Asafoetida health benefits : ಇಲ್ಲಿವೆ ಚಿಟಿಕೆ ಇಂಗಿನ ಅದ್ಭುತ ಆರೋಗ್ಯ ಲಾಭಗಳು

Asafoetida health benefits :  ಅಡುಗೆಯಲ್ಲಿ ಕೊನೆಗೆ ಚಿಟಿಕೆ ಇಂಗು ಹಾಕುವುದನ್ನು ನೀವು ನೋಡಿರಬಹುದು. ಕೆಲವರಿಗೆ ಇಂಗು ವಾಸನೆ ಇಷ್ಟ.  ಇನ್ನು ಕೆಲವರಿಗೆ ಇಂಗು ಕಂಡರೆ ಕಷ್ಟ.  ಆದರೆ, ಆರೋಗ್ಯ ದೃಷ್ಟಿಯಿಂದ ನೋಡಿದಾಗ ಇಂಗಿನಿಂದ ಅಪಾರ ಪ್ರಯೋಜನವಿದೆ.

Written by - Ranjitha R K | Last Updated : Jun 9, 2021, 08:31 AM IST
  • ಇಂಗು ರುಚಿಗೆ ಹೇಗೆ ಮುಖ್ಯವೋ, ನಿಮ್ಮ ದೇಹಾರೋಗ್ಯಕ್ಕೂ ಅಷ್ಟೇ ಮುಖ್ಯ.
  • ಕೆಲವೊಂದು ಔಷಧಿಗಳಲ್ಲೂ ಇಂಗನ್ನು ಬಳಸಲಾಗುತ್ತದೆ.
  • ಇಂಗು ಟೆನ್ಶನ್, ಅರ್ಥರೈಟಿಸ್ ಮೊದಲಾದ ಕಾಯಿಲೆಗಳನ್ನೂ ದೂರ ಮಾಡುತ್ತದೆ
Asafoetida health benefits  : ಇಲ್ಲಿವೆ ಚಿಟಿಕೆ ಇಂಗಿನ ಅದ್ಭುತ ಆರೋಗ್ಯ ಲಾಭಗಳು title=
ಇಂಗು ರುಚಿಗೆ ಹೇಗೆ ಮುಖ್ಯವೋ, ನಿಮ್ಮ ದೇಹಾರೋಗ್ಯಕ್ಕೂ ಅಷ್ಟೇ ಮುಖ್ಯ. (photo zee news)

ನವದೆಹಲಿ : ಅಡುಗೆಯಲ್ಲಿ ಕೊನೆಗೆ ಚಿಟಿಕೆ ಇಂಗು (Asafoetida) ಹಾಕುವುದನ್ನು ನೀವು ನೋಡಿರಬಹುದು. ಕೆಲವರಿಗೆ ಇಂಗು ವಾಸನೆ ಇಷ್ಟ.  ಇನ್ನು ಕೆಲವರಿಗೆ ಇಂಗು ಕಂಡರೆ ಕಷ್ಟ.  ಆದರೆ, ಆರೋಗ್ಯ ದೃಷ್ಟಿಯಿಂದ ನೋಡಿದಾಗ ಇಂಗಿನಿಂದ ಅಪಾರ (Asafoetida health benefits) ಪ್ರಯೋಜನವಿದೆ. ಇಂಗು ರುಚಿಗೆ ಹೇಗೆ ಮುಖ್ಯವೋ, ನಿಮ್ಮ ದೇಹಾರೋಗ್ಯಕ್ಕೂ ಅಷ್ಟೇ ಮುಖ್ಯ. ವಿಟಮಿನ್,  ಕ್ಯಾಲ್ಸಿಯಂ, ಅಯರನ್, ಅಂಟಿ ಅಕ್ಸಿಡೆಂಟ್, ಆಂಟಿ ವಯರಲ್ ಗುಣಗಳಿಂದ ಸಮೃದ್ಧವಾಗಿರುತ್ತದೆ ಇಂಗು.  ಕೆಲವೊಂದು ಔಷಧಿಗಳಲ್ಲೂ ಇಂಗನ್ನು ಬಳಸಲಾಗುತ್ತದೆ.  ಇಂಗು ಟೆನ್ಶನ್, ಅರ್ಥರೈಟಿಸ್ ಮೊದಲಾದ ಕಾಯಿಲೆಗಳನ್ನೂ ದೂರ ಮಾಡುತ್ತದೆ. ಹಲ್ಲು ನೋವಿಗೂ ಇಂಗು ರಾಮಬಾಣ. ತಜ್ಞರು ಹೇಳುವ ಪ್ರಕಾರ ಇಂಗಿನ 9 ಪ್ರಯೋಜನಗಳ ಬಗ್ಗೆ ತಿಳಿಯೋಣ. 

1. ಜೀರ್ಣಕ್ರಿಯೆಗೆ
ಜೀರ್ಣ ಕ್ರಿಯೆಯಲ್ಲಿ (digestion) ಇಂಗು ಬಹಳ ಪ್ರಯೋಜನಕಾರಿಯಾಗಿದೆ. ಇಂಗಿನಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿರುತ್ತದೆ. ಇದು ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಹೊಟ್ಟೆ ನೋವಿನ ಸಂದರ್ಭದಲ್ಲಿಯೂ ಇಂಗು (Asafoetida) ಉಪಯೋಗಕ್ಕೆ ಬರುತ್ತದೆ. ಇಂಗನ್ನು ಸಾಂಬಾರ್ ನಲ್ಲಿ ಬೆರೆಸಿ ಅಥವಾ ನೀರಿನಲ್ಲಿ ಬೆರೆಸಿ ಉಪಯೋಗಿಸಬಹುದು.

ಇದನ್ನೂ ಓದಿ : Curd/Yoghurt Tips: ಈ ಪದಾರ್ಥಗಳನ್ನು ಮೊಸರಿನೊಂದಿಗೆ ಅಪ್ಪಿ-ತಪ್ಪಿಯೂ ತಿನ್ನಲೇಬಾರದು

2. ಶೀತ ಕೆಮ್ಮಿಗೆ :
ಶೀತ (Cold),  ಕೆಮ್ಮುವಿನ ಸಮಸ್ಯೆಗೂ ಇಂಗು ಬಹಳ ಪ್ರಯೋಜನ ನೀಡುತ್ತದೆ. ಶೀತ, ಕಫದ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂಗು ಬೆರೆಸಿದ ನೀರನ್ನು ಎದೆಯ ಮೇಲೆ ತಿಕ್ಕಿ. ಅಥವಾ ಜೇನು ತುಪ್ಪದ (Honey) ಜೊತೆ ಇಂಗನ್ನು ಬೆರೆಸಿ ಸೇವಿಸಿ ಆರಾಮ ಸಿಗುತ್ತದೆ.

3. ಉಸಿರಾಟದ ಸಮಸ್ಯೆಗೆ ಪರಿಹಾರ:
ಇಂಗಿನಲ್ಲಿ ಆಂಟಿ ವೈರಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ. ಶೀತ ಕೆಮ್ಮಿನಿಂದ ಉಸಿರಾಡಲು ಸಮಸ್ಯೆಯಾಗುತ್ತಿದ್ದರೆ ಇಂಗನ್ನು ಬಳಸಿ ನೋಡಿ.

4. ಪೀರಿಯಡ್ಸ್ ಸಂದರ್ಭದ ಹೊಟ್ಟೆನೋವಿಗೂ ಉಪಾಯ :
ಹೆಣ್ಣುಮಕ್ಕಳಿಗೆ ಪೀರಿಯೆಡ್ಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವಿಗೂ ಇದು ಉತ್ತಮ ಉಪಾಯವಾಗಿದೆ. ಇಂಗಿನಲ್ಲಿ ಆಂಟಿ ಇನ್ಫ್ಲಮೇಟರಿ ಗುಣವಿರುವುದರಿಂದ ಇದು ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ.  

ಇದನ್ನೂ ಓದಿ : ಈರುಳ್ಳಿ ಕತ್ತರಿಸುವಾಗ ಈ ಟ್ರಿಕ್ಸ್ ಬಳಸಿ, ಖಂಡಿತಾ ಕಣ್ಣಲ್ಲಿ ನೀರು ಬರುವುದಿಲ್ಲ.

5. ರಕ್ತದೊತ್ತಡ :
ಇಂಗಿನಲ್ಲಿರುವ ಕೊಮೆರಿನ್ ಎಂಬ ಅಂಶವು ರಕ್ತದೊತ್ತಡವನ್ನು (blood pressure) ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ಇದರಲ್ಲಿರುವ ಔಷಧೀಯ ಗುಣಗಳಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. 

6. ಹಲ್ಲು ನೋವು : 
ಇಂಗಿನಲ್ಲಿ ಅನೇಕ ಪ್ರಕಾರ ಆಂಟಿ ಆಕ್ಸಿಡೆಂಟ್ಸ್ ಗಳಿರುತ್ತವೆ. ಇದು ಸೋಂಕು (infection) ಮತ್ತು ನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಲ್ಲು ನೋವಿದ್ದರೆ ಅಥವಾ ಇನ್ಫೆಕ್ಷನ್ ಆಗಿದ್ದರೆ ಅಥವಾ ವಸಡಿನಲ್ಲಿ ರಕ್ತ ಬರುವ ಸಮಸ್ಯೆಯಿದ್ದರೆ, ಇಂಗನ್ನು ಬಳಸಿ ನೋಡಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇದು ತಜ್ಙರು ಹೇಳಿರುವ ಮಾಹಿತಿಯಷ್ಟೇ. ಇದನ್ನು ಕಾರ್ಯಗತಗೊಳಿಸುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ಇದನ್ನೂ ಓದಿ : ನಿಮಗೆ ಗೊತ್ತಿರಲಿ, ಅಂಜೂರ ತಿನ್ನುವುದರಿಂದ ಆಗುವ ಈ 7 ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News