Char Dham Yatra: ಚಾರ್‌ಧಾಮ ಯಾತ್ರೆಗೆ ತೆರಳಿದ್ದ 39 ಮಂದಿ ಸಾವು

ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಭಕ್ತಾದಿಗಳಿಗೆ ಮನವಿಯನ್ನು ಮಾಡಿದ್ದು, "ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುವವರು ಚಾರ್‌ಧಾಮ್‌ ಯಾತ್ರೆಗೆ ಬರಬೇಡಿ" ಎಂದು ತಿಳಿಸಿದೆ. ಅಲ್ಲಿನ ವಾತಾವರಣ ಕೊಂಚ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಈ ಅವಘಡಗಳು ಸಂಭವಿಸಿವೆ.   

Written by - Bhavishya Shetty | Edited by - Bhavishya Shetty | Last Updated : May 16, 2022, 12:52 PM IST
  • 39 ಚಾರ್‌ಧಾಮ್ ಯಾತ್ರಾರ್ಥಿಗಳ ಸಾವು
  • ಮೌಂಟೇನ್ ಸಿಕ್‌ನೆಸ್‌ನಿಂದ ಸಾವು ಶಂಕೆ
  • ಉತ್ತರಾಖಂಡ ಸರ್ಕಾರದಿಂದ ಆರೋಗ್ಯ ಸಂಬಂಧಿ ಸುತ್ತೋಲೆ ಬಿಡುಗಡೆ
Char Dham Yatra: ಚಾರ್‌ಧಾಮ ಯಾತ್ರೆಗೆ ತೆರಳಿದ್ದ 39 ಮಂದಿ ಸಾವು title=
Char Dham Yatra

ಸಂದರ್ಭದಲ್ಲಿ ಗಂಗೋತ್ರಿ ಮತ್ತು ಯಮುನೋತ್ರಿ ಧಾಮ್ ಬಾಗಿಲುಗಳನ್ನು ತೆರೆಯಲಾಗಿದೆ. ಆದರೆ ಚಾರ್‌ಧಾಮ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಪೈಕಿ ಇಲ್ಲಿವರೆಗೆ ಸುಮಾರು 39 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನು ಓದಿ: ಮಲೇಶಿಯಾದಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡತಿ ʼಸಾನ್ವಿ ದೇಸಾಯಿʼ
 
ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರವು ಭಕ್ತಾದಿಗಳಿಗೆ ಮನವಿಯನ್ನು ಮಾಡಿದ್ದು, "ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸುವವರು ಚಾರ್‌ಧಾಮ್‌ ಯಾತ್ರೆಗೆ ಬರಬೇಡಿ" ಎಂದು ತಿಳಿಸಿದೆ. ಅಲ್ಲಿನ ವಾತಾವರಣ ಕೊಂಚ ಭಿನ್ನವಾಗಿರುವ ಹಿನ್ನೆಲೆಯಲ್ಲಿ ಈ ಅವಘಡಗಳು ಸಂಭವಿಸಿವೆ. 
 
ಈ ಸಾವಿಗೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮೌಂಟೇನ್ ಸಿಕ್‌ನೆಸ್ ಕಾರಣವಾಗಿರಬಹುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನು ಓದಿ: SBI Update! ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದ ಎಸ್ಬಿಐ

ಚಾರ್ ಧಾಮ್ ಯಾತ್ರೆ ಆರಂಭವಾಗಿ ಎರಡು ವಾರ ಕಳೆಯುವಷ್ಟರಲ್ಲಿ 39 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿ. ಇನ್ನು ಈ ವರ್ಷ ಚಾರ್ ಧಾಮ್ ಯಾತ್ರೆಗೆ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಅಷ್ಟೇ ಅಲ್ಲದೆ, 18 ಮಂದಿ ಚಾರಣದ ಸಮಯದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News