ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗಬೇಕಾದರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ ಸೇವಿಸಿ ! ಖಂಡಿತವಾಗಿಯೂ ತಿಳಿಯುವುದು ವ್ಯತ್ಯಾಸ

Curd to burn belly fat : ನಮ್ಮ ದೇಹದಲ್ಲಿ ಸೇರಿಕೊಂಡಿರುವ ಬೊಜ್ಜು ಕರಗಿಸುವುದು ಅಷ್ಟು ಸುಲಭವಲ್ಲ. ಅದರಲ್ಲಿಯೂ ಸೊಂಟ ಮತ್ತು ಹೊಟ್ಟೆ ಭಾಗದ ಬೊಜ್ಜು ಕರಗಿಸುವುದು ಬಹಳ ಕಷ್ಟ. ಆದರೆ ನಿತ್ಯ ನಾವು ಹೇಳುವ ರೀತಿಯಲ್ಲಿ ಒಂದು ಕಪ್ ಮೊಸರು ಸೇವಿಸಿದರೆ ದೇಹ ತೂಕ ಸರಾಗವಾಗಿ ಇಳಿಯುವುದು ಸಾಧ್ಯವಾಗುತ್ತದೆ.    

Written by - Ranjitha R K | Last Updated : May 23, 2024, 03:37 PM IST
  • ಪ್ರತಿ ಮನೆಯಲ್ಲಿಯೂ ಮೊಸರಿನ ಬಳಕೆ ಇದ್ದೆ ಇರುತ್ತದೆ.
  • ಕೆಲವರ ಊಟ ಮೊಸರಿಲ್ಲದೆ ಪೂರ್ಣವಾಗುವುದೇ ಇಲ್ಲ.
  • ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ.
ಒಂದೇ ವಾರದಲ್ಲಿ ದುಂಡಗಿರುವ ಹೊಟ್ಟೆ ಚಪ್ಪಟೆಯಾಗಬೇಕಾದರೆ ಮೊಸರಿಗೆ ಒಂದು ಚಮಚ ಈ ಪುಡಿ ಬೆರೆಸಿ ಸೇವಿಸಿ ! ಖಂಡಿತವಾಗಿಯೂ ತಿಳಿಯುವುದು ವ್ಯತ್ಯಾಸ  title=

Curd To loose weight : ಪ್ರತಿ ಅಡುಗೆ ಮನೆಯಲ್ಲಿಯೂ ಮೊಸರಿಗೆ ಒಂದು ಸ್ಥಾನ ಇದ್ದೇ ಇರುತ್ತದೆ.ಕೆಲವರಿಗೆ ಊಟದ  ಮುಗಿಸಲು ಕೊನೆಯಲ್ಲಿ ಮೊಸರು ಬೇಕೇ ಬೇಕು. ಅಂದರೆ ಮೊಸರಿಲ್ಲದೆ ಅವರ ಭೋಜನ ಪೂರ್ಣವಾಗುವುದೇ ಇಲ್ಲ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ.ಇದು ದೇಹವನ್ನು ಡಿಹೈಡ್ರೆಟ್ ಆಗದಂತೆ ತಡೆಯುತ್ತದೆ. ಮೊಸರು ತಿನ್ನಲು ಇಂಥದ್ದೇ ಕಾಲ ಎಂದೇನಿಲ್ಲ. ಯಾವ ಕಾಲದಲ್ಲಿ ಬೇಕಾದರೂ ಮೊಸರು ಸೇವಿಸಬಹುದು. ಅದು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಹಿರಿಯರು ಕಿರಿಯರು ಎನ್ನದೆ ಪ್ರತಿಯೊಬ್ಬರೂ ನಿತ್ಯ ಒಂದು ಕಪ್ ಮೊಸರು ತಿಂದರೆ ಒಳ್ಳೆಯದು. ಮೊಸರು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.ಇದೆಲ್ಲದರ ಜೊತೆಗೆ ಮೊಸರು ತೂಕವನ್ನು ಕಡಿಮೆ ಮಾಡಲು ಕೂಡಾ ಬಹಳಷ್ಟು ಸಹಕಾರಿ. ಏನೇ ಮಾಡಿದರೂ ಕರಗದ ಹಠಮಾರಿ ಬೊಜ್ಜನ್ನು ಕರಗಿಸುವ ಶಕ್ತಿ ಮೊಸರಿಗಿದೆ. ಮೊಸರನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಸೇವಿಸುತ್ತಾ ಬಂದರೆ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಬೊಜ್ಜು ಕರಗುವುದು ನಿಮ್ಮ ಗಮನಕ್ಕೆ ಬರುತ್ತದೆ.  

ತೂಕ ಇಳಿಸಲು ಮೊಸರು ಹೇಗೆ ಪ್ರಯೋಜನಕಾರಿ :  
ಚಯಾಪಚಯವನ್ನು ಸುಧಾರಿಸುತ್ತದೆ :

ಮೊಸರು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯ ಹೆಚ್ಚಳ ಎಂದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆಯ ಪ್ರಮುಖ ಹಂತ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಚಯಾಪಚಯ ಕ್ರಿಯೆ ಸರಿಯಾಗಿದ್ದರೆ ದೇಹ ಸಾಕಷ್ಟು ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : ಇಂಗಿನ ನೀರಿಗೆ ಕಾಲು ಚಮಚ ಈ ಪುಡಿ ಹಾಕಿ ಕುಡಿಯಿರಿ !ಯೂರಿಕ್ ಆಸಿಡ್ ಕರಗಿ ನೀರಾಗುವುದು, ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು !

ಹೆಚ್ಚು ಸಮಯದವರಿಗೆ ಹಸಿವನ್ನು ತಡೆಯುತ್ತದೆ : 
ತೂಕ ಇಳಿಸಿಕೊಳ್ಳಲು ನಿರ್ಧರಿಸಿದ ತಕ್ಷಣ ಜನರು ಸಾಮಾನ್ಯವಾಗಿ ಹೆಚ್ಚು ಸೇವಿಸಲು ಪ್ರಾರಂಭಿಸುವ ಆಹಾರವೆಂದರೆ ಪ್ರೋಟೀನ್.ಆದರೆ  ಕಾರ್ಬೋಹೈಡ್ರೇಟ್ ಅನ್ನು ಕಡಿಮೆ ಮಾಡುತ್ತಾರೆ.ಮೊಸರಿನಲ್ಲಿ ಕಡಿಮೆ ಕಾರ್ಬ್ ಮತ್ತು ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದೆ. ಹಾಗಾಗಿ ಇದು ತೂಕ ನಷ್ಟ ಮಾಡಲು ಬಯಸುವವರಿಗೆ ಪರಿಪೂರ್ಣ ಆಹಾರವಾಗಿದೆ.  

ಈ ರೀತಿಯಾಗಿ ಮೊಸರನ್ನು ಆಹಾರದಲ್ಲಿ ಸೇರಿಸಿ : 
1.ಬೆಳಗಿನ ಉಪಾಹಾರದಲ್ಲಿ ಸ್ಮೂಥಿಯಾಗಿ ತೆಗೆದುಕೊಳ್ಳಿ.
2.ಮೊಸರು ಬಜ್ಜಿ ರೂಪದಲ್ಲಿ ಸೇವಿಸಬಹುದು 
3.ಮೊಸರು ತಿನ್ನುವಾಗ ಸಕ್ಕರೆ ಸೇರಿಸಬೇಡಿ, ಬದಲಿಗೆ ಸರಳ ಮೊಸರು ಅಥವಾ ಜೀರಿಗೆ ಮೆಂತ್ಯೆ ಪುಡಿ ಸೇರಿಸಿದ ಮಸಾಲೆಯುಕ್ತ ಮೊಸರನ್ನು ತಿನ್ನಿರಿ.
4. ಮೊಸರಿಗೆ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿ ತಿನ್ನಬಹುದು.  

ಇದನ್ನೂ ಓದಿ : ಪಾರಿಜಾತ ಹೂವು ಹೀಗೆ ಸೇವಿಸಿದರೆ ಮೂಳೆಗಳಲ್ಲಿ ಸಂಗ್ರಹವಾದ ಯುರಿಕ್ ಆಸಿಡ್ ಕರಗಿ ಹೊರ ಹೋಗುವುದು.. ಕಿಡ್ನಿ ಸ್ಟೋನ್‌ ಸಹ ಒಡೆದು ಪುಡಿಯಾಗುವುದು!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News