ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಮೊಣಗಂಟವರೆಗೆ ಬೆಳೆಯುವುದು ಕೂದಲು !

Coconut Oil For Hair Growth:ಇದರ ಬದಲಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದು ಈ ಲೇಖನದಲ್ಲಿ, ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಮಾಹಿತಿ ಇಲ್ಲಿದೆ.   

Written by - Ranjitha R K | Last Updated : May 20, 2024, 06:08 PM IST
  • ಕೂದಲು ನಮ್ಮ ಸೌಂದರ್ಯದ ಪ್ರಮುಖ ಭಾಗವಾಗಿದೆ.
  • ಉದ್ದ,ಕಪ್ಪು ರೇಷ್ಮೆಯಂಥಹ ಕೂದಲು ಬೇಕು ಎನ್ನುವುದು ಪ್ರತಿಯೊಬ್ಬ ಹೆಣ್ಣು ಮಗಳ ಆಸೆಯಾಗಿರುತ್ತದೆ.
  • ಆದರೆ ಇತ್ತೀಚಿನ ಕೂದಲು ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ.
ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಮೊಣಗಂಟವರೆಗೆ ಬೆಳೆಯುವುದು ಕೂದಲು !  title=

Coconut Oil For Hair Growth : ಕೂದಲು ನಮ್ಮ ಸೌಂದರ್ಯದ ಪ್ರಮುಖ ಭಾಗವಾಗಿದೆ.ಉದ್ದ,ಕಪ್ಪು ರೇಷ್ಮೆಯಂಥಹ ಕೂದಲು ಬೇಕು ಎನ್ನುವುದು ಪ್ರತಿಯೊಬ್ಬ ಹೆಣ್ಣು ಮಗಳ ಆಸೆಯಾಗಿರುತ್ತದೆ.ಆದರೆ, ತಪ್ಪು ಆಹಾರ ಪದ್ಧತಿ, ಕಳಪೆ ಜೀವನಶೈಲಿ, ಮಾಲಿನ್ಯ ಮತ್ತು ತಪ್ಪು ಉತ್ಪನ್ನಗಳ ಬಳಕೆಯಿಂದ ಕೂದಲು ದುರ್ಬಲಗೊಳ್ಳುತ್ತದೆ.ಹೀಗಾಗಿ ಕೂದಲು ವಿಪರೀತವಾಗಿ ಉದುರಲು ಪ್ರಾರಂಭಿಸುತ್ತದೆ. ಕೂದಲ ಉದುರುವಿಕೆಯಿಂದಾಗಿ, ಕೂದಲಿನ ಬೆಳವಣಿಗೆ ಕಡಿಮೆಯಾಗಿ, ಕೂದಲು ತುಂಬಾ ತೆಳುವಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಅನೇಕ ಮಹಿಳೆಯರು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ.ಆದರೆ, ಅಪೇಕ್ಷಿತ ಫಲಿತಾಂಶ ಸಿಗುವುದಿಲ್ಲ. ಬದಲಾಗಿ ಕೆಲವೊಮ್ಮೆ  ಅಡ್ಡಪರಿಣಾಮಗಳು ಗೋಚರಿಸುತ್ತವೆ.ಇದರ ಬದಲಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದು ಈ ಲೇಖನದಲ್ಲಿ, ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಮಾಹಿತಿ ಇಲ್ಲಿದೆ. 

ಕೂದಲು ಉದ್ದ ಬೆಳೆಯುವಂತೆ ಮಾಡಲು ತೆಂಗಿನೆಣ್ಣೆ ಮತ್ತು ಅಲೋವೆರಾ :
ಅಗತ್ಯ ಪದಾರ್ಥಗಳು :

ತೆಂಗಿನ ಎಣ್ಣೆ - 4-5 ಟೀಸ್ಪೂನ್
ಅಲೋವೆರಾ ಜೆಲ್ - 2 ಚಮಚಗಳು

ತಯಾರಿಸುವ ವಿಧಾನ : 
ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ.  ಅದಕ್ಕೆ ಎರಡು ಚಮಚ ಅಲೋವೆರಾ ಜೆಲ್ ಸೇರಿಸಿ.ಈ ಎರಡು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.ಈಗ ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ. ನಂತರ ಸುಮಾರು 2 ಗಂಟೆಗಳ ಕಾಲ ಕೂದಲಿನ ಮೇಲೆ ಹಾಗೆಯೇ ಬಿಡಿ. ಇದಾದ ಮೇಲೆ ಸೌಮ್ಯವಾದ ಶಾಂಪೂ ಸಹಾಯದಿಂದ ಕೂದಲನ್ನು ತೊಳೆಯಿರಿ.ವಾರದಲ್ಲಿ 2 ರಿಂದ 3 ಬಾರಿ ಇದನ್ನು ಬಳಸುವುದರಿಂದ ಕೂದಲು ತ್ವರಿತವಾಗಿ ಉದ್ದ ಮತ್ತು ದಪ್ಪವಾಗಿ ಮಾಡಬಹುದು.

ಇದನ್ನೂ ಓದಿ : ಬೊಜ್ಜು ಮತ್ತು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಲು ಈ ಮೂರು ಆಹಾರ ತಪ್ಪದೆ ಸೇವಿಸಿ...!

ಕೂದಲಿಗೆ ತೆಂಗಿನೆಣ್ಣೆ ಮತ್ತು ಅಲೋವೆರಾದ ಪ್ರಯೋಜನಗಳು : 
ತೆಂಗಿನ ಎಣ್ಣೆಯು ಆರ್ಧ್ರಕ ಗುಣಗಳನ್ನು ಹೊಂದಿದೆ. ಇದು ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಇದಲ್ಲದೆ,ಇದು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಕೂದಲನ್ನು ಮೂಲದಿಂದ ಸ್ವಚ್ಛಗೊಳಿಸುತ್ತದೆ.ಇದು ನೆತ್ತಿಯಿಂದ ಹಾನಿಕಾರಕ ಬ್ಯಾಕ್ಟೀರಿಯಾ, ಕೊಳೆ ಮತ್ತು ತಲೆಹೊಟ್ಟನ್ನು ನಿವಾರಿಸುತ್ತದೆ. ಇದು ಕೂದಲು ಕಿರುಚೀಲಗಳಿಗೆ ಪೋಷಣೆಯನ್ನು ಒದಗಿಸುತ್ತದೆ.ಇದರಿಂದಾಗಿ ಕೂದಲು ಬಲವಾಗಿ, ಉದ್ದನೆ ಬೆಳೆದು ದಪ್ಪವಾಗಿರುತ್ತದೆ.ಕೂದಲಿನ ಬೆಳವಣಿಗೆಯಲ್ಲಿ ಅಲೋವೆರಾ ಕೂಡಾ ತುಂಬಾ ಪರಿಣಾಮಕಾರಿಯಾಗಿದೆ. ಇದು ಕೂದಲಿಗೆ ಪೋಷಣೆ ನೀಡುವುದರ ಜೊತೆಗೆ ಅದನ್ನು ಹೈಡ್ರೇಟ್ ಆಗಿ ಇಡುತ್ತದೆ.ಇದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.ಇದು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ.ಇದರಿಂದ ಕೂದಲು ಉದ್ದ ಮತ್ತು ಸ್ಟ್ರಾಂಗ್ ಆಗುತ್ತದೆ.

ತೆಂಗಿನೆಣ್ಣೆ ಮತ್ತು ಅಲೋವೆರಾವನ್ನು ಹಚ್ಚುವುದರಿಂದ ಕೂದಲಿನ ಈ ಸಮಸ್ಯೆಗಳು ದೂರವಾಗುತ್ತವೆ : 
ಒಣ ಮತ್ತು ಸುಕ್ಕುಗಟ್ಟಿದ ಕೂದಲನ್ನು ಹೋಗಲಾಡಿಸುತ್ತದೆ.
ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬಿಳಿ ಕೂದಲಿನ ಸಮಸ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಕೂದಲು ಉದುರುವುದು ಮತ್ತು ಒಡೆಯುವುದು ನಿಲ್ಲುತ್ತದೆ.
ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಕೂದಲು ದಪ್ಪ ಮತ್ತು ಹೊಳೆಯುತ್ತದೆ.

ಇದನ್ನೂ ಓದಿ : ಕೊಲೆಸ್ಟ್ರಾಲ್ ಹೆಚ್ಚಾದಾಗ ಮಹಿಳೆಯರ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು!

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News