ಆರೋಗ್ಯಕರ ಲಿವರ್ ಡಯಟ್‌ಗಾಗಿ ಇಲ್ಲಿದೆ ಆಹಾರಕ್ಕೆ ಸೇರಿಸಬೇಕಾದ 6 ಸೂಪರ್‌ಫುಡ್‌ಗಳು

Fatty Liver Diet : ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ ನಿಮಗಿದೆಯೇ? ಹಾಗಿದ್ದರೆ ನಿಮ್ಮ ಆಹಾರಕ್ಕೆ ಈ ಸೂಪರ್‌ಫೂಡ್‌ಗಳನ್ನು ಸೇರಿಸಿ.

Written by - Zee Kannada News Desk | Last Updated : Sep 4, 2023, 01:49 PM IST
  • ಯಕೃತ್ತಿನ ಸಮಸ್ಯೆಯನ್ನು ನಿಯಂತ್ರಣಗೊಳಿಸುವಲ್ಲಿ ವಿಟಮಿನ್‌ ʼಸಿʼ ತುಂಬಾ ಸಹಕಾರಿಯಾಗಿದೆ.
  • ಬೀನ್ಸ್‌ ಪ್ರೋಟಿನ್‌ ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.
  • ಹಸಿರುಎಲೆ ತರಕಾರಿ ಸೇವಿಸುವುದರಿಂದ ಕೊಬ್ಬಿನ ಯಕೃತ್ತನ್ನು ನಿಯಂತ್ರಣಗೊಳಿಸುತ್ತದೆ.
ಆರೋಗ್ಯಕರ ಲಿವರ್ ಡಯಟ್‌ಗಾಗಿ ಇಲ್ಲಿದೆ ಆಹಾರಕ್ಕೆ ಸೇರಿಸಬೇಕಾದ 6 ಸೂಪರ್‌ಫುಡ್‌ಗಳು title=

6 Superfoods For Liver Diet:  ಆಹಾರದ ಸೇವನೆಯಲ್ಲಿ ನಿಮ್ಮ ನಿಯಂತ್ರಣ ತಪ್ಪಿದಾಗ ಯಕೃತ್ತು ಕೆಲವು ದೀರ್ಘಕಾಲದ ಅರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತದೆ ಆ ಸಮಸ್ಯೆಗಳಲ್ಲಿ ಕೊಬ್ಬಿನ ಯಕೃತ್ತಿನ ಸಮಸ್ಯೆಯು ಒಂದು. ಈ ಸ್ಥಿತಿಯಲ್ಲಿ ಯಕೃತ್ತು ಹೆಚ್ಚಿನ ಕೊಬ್ಬನ್ನು ಸಂಗ್ರಹಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ನೀಡದಿದ್ದರೆ ಯಕೃತ್ತು ಅಂತಿಮವಾಗಿ ವಿಫಲಗೊಳ್ಳುತ್ತದೆ. ಆದ್ದರಿಂದ ಈ ಸಮಸ್ಯೆಗೆ ಒಂದು ಪರಿಹಾರವೆಂದರೆ ಅಹಾರದಲ್ಲಿನ ಬದಲಾವಣೆ. ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು?
ಈ ಸಮಸ್ಯೆಯ ನಿರ್ವಹಣೆಗಾಗಿ ಆಹಾರಕ್ರಮಕ್ಕೆ ಸೇರಿಸಬೇಕಾದ ಆಹಾರಗಳು ಈ ರೀತಿಯಾಗಿವೆ.

ಇದನ್ನು ಓದಿ- ಹಸಿ ಸೊಪ್ಪು-ತರಕಾರಿಗಳ ಅದ್ಭುತ ಪ್ರಯೋಜನಗಳಿವು

ಹಸಿರು ಎಲೆ ತರಕಾರಿಗಳು
ಇವುಗಳು ನಮ್ಮ ದೇಹಕ್ಕೆ ಬೇಕಾದ ಜೀವಸತ್ವಗಳು, ಖನಿಜಾಂಶಗಳು ಮತ್ತು ನಿರೋಧಕವನ್ನು ಒದಗಿಸುತ್ತದೆ ಮತ್ತು ಆಹಾರದಲ್ಲಿ ಹೆಚ್ಚಾಗಿ ಹಸಿರುಎಲೆ ತರಕಾರಿ ಸೇವಿಸುವುದರಿಂದ ಕೊಬ್ಬಿನ ಯಕೃತ್ತನ್ನು ನಿಯಂತ್ರಣಗೊಳಿಸುತ್ತದೆ.

ಸಿಟ್ರಸ್‌ ಹಣ್ಣುಗಳು
ಯಕೃತ್ತಿನ ಸಮಸ್ಯೆಯನ್ನು ನಿಯಂತ್ರಣಗೊಳಿಸುವಲ್ಲಿ ವಿಟಮಿನ್‌ ʼಸಿʼ ತುಂಬಾ ಸಹಕಾರಿಯಾಗಿದ್ದು, ಸಿಟ್ರಸ್‌ ಹಣ್ಣು ವಿಟಮಿನ್‌ ʼಸಿʼಯನ್ನು ಹೆಚ್ಚಿನ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ನಿಂಬೆ ಹಣ್ಣು ದೈನಂದಿನ ಆಹಾರದಲ್ಲಿ ಬಳಸುವುದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ.

ಬೀನ್ಸ್‌ 
ಅಹಾರಗಳಲ್ಲಿ ಹೆಚ್ಚಾಗಿ ಬೇಳೆಕಾಳುಗಳನ್ನು ಸೇವಿಸುವುದು. ಪ್ರತಿದಿನ ಊಟದಲ್ಲಿ ಬೀನ್ಸ್‌ ಉಪಯೋಗಿಸುವುದು ಮತ್ತು ಇದು ಪ್ರೋಟಿನ್‌ ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.

ಆಲಿವ್‌ ಎಣ್ಣೆ 
ಸಾಮಾನ್ಯವಾಗಿ ಪ್ರತಿದಿನ ಬಳಸುವ ಎಣ್ಣೆಯ ಬದಲಿಗೆ ಆಲಿವ್‌ ಎಣ್ಣೆ ಬಳಸುವುದು ಯಕೃತ್ತಿಗೆ ತುಂಬಾ ಪ್ರಯೋಜನಾಕಾರಿ.

ಬೀಜಗಳು 
ಜಂಕ್‌ಫುಡ್‌ ಮತ್ತು ಸಿಹಿ ತಿಂಡಿಯ ಬದಲು ಪ್ರತಿದಿನ ಬೀಜಗಳನ್ನು ಸೇವಿಸಲು ಪ್ರಯತ್ನಿಸಿ. ಇದು ಪ್ರೋಟೀನ್‌ ಮತ್ತು ಆರೋಗ್ಯಕರ ಕೊಬ್ಬಿನಾಂಶಕ್ಕೆ ಸಹಕಾರಿಯಾಗಿದೆ.

ಬೆರ್ರಿ ಹಣ್ಣುಗಳು
ಇವುಗಳು ಯಕೃತ್ತ ಸಮಸ್ಯೆಯನ್ನು ನಿಯಂತ್ರಿಸುವುದಲ್ಲದೇ ಅದರೊಂದಿಗೆ ಊಟಮಾಡುವಾಗ ತಾಜಾ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಮತ್ತು ಇದು ಕಡಿಮೆ ಕ್ಯಾಲೋರಿ ಮತು ಕೊಬ್ಬಿನಾಂಶವನ್ನು ಹೊಂದಿರುತ್ತದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News