ಕಣ್ಣಿಗೆ ಕಾಣುವ ಈ ಚಿಕ್ಕ 'ನೊಣ' ಎಷ್ಟು ಡೇಂಜರ್ ಗೊತ್ತಾ..?

'ನೊಣ' ನೋಡಲು ತುಂಬಾ ಚಿಕ್ಕ ಕೀಟ ಆದ್ರೆ ಅದು ಮಾನವನ ಪ್ರಾಣ ತೆಗೆಯುವ ಕೆಲಸ ಮಾಡುತ್ತೆ ಅಂದ್ರೆ ನಂಬುತ್ತೀರಾ!

Last Updated : Nov 9, 2020, 07:23 PM IST
  • ರೋಗಗಳನ್ನು ಉಂಟು ಮಾಡುವ ನೊಣಗಳಿಂದ ಹುಷಾರಾಗಿರಿ
  • ಚಿಕ್ಕ ಕೀಟ ಆದ್ರೆ ಅದು ಪ್ರಾಣ ತೆಗೆಯುವ ಕೆಲಸ ಮಾಡುತ್ತೆ ಅಂದ್ರೆ ನಂಬುತ್ತೀರಾ!
  • ನೊಣ, ಆಹಾರವನ್ನು ತಿನ್ನುವ ರೀತಿ ತುಂಬ ವಿಚಿತ್ರ
ಕಣ್ಣಿಗೆ ಕಾಣುವ ಈ ಚಿಕ್ಕ 'ನೊಣ' ಎಷ್ಟು ಡೇಂಜರ್ ಗೊತ್ತಾ..? title=
Image Courtesy zee news

ನಾವು ನಮ್ಮ ಮನೆಗಳಲ್ಲಿ ನೊಣ(Fly)ಗಳನ್ನ ನೋಡಿರುತ್ತೆ ಮತ್ತು ರಸ್ತೆ ಪಕ್ಕದ ಚರಂಡಿಗಳಲ್ಲಿ ಅವುಗಳದ್ದೇ  ಕಾರುಬಾರು. ಮನಬಂದಂತೆ ಊಟದ ತಟ್ಟೆ, ತಿನ್ನುವ ಆಹಾರ, ತಿಂಡಿಗಳ ಮೇಲೆ ಕೂರುವ ಇವು ನಮಗೆ ಗೊತ್ತಿಲ್ಲದೇ ನಮ್ಮ ಆರೋಗ್ಯದ ಮೇಲೆ ಅಷ್ಟರ ಮಟ್ಟಿಗೆ ಕೆಟ್ಟ ಪರಿಣಾಮಗಳು ಬರುತ್ತೆ ಎಂಬುವುದು ಗೊತ್ತಿಲ್ಲ. ನೋಡಲು ತುಂಬಾ ಚಿಕ್ಕ ಕೀಟ ಆದ್ರೆ ಅದು ಮಾನವನ ಪ್ರಾಣ ತೆಗೆಯುವ ಕೆಲಸ ಮಾಡುತ್ತೆ ಅಂದ್ರೆ ನಂಬುತ್ತೀರಾ!

ಈ ಕಾಯಿಲೆಗಳಿಗೆ ರಾಮಬಾಣ ಅಜ್ವಾಯಿನ್ ನೀರು, ಹೇಗೆ ತಯಾರಿಸಬೇಕು? ಇಲ್ಲಿದೆ ವಿಧಾನ

ನೊಣ, ಆಹಾರವನ್ನು ತಿನ್ನುವ ರೀತಿ ತುಂಬ ವಿಚಿತ್ರ. ಆಹಾರದ ಮೇಲೆ ಕೂರುವ ಇದು, ಮೊದಲು ಅದರ ಮೇಲೆ ಜೊಲ್ಲು ರಸ (saliva)ವನ್ನು ಮತ್ತು ಇತರ ಜೀರ್ಣರಸ (digestive juices) ಗಳನ್ನು ಬಿಡುತ್ತದೆ. ಇದರಿಂದಲೇ ಆಹಾರ ಅಧಿಕ ಪ್ರಮಾಣದಲ್ಲಿ ಮಲಿನಗೊಳ್ಳುತ್ತವೆ. ಇವು ಅನೇಕ ಭಯಂಕರ ರೋಗಾಣುಗಳನ್ನು ಹರಡುತ್ತವೆ.

Health Tips: ಈ ಸಮಸ್ಯೆಗಳಿದ್ದರೆ ಅಪ್ಪಿ-ತಪ್ಪಿಯೂ ಕೂಡ ಬೆಳ್ಳುಳ್ಳಿ ಸೇವನೆ ಮಾಡಬೇಡಿ

ನೊಣ ಇನ್ನೊಂದು ರೀತಿಯಲ್ಲಿ ಆಹಾರವನ್ನು ಕಲುಷಿತಗೊಳಿಸುತ್ತವೆ. ಅವು ತಮ್ಮ ಕಾಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಕಾಲ್ಗಳನ್ನು ಪರಸ್ಪರ ಉಜ್ಜಿಕೊಳ್ಳುತ್ತವೆ. ಹೀಗೆ ಮಾಡಿದಾಗ ಅವುಗಳ ಕಾಲಿನಲ್ಲಿರುವ ರೋಗಾಣುಗಳು ಆಹಾರದ ಮೇಲೆ ಬೀಳುತ್ತವೆ.

Health Tips:Work From Home ನಿಂದಾಗುವ ಈ ಹಾನಿಯ ಕುರಿತು ಅಧ್ಯಯನ ಏನು ಹೇಳುತ್ತೆ..?

ನೊಣಗಳು ಆಹಾರವನ್ನು ಕಲುಷಿತಗೊಳಿಸುವುದರಿಂದ ಟೈಫಾಯಿಡ್, ಕ್ಷಯ ಮತ್ತು ಆಮಶಂಕೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಹವಾಮಾನ ತಣ್ಣಗಿದ್ದರೆ ಹೆಚ್ಚುಕಾಲ ಬದುಕುವ ಇವು ಬಿರು ಬೇಸಿಗೆಯಲ್ಲಿ ಸಾಯುತ್ತವೆ. ಹಾಗಾಗಿ ಇಂತಹ ರೋಗಗಳನ್ನು ಉಂಟು ಮಾಡುವ ನೊಣಗಳಿಂದ ಹುಷಾರಾಗಿರಿ.

Trending News