ಈ ಫೋಟೋದಲ್ಲಿ ಕೇಕ್‌ ಕಟ್‌ ಮಾಡುತ್ತಿರುವ ನಟನ ಬರ್ತ್‌ ಡೇ ಇವತ್ತು..! ಯಾರಿರಬಹುದು..?

HBD Vijay Devarakonda : ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, ವಿಜಯ್‌ ಬಾಲ್ಯದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.

Written by - Krishna N K | Last Updated : May 9, 2024, 07:18 PM IST
    • ಇಂದು ರೌಡಿ ಬೇಬಿ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ
    • ಅಣ್ಣನ ಬಾಲ್ಯದ ಫೋಟೋ ಹಂಚಿಕೊಂಡ ಆನಂದ್‌ ದೇವರಕೊಂಡ
    • ಫೋಟೋ ಜೊತೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಆನಂದ್‌
ಈ ಫೋಟೋದಲ್ಲಿ ಕೇಕ್‌ ಕಟ್‌ ಮಾಡುತ್ತಿರುವ ನಟನ ಬರ್ತ್‌ ಡೇ ಇವತ್ತು..! ಯಾರಿರಬಹುದು..? title=

Vijay Devarakonda Childhood pics : ಇಂದು ರೌಡಿ ಹೀರೋ ವಿಜಯ್ ದೇವರಕೊಂಡ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಿನಿ ಗಣ್ಯರು ಹಾಗೂ ಅಭಿಮಾನಿಗಳು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ವಿಜಯ್ ಕೂಡ ಹೊಸ ಸಿನಿಮಾ ಅಪ್ಡೇಟ್‌ಗಳನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಅವರ ಬಾಲ್ಯದ ಫೊಟೋಸ್‌ ವೈರಲ್‌ ಆಗಿವೆ.

ಹೌದು.. ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಕಿರಿಯ ಸಹೋದರ ಆನಂದ್ ದೇವರಕೊಂಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಜಯ್‌ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ :ʼಕಣ್ಣಪ್ಪʼ ರೆಂಜ್‌ ಹೆಚ್ಚಿಸಿತು ಯಂಗ್‌ ರೆಬಲ್‌ ಸ್ಟಾರ್‌ ಎಂಟ್ರಿ..! ವಿಷ್ಣು ಮಂಚು ಸಿನಿಮಾದಲ್ಲಿ ಪ್ರಭಾಸ್‌

ʼಹುಟ್ಟುಹಬ್ಬದ ಶುಭಾಶಯಗಳು ಸಹೋದರ.. ಹೇಗೆ ಬದುಕಬೇಕು ಎಂಬುದಕ್ಕೆ ನೀವು ನನಗೆ ವಿಶೇಷ ಉದಾಹರಣೆ. ನಾನು ನಿಮ್ಮಿಂದ ಬಲಶಾಲಿ, ಶಿಸ್ತು, ನಂಬಿಕೆ, ಪ್ರಾಮಾಣಿಕತೆ ಮತ್ತು ಇನ್ನೂ ಹೆಚ್ಚಿನದನ್ನು ಕಲಿತಿದ್ದೇನೆ. ಪ್ರತಿ ಬಾರಿ ನೀವು ಹಿನ್ನಡೆಯನ್ನು ಎದುರಿಸಿದಾಗ, ನೀವು ತುಂಬಾ ಬಲವಾಗಿ ಮರಳುತ್ತೀರಿʼ ಎಂದು ಅಣ್ಣ ವಿಜಯ್ ಬಗ್ಗೆ ಆನಂದ್‌ ಬರೆದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪೆಳ್ಳಿ ಚುಪಲು ಚಿತ್ರದ ಮೂಲಕ ಹೀರೋ ಆಗಿ ಸಿನಿ ಜರ್ನಿ ಪ್ರಾರಂಭಿಸಿದ ವಿಜಯ್, ʼಅರ್ಜುನ್ ರೆಡ್ಡಿʼ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ಈ ಸಿನಿಮಾದಿಂದ ಸೌತ್ ಇಂಡಸ್ಟ್ರಿಯಲ್ಲಿ ವಿಜಯ್ ಕ್ರೇಜ್ ಹೆಚ್ಚಾಯಿತು. ಇದರ ಬೆನ್ನಲ್ಲೆ, ಗೀತ ಗೋವಿಂದಂ ಚಿತ್ರದ ಮೂಲಕ ಪ್ಯಾಮಿಲಿ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು. 

ಇದನ್ನೂ ಓದಿ :ಈ ಸೂಪರ್‌ ಸ್ಟಾರ್‌ ನಟ ಒಂದು ಕಾಲದಲ್ಲಿ ʼಮುಖ ನೋಡಿ.. ಇವನು ಹೀರೋ ನಾ..?ʼ.. ಅಂತ ಟ್ರೋಲ್‌ ಆಗಿದ್ದರು.!

ತೆಲುಗಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ವಿಜಯ್ ಇತ್ತೀಚೆಗಷ್ಟೇ ಫ್ಯಾಮಿಲಿ ಸ್ಟಾರ್ ಚಿತ್ರದ ಮೂಲಕ ಥಿಯೇಟರ್ ಗಳಲ್ಲಿ ಹವಾ ಸೃಷ್ಟಿಸಿದ್ದರು. ಸದ್ಯ ವಿಜಯ್ ಕೈಯಲ್ಲಿ ಮೂರು ಸಿನಿಮಾಗಳಿವೆ. ನಿರ್ದೇಶಕ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ VD12 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಇನ್ನೆರಡು ಚಿತ್ರಗಳು ಶೀಘ್ರದಲ್ಲೇ ಆರಂಭವಾಗಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News