ಮೇ 25ರಿಂದ ವಿಮಾನಯಾನ ಕೈಗೊಳ್ಳುವ ಮೊದಲು ಶುಲ್ಕ ಎಷ್ಟೆಂದು ತಿಳಿಯಿರಿ

ವಿಮಾನಯಾನ ಸಚಿವ (Civil Aviation Minister) ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ, ಕನಿಷ್ಠ ಮತ್ತು ಗರಿಷ್ಠ ಟಿಕೆಟ್‌ಗಳ ಶುಲ್ಕದ ಪಟ್ಟಿಯನ್ನು ಡಿಜಿಸಿಎ ಬಿಡುಗಡೆ ಮಾಡಿದೆ.

Last Updated : May 22, 2020, 02:08 PM IST
ಮೇ 25ರಿಂದ ವಿಮಾನಯಾನ ಕೈಗೊಳ್ಳುವ ಮೊದಲು ಶುಲ್ಕ ಎಷ್ಟೆಂದು ತಿಳಿಯಿರಿ title=

ನವದೆಹಲಿ: ದೇಶಾದ್ಯಂತ ಕರೋನಾ ಬಿಕ್ಕಟ್ಟಿನ ನಡುವೆ ಇದೇ ಮೇ 25ರಿಂದ ದೇಶೀಯ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಏತನ್ಮಧ್ಯೆ ದೇಶೀಯ ವಿಮಾನ ಪ್ರಯಾಣದ ಶುಲ್ಕದಲ್ಲಿ ಬದಲಾವಣೆಯಾಗಿದೆ. ವಿಮಾನಯಾನ ಸಚಿವ (Civil Aviation Minister) ಹರ್ದೀಪ್ ಸಿಂಗ್ ಪುರಿ ಅವರ ಪ್ರಕಾರ, ಕನಿಷ್ಠ ಮತ್ತು ಗರಿಷ್ಠ ಟಿಕೆಟ್‌ಗಳ ಶುಲ್ಕದ ಪಟ್ಟಿಯನ್ನು ಡಿಜಿಸಿಎ ಬಿಡುಗಡೆ ಮಾಡಿದೆ. 7 ಬ್ಯಾಂಡ್‌ಗಳಲ್ಲಿ ಟಿಕೆಟ್ ದರವನ್ನು ನೀಡಲಾಗಿದೆ. ಇಂದಿನಿಂದ ಕನಿಷ್ಠ ಶುಲ್ಕವನ್ನು ಎಷ್ಟು ಹೆಚ್ಚಿಸಲಾಗಿದೆ ಎಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

ಶುಲ್ಕ ಮಿತಿ ನಿಗದಿ:
ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮೇ 25 ರಿಂದ ಪುನರಾರಂಭಗೊಳ್ಳಲಿರುವ ದೇಶೀಯ ವಿಮಾನಗಳ ವಿಮಾನಯಾನ ಮಿತಿಯನ್ನು ಹಾರಾಟದ ಅವಧಿಯನ್ನು ಆಧರಿಸಿ 7 ಬ್ಯಾಂಡ್‌ಗಳಲ್ಲಿ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಪ್ರತಿ ಬ್ಯಾಂಡ್ ಶುಲ್ಕದ ಕನಿಷ್ಠ ಮತ್ತು ಗರಿಷ್ಠ ಮಿತಿಯನ್ನು ಹೊಂದಿರುತ್ತದೆ. ಈ ದರಗಳು ಆಗಸ್ಟ್ 24 ರವರೆಗೆ ಅನ್ವಯವಾಗುತ್ತವೆ.

ಸಮಯಕ್ಕೆ ಅನುಗುಣವಾಗಿ ಶುಲ್ಕ ನಿಗದಿ:
ಈ ಅವಧಿಯ ವಿಮಾನಗಳ ಕನಿಷ್ಠ ಶುಲ್ಕ 2,000 ರೂ. ಮತ್ತು ಗರಿಷ್ಠ ಶುಲ್ಕ 6,000 ರೂ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಲಾಗಿದೆ. ಸಚಿವರ ಪ್ರಕಾರ ವಿಮಾನ ದರಗಳ ಮೊದಲ ಬ್ಯಾಂಡ್ 40 ನಿಮಿಷಗಳಿಗಿಂತ ಕಡಿಮೆ ಅವಧಿಯ ವಿಮಾನಗಳು. ಎರಡನೆಯ, ಮೂರನೆಯ, ನಾಲ್ಕನೇ ಬ್ಯಾಂಡ್ ವಿಮಾನಗಳನ್ನು ಹೊಂದಿರುತ್ತದೆ, ಇದರ ಅವಧಿ ಕ್ರಮವಾಗಿ 40–60 ನಿಮಿಷಗಳು, 60–90 ನಿಮಿಷಗಳು, 90–120 ನಿಮಿಷಗಳು ಮತ್ತು 120–150 ನಿಮಿಷಗಳು.

ಹೊಸ ಶುಲ್ಕ ದರಗಳು:
ನಾಗರಿಕ ವಿಮಾನಯಾನ ಸಚಿವಾಲಯ (ಡಿಜಿಸಿಎ) 40 ರಿಂದ 60 ನಿಮಿಷಗಳು, 60 ರಿಂದ 90 ನಿಮಿಷಗಳು, 90 ರಿಂದ 120 ನಿಮಿಷಗಳು, 120 ರಿಂದ 150 ನಿಮಿಷಗಳು, 150 ರಿಂದ 180 ನಿಮಿಷಗಳು ಮತ್ತು 180-280 ನಿಮಿಷಗಳ ವಿಮಾನಗಳ ಶುಲ್ಕ ಮಿತಿ 2,500-7,500 ರೂ. 3,000 ದಿಂದ 9,000 ರೂಪಾಯಿಗಳು, 3,500 ರಿಂದ 10,000 ರೂಪಾಯಿಗಳು, 4,500 ರಿಂದ 13,000 ರೂಪಾಯಿಗಳು, 5,500 ರಿಂದ 15,700 ರೂಪಾಯಿಗಳು ಮತ್ತು 6,500 ರಿಂದ 18,600 ರೂಪಾಯಿಗಳು.

ಎರಡು ತಿಂಗಳ ಸ್ಥಗಿತದ ನಂತರ ಸೋಮವಾರ (ಮೇ 18) ದೇಶೀಯ ಪ್ರಯಾಣಿಕರ ವಿಮಾನ ಸೇವೆ ಪುನರಾರಂಭಗೊಳ್ಳುವಾಗ ಮೂರನೇ ಒಂದು ಭಾಗದಷ್ಟು ಕಾರ್ಯಾಚರಣೆಯನ್ನು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಅನುಮತಿಸಲಾಗುವುದು ಮತ್ತು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರವು ಹೆಚ್ಚಿನ ದರವನ್ನು ವಿಧಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಗುರುವಾರ ತಿಳಿಸಿದೆ. 

Trending News