ಮಲ್ಯ 'ಘೋಷಿತ ಅಪರಾಧಿ' ಎಂದು ದೆಹಲಿ ಹೈಕೋರ್ಟ್ ಘೋಷಣೆ

ಫೆರಾ(ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ-FERA) ಉಲ್ಲಂಘನೆ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು 'ಘೋಷಿತ ಅಪರಾಧಿ' ಎಂದು ದೆಹಲಿ ಹೈಕೋರ್ಟ್ ಘೋಷಿಸಿದೆ.

Last Updated : Jan 4, 2018, 07:41 PM IST
ಮಲ್ಯ 'ಘೋಷಿತ ಅಪರಾಧಿ' ಎಂದು ದೆಹಲಿ ಹೈಕೋರ್ಟ್ ಘೋಷಣೆ title=

ನವದೆಹಲಿ : ಫೆರಾ(ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ-FERA) ಉಲ್ಲಂಘನೆ ಪ್ರಕರಣದಲ್ಲಿ ವಿಜಯ್ ಮಲ್ಯ ಅವರನ್ನು 'ಘೋಷಿತ ಅಪರಾಧಿ' ಎಂದು ದೆಹಲಿ ಹೈಕೋರ್ಟ್ ಘೋಷಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗಲು ವಿಜಯ್ ಮಲ್ಯ ಸೇರಿದಂತೆ ಅವರ ಪ್ರತಿನಿಧಿಗಳಿಗೆ 30 ದಿನಗಳ ಕಾಲ ಅವಕಾಶ ನೀಡಲಾದ್ದರೂ, ಯಾರೊಬ್ಬರೂ ಹಾಜರಾಗದ ಕಾರಣ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆಹ್ರವತ್, ಮಲ್ಯ ಅವರನ್ನು 'ಘೋಷಿತ ಅಪರಾಧಿ' ಎಂದು ಘೋಷಿಸಿದ್ದಾರೆ.

ಭಾರತೀಯ ಬ್ಯಾಂಕ್'ಗಳಿಂದ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್'ನಲ್ಲಿ ತಲೆ ತಪ್ಪಿಸಿಕೊಂಡಿರುವ ವಿಜಯ್ ಮಲ್ಯ ವಿರುದ್ಧ ಏಪ್ರಿಲ್ 12ರಂದು ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಮದ್ಯದ ದೊರೆ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿದ್ದರೂ ಕೋರ್ಟ್'ಗೆ ಹಾಜರಾಗದ ಕಾರಣ ದಬ್ಬಾಳಿಕೆ ಪ್ರಕ್ರಿಯೆ ಮುಂದುವರಿಸಿದ್ದಾರೆ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ವಿಜಯ್ ಮಲ್ಯ, ಭಾರತದಲ್ಲಿನ 17 ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರೂ.ಗೆ ಹೆಚ್ಚಿನ ಸಾಲ ಪಡೆದಿದ್ದು ಇದೀಗ ಲಂದನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ರಿಟೀಷ್ ನ್ಯಾಯಾಲಯದಲ್ಲೂ ಭಾರತ ದಾವೆ ಹೂಡಿದ್ದರೂ ಕೂಡ ಮಲ್ಯ ಜಾಮೀನು ಪಡೆದು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. 

Trending News