Mamata Banerjee: ದೀದಿಗೆ ಬಿಗ್ ಶಾಕ್: ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ(ನಾಳೆ) ಹೌರಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಟಿಎಂಸಿಯ ಐವರು ನಾಯಕರು ಬಿಜೆಪಿ

Last Updated : Jan 30, 2021, 08:19 PM IST
  • ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ, ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪರ್ವ ಹೆಚ್ಚಾಗುತ್ತಿದೆ.
  • ಚುನಾವಣೆ ಸಮೀಪಿಸುತ್ತಿದ್ದಂತೆ ಈ ನಡೆ ಸಿಎಂ ಮಮತಾ ಬ್ಯಾನರ್ಜಿಯನ್ನು ಕಂಗೆಡಿಸಿದೆ.
  • ಟಿಎಂಸಿಯ ಐವರು ನಾಯಕರು ದೆಹಲಿಗೆ ತೆರಳಿದ್ದಾರೆ.
Mamata Banerjee: ದೀದಿಗೆ ಬಿಗ್ ಶಾಕ್: ಬಿಜೆಪಿ ಸೇರಲು ಐವರು TMC ನಾಯಕರು ದೆಹಲಿಗೆ! title=

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ, ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪರ್ವ ಹೆಚ್ಚಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ನಡೆ ಸಿಎಂ ಮಮತಾ ಬ್ಯಾನರ್ಜಿಯನ್ನು ಕಂಗೆಡಿಸಿದೆ.

ಈಗಾಗಲೇ ತೃಣಮೂಲ ಕಾಂಗ್ರೆಸ್ ತೊರೆದಿರುವ ಐವರು ನಾಯಕರು ಇದೀಗ ಬಿಜೆಪಿ(BJP) ಸೇರಲು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

Recruitment 2021: SSLC ಪಾಸ್ ಆದವರಿಗೆ ಗೂಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 3369 ಹುದ್ದೆಗಳಿಗೆ ಆರ್ಜಿ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ(ನಾಳೆ) ಹೌರಾದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಟಿಎಂಸಿಯ ಐವರು ನಾಯಕರು ಬಿಜೆಪಿ ಸೇರಲು ಸಜ್ಜಾಗಿದ್ದರು. ಆದರೆ ದೆಹಲಿ ಬಾಂಬ್ ಸ್ಫೋಟದ ಕಾರಣ ಅಮಿತ್ ಶಾ ಕೋಲ್ಕತಾ ಭೇಟಿ ರದ್ದು ಮಾಡಿದ್ದಾರೆ. ಹೀಗಾಗಿ ಟಿಎಂಸಿಯ ಐವರು ನಾಯಕರು ದೆಹಲಿಗೆ ತೆರಳಿದ್ದಾರೆ.

Village Cooking Channel: ಅಣಬೆ ಬಿರಿಯಾನಿ ಸವಿದ ರಾಹುಲ್ ಗಾಂಧಿ...!

ಬಿಜೆಪಿ ಮುಖ್ಯ ಕಚೇರಿಯಲ್ಲಿ ಟಿಎಂಸಿಯ ಐವರು ನಾಯಕರನ್ನು ಅಮಿತ್ ಶಾ ಬಿಜೆಪಿಗೆ ಬರಮಾಡಿಕೊಳ್ಳಲಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ರಜೀಬ್ ಬ್ಯಾನರ್ಜಿ, ಶಾಸಕ ಬೈಶಾಲಿ ದಾಲ್ಮಿಯಾ, ಉತ್ತರಾಪರ ಶಾಸಕ ಪ್ರಬೀರ್ ಘೋಷಾಲ್, ಹೌರಾ ಮೇಯರ್ ರತಿನ್ ಚಕ್ರಬೊರ್ತಿ ಹಾಗೂ ಮಾಜಿ ಶಾಸಕ ರಾನಘಟ್ ಪಾರ್ಥಸಾರಥಿ ಚಟರ್ಜಿ ಬಿಜೆಪಿ ಸೇರಿಕೊಳ್ಳುತ್ತಿರುವ ಟಿಎಂಸಿ ಪ್ರಮುಖ ನಾಯಕರಾಗಿದ್ದಾರೆ.

ಧಿಡೀರನೆ ಉಪವಾಸ ಸತ್ಯಾಗ್ರಹವನ್ನು ರದ್ದುಗೊಳಿಸಿದ ಅಣ್ಣಾ ಹಜಾರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ..
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News