೆ. ಫೈಟರ್ ಜೆಟ್ ಎಂಬ ಮಿಕೊಯಾನ್ ಮಿಗ್-27 ಅಪಘಾತಕ್ಕೆ ಒಳಗಾಗಿದೆ.

ತಾಂತ್ರಿಕ ದೋಷಕ್ಕೆ  ಗುರಿಯಾದ ಫೈಟರ್‌ ಜೆಟ್‌  ಬನಾದ್‌ ಎಂಬಲ್ಲಿ ಬಯಲು ಪ್ರದೇಶದಲ್ಲಿ  ಬಿದಿದ್ದು , ಭಾರಿ ಬೆಂಕಿ ಮತ್ತು ಹೊಗೆ ಆವರಿಸಿದೆ. ಅಗ್ನಿಶಾಮಕ ದಳ, ಏರ್ ಫೋರ್ಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಈ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಈ ಫೈಟರ್ ಜೆಟ್ ಅಪಘಾತಕ್ಕೊಳಗಾಗುವ ಮುನ್ನ ವಾಯುಪಡೆ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು.

ನಿಯಮಿತ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಮಾನವು ಪತನಗೊಂಡಿದೆ ಎಂದು ಐಎಎಫ್ ತಿಳಿಸಿದೆ. 

Trending News