ಕ್ರೆಡಿಟ್ ಕಾರ್ಡ್‌ನಿಂದ ಹಣ ತೆಗೆದುಕೊಳ್ಳುವ ಮೊದಲು, ಈ ನಿಯಮಗಳನ್ನು ತಿಳಿಯಿರಿ

ಕ್ರೆಡಿಟ್ ಕಾರ್ಡ್‌ನಿಂದ ತೆಗೆಯಲಾಗುವ ಹಣಕ್ಕೆ ನೀವು ಹಣ ಪಡೆದ ದಿನದಿಂದಲೇ ಬಡ್ಡಿ ಪ್ರಾರಂಭವಾಗುತ್ತದೆ. ಅಲ್ಲದೆ, ಪೂರ್ಣ ಪಾವತಿ ಮಾಡುವವರೆಗೆ ಬಡ್ಡಿಯನ್ನು ಭರಿಸಲೇಬೇಕು.

Last Updated : Jul 9, 2019, 08:24 AM IST
ಕ್ರೆಡಿಟ್ ಕಾರ್ಡ್‌ನಿಂದ ಹಣ ತೆಗೆದುಕೊಳ್ಳುವ ಮೊದಲು, ಈ ನಿಯಮಗಳನ್ನು ತಿಳಿಯಿರಿ title=

ನವದೆಹಲಿ: ಸರಿಯಾದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಲಿಕೊಳ್ಳುವುದರಿಂದ ಬಹಳ ಅನುಕೂಲವಾಗುತ್ತದೆ. ನಿಮ್ಮ ಬಳಿ ಹಣವಿಲ್ಲದಿದ್ದಾಗ ಮತ್ತು ತುರ್ತು ಪರಿಸ್ಥಿತಿ ಇದ್ದಾಗ, ಕ್ರೆಡಿಟ್ ಕಾರ್ಡ್ ನಿಮ್ಮ ತಕ್ಷಣದ ಕೆಲಸಕ್ಕೆ ಅಗತ್ಯ ಹಣಕಾಸಿನ ನೆರವು ಒದಗಿಸುತ್ತದೆ. ನೀವು ಪಡೆದ ಹಣವನ್ನು ಪಾವತಿಸಲು ನಿಮಗೆ 50-55 ದಿನಗಳ ಕಾಲಾವಕಾಶ ಕೂಡ ಲಭ್ಯವಿರುತ್ತದೆ. ಈ ನಿರ್ದಿಷ್ಟ ಸಮಯದಲ್ಲಿ ಹಣ ಹಿಂದಿರುಗಿಸಲು ನಿಮಗೆ ಸಾಧ್ಯವಾಗದಿದ್ದಾಗ, ಅದನ್ನು ಇಎಂಐ ಆಗಿ ಪರಿವರ್ತಿಸಲು ಮತ್ತು ಪ್ರತಿ ತಿಂಗಳು ಅದನ್ನು ಪಾವತಿಸಲು ಒಂದು ಆಯ್ಕೆ ಇರುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಇದೇ ಅಂತಾ ಸಿಕ್ಕಾಪಟ್ಟೆ ಬಳಸಿದರೆ, ನಿಮಗೆ ಸಾಲದ ಹೊರೆ ಹೆಚ್ಚಾಗುವುದು ಖಂಡಿತ. ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಹಣವನ್ನು ತೆಗೆದುಕೊಳ್ಳುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ತಿಳಿದಿರುವುದು ಬಹಳ ಅವಶ್ಯಕ.

ಕ್ರೆಡಿಟ್ ಕಾರ್ಡ್‌ನಿಂದಾಗುವ ಅನುಕೂಲಗಳು:
1. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬಹಳ ತುರ್ತು ಪರಿಸ್ಥಿತಿಗಾಗಿ ಹಣವನ್ನು ಪಡೆಯುವ ಅನುಕೂಲವನ್ನು ನೀಡುತ್ತದೆ. ಆದ್ದರಿಂದ, ಇದು ಸಹ ದುಬಾರಿಯಾಗಿದೆ. ಕ್ರೆಡಿಟ್ ಕಾರ್ಡ್‌ನಲ್ಲಿ ಹಣ ಪಡೆಯುವ ಮಿತಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಇದು ಕ್ರೆಡಿಟ್ ಮಿತಿಯ 20% ಮತ್ತು 40% ರ ನಡುವೆ ಇರುತ್ತದೆ. ನಿಮ್ಮ ಕಾರ್ಡ್‌ಗೆ 1 ಲಕ್ಷ ರೂ.ಗಳ ಮಿತಿ ಇದ್ದರೆ ನಗದು ಹಿಂಪಡೆಯುವ ಮಿತಿ 20 ರಿಂದ 40 ಸಾವಿರಗಳವರೆಗೆ ಇರುತ್ತದೆ. ಪ್ರತಿ ಗ್ರಾಹಕರಿಗೆ ಈ ಮಿತಿ ವಿಭಿನ್ನವಾಗಿದ್ದು ಬ್ಯಾಂಕ್ ತಮ್ಮದೇ ಆದ ರೀತಿಯಲ್ಲಿ ಅದನ್ನು ನಿರ್ಧರಿಸುತ್ತದೆ.

2. ಇದರಲ್ಲಿ ಯಾವುದೇ ಡಾಕ್ಯುಮೆಂಟ್ ಇಲ್ಲದೆಯೇ ಸಾಲ ಸಿಗುತ್ತದೆ. 

3. ಇದಕ್ಕಾಗಿ ಯಾವುದೇ ಪ್ರಕ್ರಿಯೆ ಇಲ್ಲ. ನಿಮಗೆ ಹಣ ಅಗತ್ಯವಿದ್ದಾಗಲೆಲ್ಲಾ ನೀವು ಎಟಿಎಂನಲ್ಲಿ ಹಣವನ್ನು ಪಡೆಯಬಹುದು.(ಪ್ರತಿ ಗ್ರಾಹಕರಿಗೂ ಅವರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಇದು ನಿರ್ಧರಿತವಾಗುತ್ತದೆ)

ಕ್ರೆಡಿಟ್ ಕಾರ್ಡ್‌ನಿಂದಾಗುವ ಅನಾನುಕೂಲಗಳು:
1. ಕ್ರೆಡಿಟ್ ಕಾರ್ಡ್‌ನಿಂದ ತೆಗೆದುಕೊಳ್ಳುವ ಹಣಕ್ಕೆ ಬಡ್ಡಿ ಹೆಚ್ಚು. ಬಡ್ಡಿದರಗಳು ವಾರ್ಷಿಕವಾಗಿ 18% ರಿಂದ 40% ಆಗಿರಬಹುದು. ಅಂದರೆ, ಒಂದು ತಿಂಗಳ ಬಡ್ಡಿದರವು 1.5% ನಿಂದ 3.5% ವರೆಗೆ ಇರುತ್ತದೆ.

2. ಕ್ರೆಡಿಟ್ ಕಾರ್ಡ್‌ನಿಂದ ತೆಗೆಯಲಾಗುವ ಹಣಕ್ಕೆ ನೀವು ಹಣ ಪಡೆದ ದಿನದಿಂದಲೇ ಬಡ್ಡಿ ಪ್ರಾರಂಭವಾಗುತ್ತದೆ. ಅಲ್ಲದೆ, ಪೂರ್ಣ ಪಾವತಿ ಮಾಡುವವರೆಗೆ ಬಡ್ಡಿಯನ್ನು ಭರಿಸಲೇ ಬೇಕು. ಹಾಗಾಗಿ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಹಣವನ್ನು ಮೊದಲು ಮರುಪಾವತಿಸಲು ಪ್ರಯತ್ನಿಸಿ.

3. ನೀವು ನಗದು ಪಡೆದ ತಕ್ಷಣ ನಗದು ಮುಂಗಡ ಶುಲ್ಕ(Cash advance Fee)ವನ್ನು ಪಡೆಯುತ್ತೀರಿ. ಇದಲ್ಲದೆ, ಅನೇಕ ರೀತಿಯ ಇತರ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಪೂರ್ಣ ಪಾವತಿ ಮಾಡುವವರೆಗೆ ಈ ಶುಲ್ಕಗಳ ಶುಲ್ಕ ಮುಂದುವರಿಯುತ್ತದೆ. ಆದ್ದರಿಂದ, ಇದು ಸಾಕಷ್ಟು ದುಬಾರಿಯಾಗುತ್ತದೆ.

4. ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ತೆಗೆಯುವುದರಿಂದ ರಿವಾರ್ಡ್ ಪಾಯಿಂಟ್‌ಗಳ ಲಾಭವನ್ನು  ಪಡೆಯುವುದಿಲ್ಲ. 
 

Trending News