Sprouting Garlic: ಮೊಳಕೆ ಬಂದ ಬೆಳ್ಳುಳ್ಳಿ ಸೇವನೆಯ ಆರೋಗ್ಯಕರ ಲಾಭಗಳು ನಿಮಗೆ ಗೊತ್ತೇ?

Sprouting Garlic For Healthy Life - ಮೊಳಕೆ ಬಂದ ಬೇಳೆಕಾಳುಗಳನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳು ಸಿಗುತ್ತವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಮೊಳಕೆಯೊಡೆದ ನಂತರ ಬೆಳ್ಳುಳ್ಳಿಯನ್ನು ತಿನ್ನುವುದರಿಂದಲೂ ಕೂಡ ಹಲವಾರು ಪ್ರಯೋಜನಗಳಿವೆ. ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಮೂಲದಿಂದ ತೆಗೆದುಹಾಕುವಲ್ಲಿ ಬೆಳ್ಳುಳ್ಳಿ ತುಂಬಾ ಪ್ರಮುಖ ಪಾತ್ರವಹಿಸುತ್ತದೆ.

Written by - Nitin Tabib | Last Updated : Feb 12, 2022, 02:06 PM IST
  • ಮೊಳಕೆ ಬಂದ ಬೆಳ್ಳುಳ್ಳಿ ಸೇವನೆಯ ಲಾಭಗಳು
  • ಕ್ಯಾನ್ಸರ್ ನಿವಾರಣೆಗೆ ಲಾಭಕಾರಿ
  • ಇತರ ಕಾಯಿಲೆಗಳ ವಿಷಯದಲ್ಲಿ ಹೇಗೆ ಲಾಭಕಾರಿಯಾಗಿದೆ?
Sprouting Garlic: ಮೊಳಕೆ ಬಂದ ಬೆಳ್ಳುಳ್ಳಿ ಸೇವನೆಯ ಆರೋಗ್ಯಕರ ಲಾಭಗಳು ನಿಮಗೆ ಗೊತ್ತೇ? title=
Sprouting Garlic Health Benefits (File Photo)

ನವದೆಹಲಿ: prouting Garlic Health Benefits - ಮೊಳಕೆ ಬಂದ ಬೇಳೆಕಾಳುಗಳನ್ನು ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳು ಸಿಗುತ್ತವೆ ಎಂಬುದನ್ನು ನೀವು ಕೇಳಿರಬಹುದು. ಆದರೆ ಮೊಳಕೆಯೊಡೆದ ನಂತರ ಬೆಳ್ಳುಳ್ಳಿಯನ್ನು  (Sprouting Garlic) ತಿನ್ನುವುದರಿಂದಲೂ ಕೂಡ ಹಲವಾರು ಪ್ರಯೋಜನಗಳಿವೆ. ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಮೂಲದಿಂದ ತೆಗೆದುಹಾಕುವಲ್ಲಿ ಬೆಳ್ಳುಳ್ಳಿ (Garlic Health Benefits) ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಅಂದರೆ, ಈ ರೋಗಗಳನ್ನು ಮೂಲದಿಂದ ತೊಡೆದುಹಾಕಲು ಇಂದಿನಿಂದಲೇ ನೀವೂ ಕೂಡ ಬೆಳ್ಳುಳ್ಳಿ ಮೊಗ್ಗುಗಳನ್ನು ತಿನ್ನಲು ಪ್ರಾರಂಭಿಸಿ.

ಈ ರೋಗಗಳಿಂದ ಮುಕ್ತಿ ಸಿಗುತ್ತದೆ
ಸಾಮಾನ್ಯ ಬೆಳ್ಳುಳ್ಳಿಯ (Garlic) ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು, ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಮತ್ತು ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಇದೆ ರೀತಿ  ಮೊಳಕೆಯೊಡೆದ ಬೆಳ್ಳುಳ್ಳಿ ಸೇವನೆಯು ಕ್ಯಾನ್ಸರ್, ಪಾರ್ಶ್ವವಾಯು ವಿರುದ್ಧ ಹೋರಾಡಲು, ಹೃದ್ರೋಗ ಹಾಗೂ ಹೃದಯಾಘಾತ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಈ 5 ಆಯುರ್ವೇದ ಆಹಾರ ಸೇವಿಸಿ

ಮೊಳಕೆಯೊಡೆಯುವ ಬೆಳ್ಳುಳ್ಳಿಯ ಪ್ರಯೋಜನಗಳು
ಮಾಧ್ಯಮ ವರದಿಗಳ ಪ್ರಕಾರ, ಮೊಳಕೆಯೊಡೆದ ತರಕಾರಿಗಳು ಮತ್ತು ಹಣ್ಣುಗಳು ಆರೋಗ್ಯಕ್ಕೆ ಹಾನಿಕಾರಕವೆಂದು ಅನೇಕ ಜನರು ಹೇಳುತ್ತಾರೆ, ಆದರೆ ಕೆಲವು ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇದು ಸಂಭವಿಸಬಹುದು. ಆದರೆ, ಬೆಳ್ಳುಳ್ಳಿಯ ವಿಷಯದಲ್ಲಿ ಅದು ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲ. ಸಾದಾ ಬೆಳ್ಳುಳ್ಳಿ ಆರೋಗ್ಯದ ವಿಷಯದಲ್ಲಿ ಯಾವುದೇ ಒಂದು ಖಜಾನೆಗಿಂತ ಕಮ್ಮಿ ಇಲ್ಲ ಎನ್ನಲಾಗುತ್ತದೆ. ಅದೇ ರೀತಿ  ಮೊಳಕೆಯೊಡೆದ ಬೆಳ್ಳುಳ್ಳಿ ಕೂಡ ದೇಹಕ್ಕೆ (Health Tips) ಹಲವಾರು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ-ಈ ವೈರಸ್ ಮೆದುಳಿನಲ್ಲಿ ಅಡಗಿಕೊಳ್ಳಬಹುದು, ಚಿಕಿತ್ಸೆಯ ನಂತರವೂ ಮರುಕಳಿಸಬಹುದು.!

ಕ್ಯಾನ್ಸರ್ ನಿಂದ ಹಿಡಿದು ಚರ್ಮ ಸೋಂಕಿನವರೆಗೆ ಲಾಭ
ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಮೊಳಕೆಯೊಡೆದ ಬೆಳ್ಳುಳ್ಳಿ ಹೃದ್ರೋಗಗಳು, ಕ್ಯಾನ್ಸರ್, ಚರ್ಮದ ಸೋಂಕಿನಂತಹ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಬೆಳ್ಳುಳ್ಳಿ ಶೀತ-ನೆಗಡಿ  ಮತ್ತು ಕಟ್ಟಿದ ಮೂಗಿನಂತಹ ಸಮಸ್ಯೆಗೆ ಪ್ರಯೋಜನಕಾರಿಯಾಗಿದೆ. ಮೊಳಕೆಯೊಡೆದ ಬೆಳ್ಳುಳ್ಳಿ ಸಾಮಾನ್ಯ ಬೆಳ್ಳುಳ್ಳಿಗಿಂತ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-ಕೆಲವರು ಇದ್ದಕ್ಕಿದ್ದಂತೆ ಮೂರ್ಛೆ ಹೋಗುತ್ತಾರೆ.. ಈ ಕಾಯಿಲೆಗೆ ಇದೇ ಮುಖ್ಯ ಕಾರಣ

(Disclaimer -  ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News