Family Star: ಶೀಘ್ರದಲ್ಲೇ ತೆರೆಗೆ ಬರಲಿದೆ ಫ್ಯಾಮಿಲಿ ಸ್ಟಾರ್‌: ವಿಜಯ್‌ ಹೇಳಿದ್ದೇನು?

Family Star Update: ತೆಲುಗು ಚಿತ್ರರಂಗದ ನಟ ವಿಜಯ್‌ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್‌ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಹಾಗಾದ್ರೇ ಈ ಚಿತ್ರ ತೆರೆಗೆ ಅಪ್ಪಳಿಸುವುದು ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Zee Kannada News Desk | Last Updated : Mar 17, 2024, 10:17 AM IST
  • ವಿಜಯ್‌ ದೇವರಕೊಂಡ ಅಭಿನಯದ ಖುಷಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಚಿತ್ರದ ಬಳಿಕ ಈ ನಟ ರೌಡಿ ಸ್ಟಾರ್‌ನಿಂದ ಫ್ಯಾಮಿಲಿ ಸ್ಟಾರ್ ಆಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.
  • ಗೀತಾ ಗೋವಿಂದಂ ಸಿನಿಮಾದ ಬಳಿಕ ಡೈರೆಕ್ಟರ್‌ ಪರಶುರಾಮ್ ಮತ್ತೆ ವಿಜಯ್‌ ದೇವರಕೊಂಡಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ.
  • ಬಹುನಿರೀಕ್ಷಿತ ಫ್ಯಾಮಿಲಿ ಸ್ಟಾರ್‌ ಚಿತ್ರ ಸಂಕ್ರಾಂತಿಯಂದು ರಿಲೀಸ್‌ ಆಗಬೇಕಿತ್ತು. ಆದರೆ ಚಿತ್ರೀಕರಣ ಪೂರ್ಣಗೊಳ್ಳದ ಕಾರಣದಿಂದಾಗಿ ಈ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಲಾಗಿತ್ತು.
Family Star: ಶೀಘ್ರದಲ್ಲೇ ತೆರೆಗೆ ಬರಲಿದೆ ಫ್ಯಾಮಿಲಿ ಸ್ಟಾರ್‌: ವಿಜಯ್‌ ಹೇಳಿದ್ದೇನು? title=

Family Star Movie Release Date: ಟಾಲಿವುಡ್‌ ಸ್ಟಾರ್‌ ನಟ ವಿಜಯ್‌ ದೇವರಕೊಂಡ ಲೈಗರ್ ಸಿನಿಮಾದಿಂದ ಸೋಲನ್ನು ಕಂಡು, ಕಳೆದ ವರ್ಷ ಸೆಪ್ಟೆಂಬರ್ 1 ತೆರೆಕಂಡ ಖುಷಿ ಚಿತ್ರಕ್ಕೆ ಗೆಲುವನ್ನು ಬೀರಿದ್ದಾರೆ. ವಿಜಯ್‌ ದೇವರಕೊಂಡ ಅಭಿನಯದ ಖುಷಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈ ಚಿತ್ರದ ಬಳಿಕ ಈ ನಟ ರೌಡಿ ಸ್ಟಾರ್‌ನಿಂದ ಫ್ಯಾಮಿಲಿ ಸ್ಟಾರ್ ಆಗಿ ತೆರೆಗೆ ಬರಲು ಸಜ್ಜಾಗಿದ್ದಾರೆ.

ಹೌದು.. ನಟ ವಿಜಯ್‌ ದೇವಕೊಂಡ ನಟಿಸಿರುವ ಫ್ಯಾಮಿಲಿ ಸ್ಟಾರ್ ಎಂಬ ಫ್ಯಾಮಿಲಿ ಎಂಟರ್ಟೈನ್ಮೆಂಟ್  ಸಿನಿಮಾ ತೆರೆಗೆ ಅಪ್ಪಳಿಸಲು ರೆಡಿಯಾಗಿದೆ. ಈ ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಮೃಣಾಲ್ ಠಾಕೂರ್ ಬಣ್ಣ ಹಚ್ಚಿದ್ದಾರೆ. ಗೀತಾ ಗೋವಿಂದಂ ಸಿನಿಮಾದ ಬಳಿಕ ಡೈರೆಕ್ಟರ್‌ ಪರಶುರಾಮ್ ಮತ್ತೆ ವಿಜಯ್‌ ದೇವರಕೊಂಡಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Vijay Deverakonda (@thedeverakonda)

ಇದನ್ನೂ ಓದಿ: ಮರೆಯಲಾಗದ ನೆನಪು ಅಪ್ಪು: ಕನ್ನಡ ಕಂದ ದಿವಂಗತ ಪುನೀತ್‌ ರಾಜ್‌ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ!!

ಫ್ಯಾಮಿಲಿ ಸ್ಟಾರ್ ರಿಲೀಸ್‌ ಡೇಟ್‌ ಹತ್ತಿರವಾಗುತ್ತಿದ್ದಂತೆ, ಸಿನಿತಂಡ ಹೊಸ ಹೊಸ ಅಪ್‌ಡೇಟ್‌ಗಳನ್ನು ನೀಡುತ್ತಿತ್ತು. ಇದೀಗ ಈ ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಸ್ವತಃ ವಿಜಯ್‌ ದೇವರಕೊಂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ವಿಡಿಯೋ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಗ್ಲಿಮ್ಸ್‌ ಹಾಗೂ ಟೀಸರ್‌ ಫ್ಯಾನ್ಸ್ಸ ಗಮನ ಸೆಳೆದಿದೆ. ಈ ಸಿನಿಮಾ ಇದೇ ಏಪ್ರಿಲ್ 5 ರಂದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ರಾರಾಜಿಸಲಿದೆ.

ಬಹುನಿರೀಕ್ಷಿತ ಫ್ಯಾಮಿಲಿ ಸ್ಟಾರ್‌ ಚಿತ್ರ ಸಂಕ್ರಾಂತಿಯಂದು ರಿಲೀಸ್‌ ಆಗಬೇಕಿತ್ತು. ಆದರೆ ಚಿತ್ರೀಕರಣ ಪೂರ್ಣಗೊಳ್ಳದ ಕಾರಣದಿಂದಾಗಿ ಈ ಸಿನಿಮಾದ ರಿಲೀಸ್‌ ಡೇಟ್‌ ಮುಂದೂಡಲಾಗಿತ್ತು. ಬಹಳ ದಿನಗಳಿಂದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಫಾಮಿಲಿ ಸ್ಟಾರ್‌ ಸಿನಿಮಾ ಮುಂದಿನ ತಿಂಗಳು ತೆರೆ ಮೇಲೆ ಮಿಂಚಲಿದ್ದು, ಪೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
 

Trending News