NCP ಯಲ್ಲಿ ಸುಪ್ರಿಯಾ ಸುಳೆಗೆ ಮಹತ್ವದ ಜವಾಬ್ದಾರಿ, ಪವರ್ ಗೇಮ್ ನಿಂದ ಅಜಿತ್ ಪವಾರ್ ಔಟ್

Maharashtra Politics: ಮಹಾರಾಷ್ಟ್ರ ರಾಜಕೀಯ ವಲಯದಿಂದ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಶರದ್ ಪವಾರ್ ಅವರ ಪಕ್ಷ ಎನ್ಸಿಪಿಯಲ್ಲಿ ಅವರ ಪುತ್ರಿ ಸುಪ್ರಿಯಾ ಸುಳೆಗೆ ಉನ್ನತ ಸ್ಥಾನ ನೀಡಲಾಗಿದೆ. ಇದರಿಂದ ಅಜಿತ್ ಪವಾರ್ ಅವರಿಗೆ ಭಾರಿ ಹಿನ್ನಡೆಯಾದಂತಾಗಿದೆ.   

Written by - Nitin Tabib | Last Updated : Jun 10, 2023, 03:36 PM IST
  • ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶ್ಲಾಘಿಸಿದ ಅಜಿತ್ ಪವಾರ್, ನಮ್ಮೆಲ್ಲರ ನಾಯಕ ಮತ್ತು ಸ್ಫೂರ್ತಿಯಾಗಿರುವ
  • ಶರದ್ ಪವಾರ್ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಪಕ್ಷದ ಯಶಸ್ವಿ ಪ್ರಗತಿ ಮುಂದುವರೆದಿದೆ ಎಂದು ಬರೆದಿದ್ದಾರೆ.
  • ಪಕ್ಷದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ, ಪಕ್ಷವನ್ನು ಬಲಪಡಿಸಲು ಹಗಲಿರುಳು ಶ್ರಮಿಸುತ್ತಿರುವ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು
  • ಅವರಿಗೆ ನನ್ನ ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಜಿತ್ ಪವಾರ್ ಬರೆದುಕೊಂಡಿದ್ದಾರೆ.
NCP ಯಲ್ಲಿ ಸುಪ್ರಿಯಾ ಸುಳೆಗೆ ಮಹತ್ವದ ಜವಾಬ್ದಾರಿ, ಪವರ್ ಗೇಮ್ ನಿಂದ ಅಜಿತ್ ಪವಾರ್ ಔಟ್ title=

Maharashtra Politics: ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರ ಪಕ್ಷವಾದ ನ್ಯಾಷನಾಲಿಸ್ಟ್ ಕಾಂಗ್ರೆಸ್ ಪಾರ್ಟಿಯಲ್ಲಿ ಸಂಘಟನಾತ್ಮಕವಾಗಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರಿಗೆ ಪಕ್ಷದ ದೊಡ್ಡ ಜವಾಬ್ದಾರಿ ನೀಡಿದೆ. ಸುಪ್ರಿಯಾ ಸುಳೆ ಅವರನ್ನು ಎನ್‌ಸಿಪಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದಲ್ಲದೇ ಪಕ್ಷದಲ್ಲಿ ಪ್ರಫುಲ್ ಪಟೇಲ್ ಸ್ಥಾನಮಾನ ಕೂಡ ಹೆಚ್ಚಾಗಿದೆ. ಪ್ರಫುಲ್ ಪಟೇಲ್ ಅವರಿಗೂ ಕೂಡ ಕಾರ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನೀಡಲಾಗಿದೆ. ಎನ್‌ಸಿಪಿ ಇಂದು ಈ ಇಬ್ಬರು ಕಾರ್ಯಾಧ್ಯಕ್ಷರನ್ನಾಗಿ ಮಾಡಿದೆ. ಎನ್‌ಸಿಪಿಯಲ್ಲಿ ಸಾಂಸ್ಥಿಕ ಮಟ್ಟದಲ್ಲಿ ಈ ಪ್ರಮುಖ ಬದಲಾವಣೆಗಳೊಂದಿಗೆ, ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಈಗ ಅಧಿಕಾರದ ಆಟದಿಂದ ಹೊರಗುಳಿದಿದ್ದಾರೆ ಎಂಬ ಊಹಾಪೋಹಗಳನ್ನು ಕೇಳಿಬರಲಾರಂಭಿಸಿವೆ. ಶರದ್ ಪರ್ವಾರ್ ಉತ್ತರಾಧಿಕಾರಿಯಾಗುವಲ್ಲಿ ಅಜಿತ್ ಪವಾರ್ ಹಿಂದೆ ಬಿದ್ದಿದ್ದು, ಸುಪ್ರಿಯಾ ಸುಳೆ ಅವರಿಗಿಂತ ಮುಂದೆ ಹೋಗಿದ್ದಾರೆ.

ಸುಪ್ರಿಯಾ ಸುಳೆಗೆ 3 ರಾಜ್ಯಗಳ ಜವಾಬ್ದಾರಿ ಸಿಕ್ಕಿದೆ
ಪಕ್ಷದ ದೊಡ್ಡ ಜವಾಬ್ದಾರಿಯನ್ನು ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಗೆ ನೀಡಿರುವುದರ ಬಗ್ಗೆ ಅಜಿತ್ ಪವಾರ್ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಎನ್‌ಸಿಪಿ ಒಟ್ಟು ಮೂರು ರಾಜ್ಯಗಳ ಹೊಣೆಗಾರಿಕೆಯನ್ನು ಸುಪ್ರಿಯಾ ಸುಳೆಗೆ ನೀಡಿದೆ. ಇದರಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ ಹೆಸರುಗಳು ಶಾಮೀಲಾಗಿವೆ. ಇದರಿಂದ ಶರದ್ ಪವಾರ್ ನಂತರ ಅಜಿತ್ ಪವಾರ್ ಅವರ ಉತ್ತರಾಧಿಕಾರಿಯಾಗುವ ಕನಸು ಭಗ್ನವಾಗಿದೆ.

ಇದನ್ನೂ ಓದಿ-

ಇಂದು ಎನ್‌ಸಿಪಿ ಸ್ಥಾಪನೆಗೆ 24 ವರ್ಷಗಳು ಪೂರ್ಣಗೊಂಡಿವೆ
ಎನ್‌ಸಿಪಿ ಸ್ಥಾಪನೆಯಾಗಿ ಇಂದಿಗೆ 24 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಸಮಸ್ತ ಜನತೆಯ ಜೊತೆಗೆ ಎಲ್ಲಾ ಜನಪ್ರತಿನಿಧಿಗಳು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ರಜತ ಮಹೋತ್ಸವ ಮತ್ತು 24 ನೇ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ-

ಶರದ್ ಪವಾರ್ ಅವರನ್ನು ಶ್ಲಾಘಿಸಿದ ಅಜಿತ್ ಪವಾರ್
ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶ್ಲಾಘಿಸಿದ ಅಜಿತ್ ಪವಾರ್, ನಮ್ಮೆಲ್ಲರ ನಾಯಕ ಮತ್ತು ಸ್ಫೂರ್ತಿಯಾಗಿರುವ ಶರದ್ ಪವಾರ್ ಅವರ ಮಾರ್ಗದರ್ಶನ ಮತ್ತು ನಾಯಕತ್ವದಲ್ಲಿ ಪಕ್ಷದ ಯಶಸ್ವಿ ಪ್ರಗತಿ ಮುಂದುವರೆದಿದೆ ಎಂದು ಬರೆದಿದ್ದಾರೆ. ಪಕ್ಷದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ, ಪಕ್ಷವನ್ನು ಬಲಪಡಿಸಲು ಹಗಲಿರುಳು ಶ್ರಮಿಸುತ್ತಿರುವ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ಅವರಿಗೆ ನನ್ನ ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅಜಿತ್ ಪವಾರ್ ಬರೆದುಕೊಂಡಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News